ಕನಸಾಗಿಯೇ ಉಳಿದ ಚಿತ್ರನಗರಿ ಯೋಜನೆ: ಸರ್ಕಾರದ ಮುಂದೆ ಬೇಡಿಕೆ ಇಡಲು ಚಿತ್ರರಂಗ ಸಿದ್ಧತೆ

By Kannadaprabha News  |  First Published May 24, 2023, 8:22 AM IST

ಕಳೆದ 49 ವರ್ಷಗಳಿಂದ ಕನಸಾಗಿಯೇ ಉಳಿದಿರುವ ಚಿತ್ರನಗರಿ ನಿರ್ಮಾಣ ಯೋಜನೆ ಬೇಡಿಕೆಯನ್ನು ಹೊಸ ಸರ್ಕಾರದ ಮುಂದಿಡಲು ಚಿತ್ರರಂಗ ನಿರ್ಧರಿಸಿದೆ.


ಆರ್‌.ಕೇಶವಮೂರ್ತಿ

ಬೆಂಗಳೂರು (ಮೇ.24): ಕಳೆದ 49 ವರ್ಷಗಳಿಂದ ಕನಸಾಗಿಯೇ ಉಳಿದಿರುವ ಚಿತ್ರನಗರಿ ನಿರ್ಮಾಣ ಯೋಜನೆ ಬೇಡಿಕೆಯನ್ನು ಹೊಸ ಸರ್ಕಾರದ ಮುಂದಿಡಲು ಚಿತ್ರರಂಗ ನಿರ್ಧರಿಸಿದೆ. ಸಂಪುಟ ರಚನೆ ಆಗುತ್ತಿದ್ದಂತೆ ಚಿತ್ರನಗರಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ ಮಾ ಹರೀಶ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಗತ್ಯ ಇರುವ 125 ಎಕರೆ ಜಮೀನನ್ನು ಮೈಸೂರು ಏರ್‌ಪೋರ್ಚ್‌ನಿಂದ 4 ಕಿ.ಮೀ ದೂರದಲ್ಲಿರುವ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ಗುರುತಿಸಿದ್ದರು. ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾದ ವರುಣಾ ವ್ಯಾಪ್ತಿಯಲ್ಲೇ ಬರಲಿದೆ. ಇದಕ್ಕೂ ಮೊದಲು ಸಮ್ಮಿಶ್ರ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಚಿತ್ರನಗರಿ ಯೋಜನೆಯನ್ನು ರಾಮನಗರದಲ್ಲಿ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ, ಮೈಸೂರಿನಲ್ಲೇ ಚಿತ್ರನಗರಿ ಬೇಕು ಎಂಬುದು ಚಿತ್ರರಂಗದ ಒತ್ತಾಯ ಆಗಿತ್ತು. ಹೀಗೆ ದಾಖಲೆ, ಭರವಸೆಗಳಲ್ಲಿ ಬೆಂಗಳೂರು, ಹೆಸರಘಟ್ಟ, ಬಿಡದಿ, ರಾಮನಗರ ಸುತ್ತಾಡಿಕೊಂಡಿದ್ದ ಚಿತ್ರನಗರಿ ಈಗ ಮೈಸೂರಿಗೆ ಬಂದಿದೆ! ಯೋಜನೆಗೆ ಅಗತ್ಯ ಇರುವ ಜಮೀನು ಗುರುತಿಸುವುದು ಹೊರತಾಗಿ ಬೇರೆ ಏನೂ ಕೆಲಸಗಳು ಆಗಿಲ್ಲ.

Bengaluru: ನಗರದಲ್ಲಿ ಮತ್ತೆ ಒತ್ತುವರಿ ತೆರವು ಕಾರ್ಯಾಚರಣೆ: ಸಿಎಂ ಸಿದ್ದರಾಮಯ್ಯ

ಸಿನಿಮಾ ಟೂರಿಸಂ ಅಭಿವೃದ್ಧಿ ಆಗುವ ಜತೆಗೆ ಚಿತ್ರನಗರಿ ನಿರ್ಮಾಣಗೊಂಡರೆ ಪರೋಕ್ಷವಾಗಿ ಹಾಗೂ ನೇರವಾಗಿ 25 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದು ಚಿತ್ರರಂಗದ ಲೆಕ್ಕಾಚಾರ. ಚಿತ್ರನಗರಿಯಲ್ಲಿ 6 ಜೋನ್‌ಗಳಿವೆ. ಈ ಪೈಕಿ ಪ್ರೊಡ್ಯೂಸರ್‌ ಜೋನ್‌ನಲ್ಲಿ ಶೂಟಿಂಗ್‌ ಫೆä್ಲೕರ್ಸ್‌, ಔಟ್‌ಡೋರ್‌ ಶೂಟಿಂಗ್‌ ಸೆಟ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಜೋನ್‌, ಫಿಲಂ ಇನ್ಸ್‌ಟಿಟ್ಯೂಟ್‌, ಮೂಲ ಸೌಕರ್ಯಗಳ ಜೋನ್‌, ಮನರಂಜನಾ ಜೋನ್‌, ರಸ್ತೆಗಳು, ಗ್ರೀನ್‌ ಪಾರ್ಕ್ಗಳು, ವಾಟರ್‌ ಫಾಲ್ಸ್‌ ಒಳಗೊಂಡಿದೆ.

ಈ ಹೊಸ ಸರ್ಕಾರದಲ್ಲಿ ಚಿತ್ರನಗರಿ ಯೋಜನೆಗೆ ಕಾಯಲ್ಪ ಕೊಡಿಸಲೇಬೇಕು ಎಂದು ನಿರ್ಧರಿಸಿರುವ ಚಿತ್ರರಂಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಹೊಸ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೀರ್ಮಾನಿಸಿದೆ. ಅಧಿವೇಶನದಲ್ಲಿ ಅನುಮೋದನೆಗೊಂಡ ಈ ಯೋಜನೆಗೆ ಬೇಕಾಗಿರುವ ಜಮೀನು ಗುತ್ತಿಗೆ ನಿಗದಿ ಆಗಬೇಕಾಗಿದೆ. ಚಿತ್ರರಂಗ ರೂಪಿಸಿಕೊಂಡಿರುವ ಫಿಲಂ ಸಿಟಿ ಬ್ಲೂ ಪ್ರಿಂಟ್‌ಗೂ ಒಪ್ಪಿಗೆ ಕೊಡಬೇಕಿದೆ. ಇವಿಷ್ಟುಕೆಲಸಗಳಾದರೆ ಬಹುತೇಕ ಚಿತ್ರನಗರಿ ಯೋಜನೆ ಜಾರಿಯಾದಂತೆಯೇ ಎಂಬುದು ಚಿತ್ರೋದ್ಯಮದ ಅನಿಸಿಕೆ.

ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳ ಹೋರಾಟ ನ್ಯಾಯಯುತ: ನಟ ಕಿಶೋರ್‌ ಬೆಂಬಲ

1974ರಲ್ಲಿ ದೇವರಾಜ್‌ ಅರಸು ಘೋಷಣೆ: ಕನ್ನಡ ಚಿತ್ರರಂಗದಲ್ಲಿ ಚಿತ್ರನಗರಿ ನಿರ್ಮಾಣದ ಯೋಜನೆ ದಿ.ದೇವರಾಜ್‌ ಅರಸು ಮುಖ್ಯಮಂತ್ರಿ ಆಗಿದ್ದಾಗ 1974ರಲ್ಲಿ ಘೋಷಣೆ ಆಗಿದ್ದ ಯೋಜನೆ. ‘ನಮ್ಮ ತಂದೆ ಶಂಕರ್‌ ಸಿಂಗ್‌, ಕೆಂಪರಾಜ್‌ ಅರಸ್‌, ಚದುರಂಗ ಅವರಿಗೆ ದೇವರಾಜ್‌ ಅರಸು ಆತ್ಮೀಯರು ಆಗಿದ್ದರು. ಈ ಹಂತದಲ್ಲೇ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಮನವಿ ಮಾಡಿಕೊಂಡರು. ಚಿತ್ರರಂಗದವರ ಮನವಿಗೆ ಸ್ಪಂದಿಸಿದ ದೇವರಾಜ್‌ ಅರಸು 1974ರಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಘೋಷಣೆ ಮಾಡಿದರು’ ಎನ್ನುತ್ತಾರೆ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು.

click me!