ಇಂಟರ್‌ನೆಟ್‌ ಸೆನ್ಸೇಷನ್ ಬಾಬಾ ಜಾಕ್ಸನ್‌ ಜೊತೆ ಪೊಲೀಸ್‌ ಪೇದೆಯ ಬಿಂದಾಸ್ ಡಾನ್ಸ್‌

By Anusha Kb  |  First Published May 17, 2023, 11:54 AM IST

ಇಂಟರ್‌ನೆಟ್ ಸೆನ್ಸೇಷನ್ ಬಾಬಾ ಜಾಕ್ಸನ್ ಲೆಜೆಂಡ್ ಮೈಕೆಲ್ ಜಾಕ್ಸನ್ ರೀತಿ ಡಾನ್ಸ್ ಮಾಡುವುದಕ್ಕೆ ಫೇಮಸ್ ಅವರು ತಮ್ಮ ಸಖತ್ ಡಾನ್ಸ್ ಮೂವ್ಸ್‌ಗಳಿಂದ ಇಂಟರ್‌ನೆಟ್‌ನಲ್ಲಿ ಸದಾ ಕಿಚ್ಚು ಹಚ್ಚುತ್ತಿರುತ್ತಾರೆ.


ಮುಂಬೈ: ಇಂಟರ್‌ನೆಟ್ ಸೆನ್ಸೇಷನ್ ಬಾಬಾ ಜಾಕ್ಸನ್ ಲೆಜೆಂಡ್ ಮೈಕೆಲ್ ಜಾಕ್ಸನ್ ರೀತಿ ಡಾನ್ಸ್ ಮಾಡುವುದಕ್ಕೆ ಫೇಮಸ್ ಅವರು ತಮ್ಮ ಸಖತ್ ಡಾನ್ಸ್ ಮೂವ್ಸ್‌ಗಳಿಂದ ಇಂಟರ್‌ನೆಟ್‌ನಲ್ಲಿ ಸದಾ ಕಿಚ್ಚು ಹಚ್ಚುತ್ತಿರುತ್ತಾರೆ. ಅವರೀಗ ಮುಂಬೈ ಪೊಲೀಸ್ ಅಧಿಕಾರಿ ಜೊತೆಗೂಡಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಇವರಿಬ್ಬರ ಜುಗಲ್ ಬಂಧಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ರಾಜಸ್ತಾನದ 19 ವರ್ಷ ಪ್ರಾಯದ ಈ  ಡಾನ್ಸರ್ ಬಾಬಾ ಜಾಕ್ಸನ್ ತನ್ನ ಫಾಲೋವರ್‌ಗಳನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ಖ್ಯಾತ ಡಾನ್ಸರ್ ಮೈಕೆಲ್ ಜಾಕ್ಸನ್‌ ಸ್ಟೈಲ್ ರೀತಿಯಲ್ಲಿಯೇ ಡಾನ್ಸ್ ಮಾಡುವ ಇವರು ಇನ್ಸ್ಟಾಗ್ರಾಮ್‌ನಲ್ಲಿ ಬಾಬಾ ಜಾಕ್ಸನ್ ಎಂಬ ಖಾತೆಯನ್ನು ಹೊಂದಿದ್ದು, ಡಾನ್ಸ್‌ ವೀಡಿಯೋಗಳ ಮೂಲಕ ಸಾಕಷ್ಟು  ಅಭಿಮಾನಿಗಳನ್ನು ಗಳಿಸಿದ್ದಾರೆ.

ಈಗ ಬಾಬಾ ಜಾಕ್ಸನ್  ಮುಂಬೈ ಪೊಲೀಸ್ ಅಧಿಕಾರಿ ಅಮೊಲ್ ಕಾಂಬ್ಳೆ ಜೊತೆಗೂಡಿ ಎನರ್ಜಿಟಿಕ್ ಆಗಿ ಡಾನ್ಸ್ ಮಾಡಿದ್ದು, ಇವರಿಬ್ಬರ ಡಾನ್ಸ್‌ಗೆ ಇಂಟರ್‌ನೆಟ್ ಥಮ್ಸ್‌ಅಪ್ ಎಂದಿದೆ.  ಪೊಲೀಸ್ ಅಧಿಕಾರಿ ಅಮೋಲ್ ಕಾಂಬ್ಳೆ ಈ ಹಿಂದೆಯೂ ತಮ್ಮ ಪೊಲೀಸ್ ವೃತ್ತಿಗಿಂತ  ಡಾನ್ಸ್‌ನ ಆಸಕ್ತಿಯ ಕಾರಣಕ್ಕೆ ಸಖತ್ ಫೇಮಸ್ ಆಗಿದ್ದರು. ಈಗ ಬಾಬಾ ಜಾಕ್ಸನ್‌ ತಾವು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವೀಡಿಯೋದಲ್ಲಿ ಜಾಕ್ಸನ್ ಹಾಗೂ ಅಮೋಲ್ ಕಾಂಬ್ಳೆ ಇಬ್ಬರು ಬಿಂದಾಸ್ ಆಗಿ ಕುಣಿಯುತ್ತಿದ್ದಾರೆ. ಇನ್ನು ಗಮನಾರ್ಹವೆಂದರೆ ಅಮೋಲ್  ಕಾಂಬ್ಳೆ ಪೊಲೀಸ್ ಸಮವಸ್ತ್ರ ಧರಿಸದೇ ನಾಗರಿಕ ಧಿರಿಸಿನಲ್ಲಿದ್ದಾರೆ. ಈ ವಿಡಿಯೋವನ್ನು 1 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ಇವರಿಬ್ಬರ ಜುಗಲ್‌ಬಂಧಿಗೆ ಭೇಷ್ ಎಂದಿದ್ದಾರೆ. ಅನೇಕರು ಇಂತಹ ವೀಡಿಯೋಗಳನ್ನು ಇನ್ನಷ್ಟು ಮಾಡುವಂತೆ ಆಗ್ರಹಿಸಿದ್ದಾರೆ. 

Tap to resize

Latest Videos

ಸ್ಟೂಡೆಂಟ್ಸ್‌ ಜೊತೆ ಅಶ್ಲೀಲ ಟಿಕ್‌ಟಾಕ್‌ ಡ್ಯಾನ್ಸ್‌, ಇಂಗ್ಲಿಷ್ ಟೀಚರ್‌ ವಜಾ!

ಅನೇಕರು ಈ ವಯಸ್ಸಿನಲ್ಲೂ ಅಮೋಲ್ ಕಾಂಬ್ಳೆಯವರು ಕೆಲವು ಕಷ್ಟಕರ ಸ್ಪೆಪ್‌ಗಳನ್ನು ಬಿಂದಾಸ್ ಆಗಿ ಮಾಡುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದು,  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಐ ಲವ್‌ ಯು ಅಂಕಲ್ ಎಂದು ಕಾಮೆಂಟ್ ಮಾಡಿದ್ದು, ಕಾಂಬ್ಳೆ ಡಾನ್ಸ್‌ನ್ನು ಕೊಂಡಾಡಿದ್ದಾರೆ. ಮತ್ತೆ ಕೆಲವರು ಅಂಕಲ್ ರಾಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. 

ದೀಪಿಕಾ ಆಯ್ತು ಈಗ ಮಾಧುರಿ- ಕರಿಶ್ಮಾ ಹಾಗೆ ಮಸ್ತ್ ಡಾನ್ಸ್ ಮಾಡಿದ ಪ್ಲಸ್ ಸೈಜ್ ಯುವತಿಯರು: ವಿಡಿಯೋ ವೈರಲ್

ಇಂಡಿಯಾ ಗಾಟ್ ಟಾಲೆಂಟ್' ರನ್ಸರ್‌ಗಳ ಬಿಂದಾಸ್ ಡಾನ್ಸ್‌

ಇತ್ತೀಚೆಗಂತೂ ಎಲ್ಲಿ ನೋಡಿದರಲ್ಲಿ ಸೋಶೀಯಲ್ ಮೀಡಿಯಾ ಸ್ಟಾರ್‌ಗಳ ಹಾವಳಿ. ಇವರು ಸಾರ್ವಜನಿಕ ಸ್ಥಳವೆಂಬುವುದನ್ನು ನೋಡದೇ ರೈಲು ಬಸ್‌ಗಳಲ್ಲಿ ಮೆಟ್ರೋ ಇತ್ಯಾದಿ ಸಾರ್ವಜನಿಕ ಸಾರಿಗೆಯಲ್ಲಿ ಡಾನ್ಸ್ ಮಾಡಿ  ಇನ್ಸ್ಟಾಗ್ರಾಮ್ ಮುಂತಾದ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ವಿಡಿಯೋ ಹಾಕುವುದು ಸಾಮಾನ್ಯ ಎನಿಸಿಬಿಟ್ಟಿದೆ. ಕೆಲ ದಿನಗಳ ಹಿಂದೆ  ಭಾರತೀಯ ರೈಲ್ವೆಗೆ ಸೇರಿದ ರೈಲೊಂದರಲ್ಲಿ ಯುವತಿಯರ ಟೀಮ್ ಒಂದು ಸಖತ್ ಆಗಿ ಡಾನ್ಸ್‌ ಮಾಡ್ತಿರುವ ವಿಡಿಯೋವೊಂದು ವೈರಲ್ ಆಗಿ ಎಲ್ಲರ ಸೆಳೆದಿತ್ತು.

ಯುವತಿಯರ ಗುಂಪೊಂದು ರೈಲಿನಲ್ಲಿ ಅಪ್ಪರ್ ಬರ್ತ್(Upper Berth), ಲೋವರ್ ಬರ್ತ್ ವಿಂಡೋ ಸೀಟ್‌ಗಳಲ್ಲೆಲ್ಲಾ ಕುಳಿತುಕೊಂಡು ಕುಳಿತಲ್ಲಿಯೇ ಸಖತ್ ಆಗಿ ಡಾನ್ಸ್ ಮಾಡಿದ್ದರು. ವಿಡಿಯೋದ ಮೊದಲಿಗೆ ಅಪ್ಪರ್ ಬರ್ತ್‌ನಲ್ಲಿ ಮಲಗಿಕೊಂಡೆ ಯುವತಿಯೊಬ್ಬಳು ಡಾನ್ಸ್ ಮಾಡುತ್ತಿದ್ದು, ನಂತರ ಕ್ಯಾಮರಾವೂ ರೈಲಿನ ಪ್ಯಾಸೇಜ್ ಬಳಿ ನಿಂತು ಡಾನ್ಸ್ ಮಾಡುತ್ತಿರುವ ಹುಡುಗಿಯತ್ತ ಹೊರಳುತ್ತದೆ. ನಂತರ ಅಪ್ಪರ್‌ ಬರ್ತ್‌ನಲ್ಲಿ ಇರುವ ಎಲ್ಲಾ ಹುಡುಗಿಯರತ್ತ ವಾಲುವ ಕ್ಯಾಮರಾ ತಾವಿದ್ದಲ್ಲೇ ಮಾಡುವ ನೃತ್ಯವನ್ನು(Dance) ಸೆರೆ ಹಿಡಿದಿದೆ.  ಎಲ್ಲರೂ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ಕೊನೆಯಲ್ಲಿ ಎಲ್ಲರೂ ಪ್ಯಾಸೇಜ್‌ನಲ್ಲಿ ಸೇರಿ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಾರೆ. ಈ ವಿಡಿಯೋ ಈಗ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದೆ. 

click me!