ಸದ್ಯ ಯುವ ರಾಜ್‌ಕುಮಾರ್ ಪತ್ನಿ ದೊಡ್ಮನೆಯಿಂದ ದೂರವೇ ಇದ್ದಾರೆ ಎನ್ನಲಾಗಿದೆ. ಸಿಕ್ಕ ಮಾಹಿತಿ ಪ್ರಕಾರ ಶ್ರೀದೇವಿ ಭೈರಪ್ಪ
ಅವರು ವಿದೇಶದಲ್ಲಿ ಇದ್ದಾರೆ. ಅಲ್ಲಿಂದಲೇ ಅವರು ಮಾತುಕತೆ ಮೂಲಕ ವಿಚ್ಛೇದನಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ.
ಸ್ಯಾಂಡಲ್‌ವುಡ್‌ನ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ (Yuva Rajkumar) ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಇಬ್ಬರೂ ಒಪ್ಪಿ, ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿದೆ. ಎಂ ಸಿ ಆಕ್ಟ್ ಸೆಕ್ಷನ್ (13 (1) (ia) ಅಡಿಯಲ್ಲಿ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಜೂನ್ 6 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಮುಂದಿನ ಬೆಳವಣಿಗೆ ಏನಾಗಬಹುದು ಎಂಬ ಕುತೂಹಲಕ್ಕೆ ಈ ಘಟನೆ ಎಡೆ ಮಾಡಿಕೊಟ್ಟಿದೆ.
ಸದ್ಯ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ದೊಡ್ಮನೆಯಿಂದ ದೂರವೇ ಇದ್ದಾರೆ ಎನ್ನಲಾಗಿದೆ. ಸಿಕ್ಕ ಮಾಹಿತಿ ಪ್ರಕಾರ ಶ್ರೀದೇವಿ ಭೈರಪ್ಪ ಸದ್ಯ ಅವರು ವಿದೇಶದಲ್ಲಿ ಇದ್ದಾರೆ. ಅಲ್ಲಿಂದಲೇ ಅವರು ಮಾತುಕತೆ ಮೂಲಕ ವಿಚ್ಛೇದನಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ಇದೀಗ, ಅಧಿಕೃತವಾಗಿ ವಿಚ್ಚೇದನ ಪಡೆಯಲು ದಂಪತಿ ನಿರ್ಧಾರ ಮಾಡಿಯಾಗಿದೆ.
ಧಿಡೀರನೇ ಸುದ್ದಿಗೋಷ್ಠಿ ಕರೆದ ಚಂದನ್ ಶೆಟ್ಟಿ ನಿವೇದಿತಾ ಗೌಡ; ಏನಿರಬಹುದು ಅರ್ಜೆಂಟ್?
ಕಳೆದ 6 ತಿಂಗಳಿಂದ ದೊಡ್ಮನೆ ಕುಟುಂಬದಿಂದ ದೂರ ಉಳಿದಿರುವ ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್ ಜತೆ ಸಂಸಾರ ಮಾಡಿಕೊಂಡಿಲ್ಲ. ಒಂದು ವರ್ಷದಿಂದ ದಂಪತಿ ನಡುವೆ ಕಲಹ ಇತ್ತು ಎನ್ನಲಾಗಿದೆ. ಯುವ ರಾಜ್‌ಕುಮಾರ್ ಹಾಗು ಶ್ರೀದೇವಿ ದಾಂಪತ್ಯದಲ್ಲಿ ಮೂಡಿರುವ ಕಲಹವನ್ನು ಎರಡೂ ಕುಟುಂಬಗಳು ಪರಿಹರಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ?
ಯುವ ರಾಜ್‌ಕುಮಾರ್ ಕಡೆಯಿಂದ ವಿಚ್ಚೇದನಕ್ಕೆ ಪಿಟಿಷನ್ ಅರ್ಜಿ ಸಲ್ಲಿಸಲಾಗಿದೆ. ಶ್ರೀದೇವಿ ಭೈರಪ್ಪ ಅವರ ನಡೆ ಏನು ಎಂಬುದನ್ನು ಕುತೂಹಲದಿಂದ ಕಾಯಲಾಗುತ್ತಿದೆ. ಆದರೆ, ಇಬ್ಬರ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಲಾಗಿದೆ ಎನ್ನುವ ಮಾಹಿತಿಯೂ ಇದ್ದು, ಸದ್ಯವೇ ಸತ್ಯ ಸಂಗತಿ ತಿಳಿದುಬರಲಿದೆ. ಯುವ ಸಿನಿಮಾದ ಮುಹೂರ್ತದಲ್ಲಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಯುವ ರಿಲೀಸ್ ಸಮಯದಲ್ಲಿ ಶ್ರೀದೇವಿ ಒಟ್ಟಿಗೆ ಇರಲಿಲ್ಲ.
ಚಂದನ್-ನಿವೇದಿತಾ ಡಿವೋರ್ಸ್ ಟ್ರೆಂಡ್ ಆಗ್ಬಿಟ್ರೆ ಏನ್ ಗತಿ? ಮನೆಮನೆಗಳಲ್ಲಿ ಶುರುವಾಯ್ತಾ ತಲೆಬಿಸಿ!
ಅಚ್ಚರಿ ಸಂಗತಿ ಎಂಬಂತೆ, 7 ವರ್ಷಗಳಿಂದ ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಯುವ-ಶ್ರೀದೇವಿ ಮದುವೆಗೆ ರಾಘವೇಂದ್ರ ದಂಪತಿಯ ವಿರೋದ ಇತ್ತು. ಆದರೆ, ನಟ ಪುನೀತ್ ರಾಜ್ ಕುಮಾರ್ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ರು ಎನ್ನಲಾಗಿದೆ. ಕಳೆದ ಆರೇಳು ತಿಂಗಳಿಂದ ಶ್ರೀದೇವಿ ಬೈರಪ್ಪ ದೊಡ್ಮನಡಯಿಂದ ದೂರವಾಗಿದ್ದಾರೆ ಎಂಬ ಮಾಹಿತಿಯಿದೆ. ಯುವ ರಾಜ್‌ಕುಮಾರ್ ಪತ್ನಿ ವಿರುದ್ಧ ಕ್ರೌರ್ಯದ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದಿದ್ದಕ್ಕೆ ನಾನು ನಾನಾಗಿದ್ದೇನೆ; ರಾಮ್ ಗೋಪಾಲ್ ವರ್ಮಾ!
ಒಟ್ಟಿನಲ್ಲಿ, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಡಿವೋರ್ಸ್ ಪಡೆದ ಸುದ್ದಿ ಇನ್ನೂ ಬಿಸಿಯಾಗಿರುವಾಗಲೇ ಚಂದನವನದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಎದುರಾಗಿದೆ. ಕಾಕತಳೀಯ ಎಂಬಂತೆ, ಚಂದನ್-ನಿವೇದಿತಾ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿರುವ ದಿನವೇ ಯುವ ರಾಜ್‌ಕುಮಾರ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅದು ಸುದ್ದಿಯಾಗಿದ್ದು ಇಂದು. ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಕಡೆ ಮದುವೆ ಪರ್ವ ನಡೆಯುತ್ತಿದ್ದರೆ ಮತ್ತೊಂದು ಕಡೆ ವಿಚ್ಛೇದನದ ಪರ್ವ ಶುರುವಾದಂತಿದೆ. ಎಲ್ಲವನ್ನೂ ಕಾಲವೇ ನಿರ್ಣಯಿಸಲಿದೆ ಎನ್ನಬಹುದೇನೋ!