ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ?

By Shriram Bhat  |  First Published Jun 9, 2024, 6:51 PM IST

ನಟಿ ಮಾಲಾಶ್ರೀ ಅವರಿಗೆ 50 ವರ್ಷವಾಗಿದೆ. ಮೊದಲಿನಂತೆ ನಟಿಸಲು ಸಾಧ್ಯವಿಲ್ಲ. ಸೌಂದರ್ಯ ಕೂಡ ಮತ್ತೆ ಬರಲು ಸಾಧ್ಯವಿಲ್ಲ. ಪತಿಯನ್ನು ಕಳೆದುಕೊಂಡು ಸಿಂಗಲ್ ಪೇರೆಂಟ್ ಆಗಿರುವ ಮಾಲಾಶ್ರೀ, ಸದ್ಯ ಮಗಳನ್ನು ಚಿತ್ರರಂಗಕ್ಕೆ..


ಕನ್ನಡ ಚಿತ್ರರಂಗದಲ್ಲಿ 'ಹಿಂದ್ಯಾರೂ ಇರ್ಲಿಲ್ಲ, ಮುಂದ್ಯಾರೂ ಬರಲ್ಲ' ಎಂಬಂತೆ ಮೆರೆದು ಕನಸಿನ ರಾನಿ ಪಟ್ಟ ಗಿಟ್ಟಿಸಿದ್ದ ನಟಿ ಮಾಲಾಶ್ರೀ (Malashri) ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ತಾವಿನ್ನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಮಗಳನ್ನು ಚಿತ್ರರಂಗದಲ್ಲಿ ತಂದೆ-ತಾಯಿ ಎರಡೂ ಆಗಿ ಬೆಳೆಸುತ್ತಿರುವ ಮಾಲಾಶ್ರೀ, ನನಗಿನ್ನು ಸಾಕು ಎಂದಿದ್ದಾರೆ. ಹಾಗಿದ್ದರೆ ಮಾಲಾಶ್ರೀ ಯಾಕೆ ಹೀಗೆ ಹೇಳಿದ್ದಾರೆ. ಅಂದರೆ ಅವರಿಗೆ ಇನ್ನೂ ಕನ್ನಡ ಚಿತ್ರರಂಗದಲ್ಲಿ ಆಫರ್ ಇದೆ ಎಂದ ಹಾಗಾಯ್ತು!

ಹೌದು ನಟಿ ಮಾಲಾಶ್ರೀ ಒಂದು ಕಾಲದಲ್ಲಿ ನಂಬರ್ ಒನ್ ನಟಿಯಾಗಿ ಕನ್ನಡ ಸಿನಿರಂಗವನ್ನು ಅಕ್ಷರಶಃ ಆಳಿದವರು. ಎರಡು-ಮೂರು 'ಶಿಫ್ಟ್'ಗಳಲ್ಲಿ ಕೆಲಸ ಮಾಡುತ್ತ, ಸೂಪರ್ ಸ್ಟಾರ್‌ ಆಗಿ ಕನ್ನಡ ಸಿನಿಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದವರು. ಮಾಲಾಶ್ರೀ ಸಿನಿಮಾ ಎಂದರೆ ಸಾಕು, ಪ್ರೇಕ್ಷಕರು ಸಿನಿಮಾ ಥಿಯೇಟರೇ ತಮ್ಮ ಮನೆ ಎಂದುಕೊಳ್ಳುತ್ತಿದ್ದರು. ಅಷ್ಟರಮಟ್ಟಿಗೆ ಅಂದು, ಅಂದರೆ 80-90ರ ದಶಕದಲ್ಲಿ ಮಾಲಾಶ್ರೀ ಮೇನಿಯಾ ಕೆಲಸ ಮಾಡುತ್ತಿತ್ತು. ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು ನಟಿ ಮಾಲಾಶ್ರೀ. ಮನೆಮನಗಳಲ್ಲಿ ಮಾಲಾಸ್ರೀ ಫೋಟೋ ರಾರಾಜಿಸುತ್ತಿತ್ತು. 

Tap to resize

Latest Videos

ಹಾಟ್ ಟಾಪಿಕ್‌ ಆಯ್ತು ಚಂದನ್-ನಿವೇದಿತಾ ಡಿವೋರ್ಸ್: ಮನೆಮನೆಗಳಲ್ಲಿ ಶುರುವಾಯ್ತಾ ತಲೆಬಿಸಿ!

ಆದರೆ, ಈಗ ನಟಿ ಮಾಲಾಶ್ರೀ ಅವರಿಗೆ 50 ವರ್ಷವಾಗಿದೆ. ಮೊದಲಿನಂತೆ ನಟಿಸಲು ಸಾಧ್ಯವಿಲ್ಲ. ಸೌಂದರ್ಯ ಕೂಡ ಮತ್ತೆ ಬರಲು ಸಾಧ್ಯವಿಲ್ಲ. ಪತಿಯನ್ನು ಕಳೆದುಕೊಂಡು ಸಿಂಗಲ್ ಪೇರೆಂಟ್ ಆಗಿರುವ ಮಾಲಾಶ್ರೀ, ಸದ್ಯ ಮಗಳು ಆರಾಧನಾ ರಾಮ್ (Aradhana Ram) ಅವರನ್ನು ಚಿತ್ರರಂಗಕ್ಕೆ ದರ್ಶನ್ ನಟನೆಯ ಕಾಟೇರ ಚಿತ್ರದಲ್ಲಿ ನಾಯಕಿ ಆಗಿಸುವ ಮೂಲಕ ಪರಿಚಯಿಸಿದ್ದೂ ಆಗಿದೆ. ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಜೊತೆಗೆ, ಮಾಲಾಶ್ರೀ ಮಗಳು ಆರಾಧನಾ ರಾಮ್ ನಟನೆ ಬಗ್ಗೆ ಕೂಡ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ.ಆರಾಧನಾ ರಾಮ್ ಸದ್ಯ ಮುಂದಿನ ಚಿತ್ರದ ಮಾತುಕತೆಗೆ ಸಜ್ಜಾಗಿದ್ದಾರೆ. 

ಶಂಕರ್‌ ಗುರು ಮಾಡಿದ್ದ ಮ್ಯಾಜಿಕ್ ಗೊತ್ತಾ? ಡಾ ರಾಜ್‌ಕುಮಾರ್ ತ್ರಿಬಲ್ ರೋಲ್ ಆಕ್ಟಿಂಗ್ ಹೇಗಿದೆ?

ಈ ಸಮಯದಲ್ಲಿ ಒಂದು ಕಾಲದ ಸೂಪರ್ ಸ್ಟಾರ್ ನಟಿ ಮಾಲಾಶ್ರೀ ಮಾತನಾಡಿದ್ದಾರೆ. 'ನನಗೀಗ 50 ವರ್ಷ ವಯಸ್ಸಾಯ್ತು. ಸಾಕು ನನಗೆ ಫಿಲಂ ಇಂಡಸ್ಟ್ರಿ. ಎಪ್ಪತ್ತು ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ. ಏಳೇಳು ಜನ್ಮಕ್ಕೂ ಸಾಕಾಗುವಷ್ಟು ಪ್ರಖ್ಯಾತಿ, ಪ್ರೀತಿ ಗಳಿಸಿದ್ದೇನೆ. ನನಗೆ ಇನ್ಮುದೆ ವಿಶ್ರಾಂತಿ ಬೇಕು. ಇನ್ನೇನಿದ್ದರೂ 'ಕಾಟೇರ' ಸಿನಿಮಾ ಮೂಲಕ ಸಿನಿಮಾ ರಂಗ ಪ್ರವೇಶಿಸಿರುವ ನನ್ನ ಮಗಳು ಹೆಚ್ಚಿನ ಸಿನಿಮಾ ಮಾಡಿ ಯಶಸ್ಸು ಕಾಣಲಿ. ಇದೇ ನನ್ನ ಹಂಬಲ, ಇದೇ ನನ್ನ ಹಾರೈಕೆ' ಎಂದಿದ್ದಾರೆ ನಟಿ ಮಾಲಾಶ್ರೀ. 

ಕಪ್ಪು ಬೆಕ್ಕು ಅಂದ್ರೆ ಸಾಕಲ್ವ, ಮತ್ತೆ ಡಸ್ಕಿ ಎನ್ನುವುದ್ಯಾಕೆ? ಪ್ರಿಯಾಂಕಾ ಚೋಪ್ರಾಗೆ ಉತ್ತರ ಹೇಳ್ತೀರಾ?

ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಸಿನಿರಸಿಕರು ನಟಿ ಮಾಲಾಶ್ರೀ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಾಲಾಶ್ರೀ ಮಗಳು ಆರಾಧನಾ ರಾಮ್ ಚಿತ್ರಂಗದಲ್ಲಿ ಸಖತ್ ಮಿಂಚಿ ತನ್ನ ಅಮ್ಮ ಮಾಲಾಶ್ರೀ ಜಾಗಕ್ಕೆ ಬರುತ್ತಾರೋ ಅಥವಾ ಅಲ್ಲೊಂದು ಇಲ್ಲೊಂದು ಚಾನ್ಸ್ ಪಡೆದು ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ನಡೆಯುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ. 

click me!