
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು ಧಿಡೀರನೇ ಸುದ್ದಿಗೋಷ್ಠಿ ಕರೆದಿದ್ದಾರೆ. ಏಳನೇ ತಾರೀಖಿನಂದು (07 June 2024) ರಂದು ವಿಚ್ಛೇದನ ಪಡೆದಿರುವ ಚಂದನ್ ಗೌಡ ಹಾಗೂ ನಿವೇದಿತಾ ಗೌಡ ಅವರಿಬ್ಬರು ಇಂದು ತುರ್ತು ಪ್ರೆಸ್ ಮೀಟ್ ಯಾಕೆ ಕರೆದಿರಬಹುದು ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆ ಮಾಡಿದೆ. ಅವರಿಬ್ಬರೂ ತಮ್ಮ ಡಿವೋರ್ಸ್ ಬಗ್ಗೆ ಸ್ಪಷ್ಟನೆ ಕೊಡಲು ಸುದ್ದಿಗೋಷ್ಟಿ ಕರೆದಿದ್ದಾರೆ ಎನ್ನಲಾಗಿದೆ.
ಇಂದು ಮದ್ಯಾನ್ಹ 2.30 ಕ್ಕೆ ಪ್ರೆಸ್‌ಮೀಟ್ ಕರೆದಿರುವ ಚಂದನ್ ಹಾಗೂ ನಿವೇದಿತಾ ಗೌಡ, ತಮ್ಮ ವಿಚ್ಛೇಧನದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಅಪಪ್ರಚಾರ ನಡೆದಿರುವ ಹಿನ್ನೆಲೆಯಲ್ಲಿ ಈ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ ಎನ್ನಲಾಗಿದೆ. ತಮ್ಮಿಬ್ಬರ ಡಿವೋರ್ಸ್‌ಗೆ ಸಂಬಂಧ ಪಟ್ಟಂತೆ ಅಸಲಿ ಕಾರಣ ಏನು ಎಂಬುದನ್ನು ಅವರಿಬ್ಬರೂ ಈ ಸುದ್ದಿಗೋಷ್ಠಿಯಲ್ಲಿ ಹಂಚಿಕೊಳ್ಳಲಿದ್ದಾರಂತೆ. ಮಾಗಡಿ ರಸ್ತೆಯ ಎಂಎಂಬಿ ಲೆಗಸಿಯಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದ್ದು, ಇದಕ್ಕೆ ಅವರಿಬ್ಬರೂ ಸೇರಿ ಮಾಧ್ಯಮದವರನ್ನು ಆಹ್ವಾನಿಸಿದ್ದಾರೆ.
ಹಾಟ್ ಟಾಪಿಕ್ ಆಯ್ತು ಚಂದನ್-ನಿವೇದಿತಾ ಡಿವೋರ್ಸ್: ಮನೆಮನೆಗಳಲ್ಲಿ ಶುರುವಾಯ್ತಾ ತಲೆಬಿಸಿ!
ಮುಖ್ಯವಾಗಿ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂನಲ್ಲಿ, ತಾವು ಡಿವೋರ್ಸ್ ಪಡೆದ ಬಳಿಕ ನಡೆದಿರುವ ಅಪಪ್ರಚಾರ ಹಾಗೂ ಅಂತೆಕಂತೆಗಳಿಂದ ಅವರ ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆಯಂತೆ. ಈ ಹಿನ್ನೆಲೆಯಲ್ಲಿ ತಾವು ಸುದ್ದಿಗೋಷ್ಟಿ ಕರೆದಿರುವುದಾಗಿ ಹೇಳಿಕೊಂಡಿದ್ದಾರೆ ಚಂದನ್ ಹಾಗು ನಿವೇದಿತಾ. ಅವರಿಬ್ಬರೂ ಇಂದು ಸುದ್ದಿಗೋಷ್ಠಿಯಲ್ಲಿ ಅದೇನು ಹೇಳಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಈಗ ಎಲ್ಲರಲ್ಲಿ ಮನೆ ಮಾಡಿದೆ.
ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ?
ಇದೇ ತಿಂಗಳು 6ರಂದು ಶಾಂತಿ ನಗರದ ಫ್ಯಾಮಿಲಿ ಕೋರ್ಟ್ನಲ್ಲಿ 13ಬಿ ಸೆಕ್ಷನ್ ಅಡಿಯಲ್ಲಿ ವಿಚ್ಛೇದನಕ್ಕೆ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಅರ್ಜಿ ಸಲ್ಲಿಸಿದ್ದರು. ಮರುದಿನ ಹಿಯರಿಂಗ್ ಆಗಿ ಡಿವೋರ್ಸ್ ಕೂಡ ಪಡೆದಿದ್ದಾರೆ. ಆದರೆ, ಅವರಿಬ್ಬರೂ ಡಿವೋರ್ಸ್ ಪಡೆದ ಬಳಿಕ, ಸೋಷಿಯಲ್ ಮೀಡಿಯಾಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕೆಟ್ಟ ಕೆಟ್ಟ ಕಾಮೆಂಟ್‌ಗಳು, ಊಹಾಪೋಹಗಳು ಹರಿದಾಡಿವೆ. ಅವರಿಬ್ಬರ ಡಿವೋರ್ಸ್ ಬಗ್ಗೆ ಇಲ್ಲಸಲ್ಲದ ಕಾಮೆಂಟ್‌ಗಳು ಬಂದಿವೆ.
ಶಂಕರ್ ಗುರು ಮಾಡಿದ್ದ ಮ್ಯಾಜಿಕ್ ಗೊತ್ತಾ? ಡಾ ರಾಜ್‌ಕುಮಾರ್ ತ್ರಿಬಲ್ ರೋಲ್ ಆಕ್ಟಿಂಗ್ ಹೇಗಿದೆ?
ತಾವಿಬ್ಬರೂ ಡಿವೋರ್ಸ್ ಪಡೆದ ಬಳಿಕ ನಡೆದ ಅಚ್ಚರಿ ಬೆಳವಣಿಗೆ ಅಥವಾ ಅನಾಗರಿಕ ವದಂತಿ ಹಿನ್ನೆಯಲ್ಲಿ ಇಂದು ಅವರಿಬ್ಬರೂ ಮಾಗಡಿ ರೋಡ್‌ನ ಎಂಎಮಬಿ ಲೆಗಸಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಅದರಲ್ಲಿ, ತಾವಿಬ್ಬರೂ ಯಾಕೆ ವಿಚ್ಛೇದನ ಪಡೆದಿದ್ದೇವೆ ಎಂಬ ಬಗ್ಗೆ ಅವರಿಬ್ಬರೂ ಬಹಿರಂಗ ಪಡಿಸಲಿದ್ದಾರಂತೆ. ಈ ಹಿನ್ನೆಲೆಯಲ್ಲಿ ಇದೀಗ ಎಲ್ಲರ ಚಿತ್ತ ಈ ಸುದ್ದಿ ಗೋಷ್ಠಿಯ ಮೇಲೆ ನೆಟ್ಟಿದೆ.
ಕಪ್ಪು ಬೆಕ್ಕು ಅಂದ್ರೆ ಸಾಕಲ್ವ, ಮತ್ತೆ ಡಸ್ಕಿ ಎನ್ನುವುದ್ಯಾಕೆ? ಪ್ರಿಯಾಂಕಾ ಚೋಪ್ರಾಗೆ ಉತ್ತರ ಹೇಳ್ತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.