Gadayuddha Review: ತಂತ್ರ ಮಂತ್ರದ ವಿರುದ್ಧ ಗದಾಯುದ್ಧ

Published : Jun 10, 2023, 10:56 AM IST
Gadayuddha Review: ತಂತ್ರ ಮಂತ್ರದ ವಿರುದ್ಧ ಗದಾಯುದ್ಧ

ಸಾರಾಂಶ

ಸುಮಿತ್, ಧನ್ಯಾ ಪಾಟೀಲ್, ಮಹೇಶ್, ಡ್ಯಾನಿ ಕುಟ್ಟಪ್ಪ, ಶಿವರಾಮ್, ರಮೇಶ್ ಭಟ್, ಸ್ಪರ್ಶ ರೇಖಾ ನಟಿಸಿರುವ ಗದಾಯುದ್ಧ ಸಿನಿಮಾ ರಿಲೀಸ್ ಆಗಿದೆ. 

ಆರ್.ಎಸ್.

ಒಳ್ಳೆಯತನವನ್ನೇ ಧರಿಸಿರುವ ನಾಯಕ. ತನ್ನ ಊರಲ್ಲಿ ಯಾವ ಕೆಟ್ಟ ಕೆಲಸ ಆಗುವುದಕ್ಕೂ ಬಿಡಲಾರೆ ಎಂದು ಕಾಯುವ ತರುಣ. ರಾಮರಾಜ್ಯದಂತೆ ಇರುವ ಊರು. ಅಷ್ಟರಲ್ಲಿ ಆ ತರುಣ ಒಂದು ಊರಿಗೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಅವನು ಆ ಅಬ್ಬರದ ಊರಿಗೆ ಹೊರಟು ನಿಲ್ಲುವಲ್ಲಿಗೆ ಕತೆ ಆರಂಭ.

ಅದೊಂದು ಚಿತ್ರವಿಚಿತ್ರ ಊರು. ವಾಮಾಚಾರದ ತವರೂರು. ಅಲ್ಲೊಬ್ಬ ಮಹಾ ಮಾಂತ್ರಿಕ. ಅವನ ಕಣ್ಣೆದುರಲ್ಲಿ ಸಾವಿನ ನರ್ತನ. ಆತ್ಮಗಳ ಆಕ್ರಂದನ. ಬೊಂಬೆ, ದಾರ, ಲಿಂಬೆ ಹಣ್ಣುಗಳೇ ಎಲ್ಲೆಲ್ಲೂ. ಅಲ್ಲಿಗೆ ಹೋದ ಮೇಲೆ ಕತೆ ಬಿಚ್ಚಿಕೊಳ್ಳುತ್ತದೆ. ಹಿನ್ನೆಲೆ ತೆರೆದುಕೊಳ್ಳುತ್ತದೆ. ಕಡಿಯೋನು ಒಬ್ಬನಿದ್ದರೆ ಕಾಯೋನು ಮತ್ತೊಬ್ಬ ಬಂದೇ ಬರುತ್ತಾನೆ ಎಂಬ ಮಾತಿಗೆ ಜೀವ ಬರುತ್ತದೆ.

Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು

ನಿರ್ದೇಶನ: ಶ್ರೀವತ್ಸ ರಾವ್,

ತಾರಾಗಣ: ಸುಮಿತ್, ಧನ್ಯಾ ಪಾಟೀಲ್, ಮಹೇಶ್, ಡ್ಯಾನಿ ಕುಟ್ಟಪ್ಪ, ಶಿವರಾಮ್, ರಮೇಶ್ ಭಟ್, ಸ್ಪರ್ಶ ರೇಖಾ

ಸಿನಿಮಾದ ಆರಂಭದಲ್ಲಿ ಸಹಜವಾಗಿ ಕಾಣಿಸುವ ಸಿನಿಮಾ ಹೋಗುತ್ತಾ ಹೋಗುತ್ತಾ ವಾಮಾಚಾರ, ಪ್ರೇತ, ಭಾನಾಮತಿ ಜಗತ್ತಿಗೆ ತಲುಪುತ್ತದೆ. ದೈವ ಶಕ್ತಿ ಮತ್ತು ದುಷ್ಟಶಕ್ತಿ ನಡುವಿನ ಹೋರಾಟವಾಗಿ ಕಾಣಿಸುತ್ತದೆ. ಅಲ್ಲಿ ಒಳ್ಳೆಯವರ ಒಳ್ಳೆಯತನ, ದುಷ್ಟಶಕ್ತಿಯ ಗೆಲುವು, ರಾಜ ಮಹಾರಾಜರ ಹಿನ್ನೆಲೆ, ಯಾವುದೋ ಗುಹೆಯಲ್ಲಿ ಕುಳಿತೇ ಜಗತ್ತು ಅರಿಯುವ ವಿಜ್ಞಾನಿ, ಅವರ ಪಕ್ಕವೇ ಇರುವ ವಿಭೂತಿ ಧರಿಸಿದ ಜ್ಯೋತಿಷಿ ಎಲ್ಲರೂ ಸಿಗುತ್ತಾ ಹೋಗುತ್ತಾರೆ. ಅಲ್ಲಿ ನಡೆಯುವ ಅನ್ಯಾಯ, ಅದಕ್ಕೆ ಸಿಗಬಹುದಾದ ಪರಿಹಾರವೇ ಈ ಸಿನಿಮಾ.

MELODY DRAMA REVIEW: ನವ ವಧುವಿನ ಪರಾರಿ ಪ್ರೇಮ ಪ್ರಸಂಗMELODY DRAMA REVIEW: ನವ ವಧುವಿನ ಪರಾರಿ ಪ್ರೇಮ ಪ್ರಸಂಗ

ನಾಯಕ ಸುಮಿತ್ ಆರಡಿ ಕಟೌಟು. ಚಾಕ್ಲೇಟ್ ಹೀರೋ ಥರ ಕಾಣಿಸುವ ಅವರ ದೇಹಧಾರ್ಡ್ಯ ಆ್ಯಕ್ಷನ್ ಹೀರೋಗೆ ತಕ್ಕುದಾದಂತಿದೆ. ಅವರ ಅಬ್ಬರವೇ ಈ ಸಿನಿಮಾದ ಅಡಿಪಾಯ. ಇಲ್ಲಿ ರಣಭಯಂಕರವಾಗಿ ಕಾಣಿಸಿಕೊಂಡಿರುವುದು ಡ್ಯಾನಿ ಕುಟ್ಟಪ್ಪ. ಅವರ ಕಣ್ಣುಗಳೇ ಬೆಂಕಿಯುಗುಳುವಂತೆ ಕಾಣಿಸುತ್ತದೆ. ಗೋಲ್ಡನ್‌ಸ್ಟಾರ್‌ ಗಣೇಶ್ ಸಹೋದರ ಮಹೇಶ್ ವಿಶಿಷ್ಟ ಪಾತ್ರದಲ್ಲಿ ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತಾರೆ. ಹಿರಿಯ ನಟ ಶಿವರಾಮ್‌ರನ್ನು ಹಿರಿತೆರೆಯಲ್ಲಿ ನೋಡುವಾಗ ಸಂತೋಷವಾಗುತ್ತದೆ.

ಇದು ದೈವಶಕ್ತಿ ಮತ್ತು ದುಷ್ಟಶಕ್ತಿ ಎಂಬ ವಿಚಾರವನ್ನೇ ಪ್ರಧಾನವಾಗಿ ದಾಟಿಸಲು ಯತ್ನಿಸಿರುವ ಸಿನಿಮಾ. ಅದರ ಮಧ್ಯೆ ಚಕ್ರಗಳು, ವೇದ ಮತ್ತೊಂಚೂರು ವೈಜ್ಞಾನಿಕ ವಿವರಣೆಗಳು ಸೇರಿಕೊಂಡಿವೆ. ದಟ್ಟಾರಣ್ಯ, ಜಲಪಾತ ಮುಂತಾದ ಹಸಿರು ಲೊಕೇಷನ್‌ಗಳು ಚಂದ ಕಾಣಿಸುತ್ತವೆ. ಸುಂದರವಾಗಿ ಕಾಣಿಸುವ ಮತ್ತು ಆಂತರ್ಯದಲ್ಲಿ ಅಬ್ಬರವನ್ನು ಹೊಂದಿರುವ ಸಿನಿಮಾ ಇದು. ಹಾಗಾಗಿ ಇಲ್ಲಿ ಪಿಸುಮಾತು ಹುಡುಕಬಾರದು. ದೈವಶಕ್ತಿ ಕಾಯುತ್ತದೆ ಎಂಬುದನ್ನು ಮರೆಯಬಾರದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಯ್ಯ ಮಾಸ್ ಶೋ, ಆಕ್ಷನ್ ಡೋಸ್ ಜಾಸ್ತಿ: ಇಲ್ಲಿದೆ ಅಘೋರನ ಕಥೆ 'ಅಖಂಡ 2' ಸಂಪೂರ್ಣ ವಿಮರ್ಶೆ!
ಅಭಿಮಾನಿಗಳಿಗಾಗಿ ಮಾಡಿದ ದರ್ಶನೋತ್ಸವ.. ದಾಸನ ಡಬಲ್‌ ರೋಲ್‌ 'ದಿ ಡೆವಿಲ್' ಹೇಗಿದೆ?