ಸತ್ಯ, ಸುಪ್ರಿತಾ ಸತ್ಯನಾರಾಯಣ್, ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ ನಟನೆಯ ಮೆಲೋಡಿ ಡ್ರಾಮಾ ಸಿನಿಮಾ ರಿಲೀಸ್ ಆಗಿದೆ...
ಆರ್ ಕೇಶವಮೂರ್ತಿ
ಆಕಸ್ಮಿಕವಾಗಿ ನಡೆಯುವ ತಪ್ಪು, ಅದರಿಂದ ಉಂಟಾಗುವ ಅಪನಂಬಿಕೆ, ತಾಳಿ ಕಟ್ಟಬೇಕಾದವನೇ ಕಾಣೆಯಾಗುವುದು, ವಧುವಿನ ಕೈ ಹಿಡಿಯುವ ಮತ್ತೊಬ್ಬ, ಕೊನೆಗೂ ಕೈ ಹಿಡಿದವನು ಮತ್ತು ಕೈ ಕೊಟ್ಟವನು ಮುಖಾಮುಖಿ. ಅಲ್ಲಿಗೆ ಪ್ರೀತಿ ಮತ್ತು ಮದುವೆ ಎರಡೂ ಬ್ರೇಕಪ್ ಆಗುವುದು. ಇಂಥ ಸಂಗತಿಗಳುಳ್ಳ ಸಿನಿಮಾ ‘ಮೆಲೋಡಿ ಡ್ರಾಮಾ’. ಚಿತ್ರದ ಹೆಸರಿನಂತೆಯೇ ಆಮೆಗತಿಯಲ್ಲಿ ನಿರೂಪಣೆಗೊಳ್ಳುವ ಈ ಸಿನಿಮಾ, ಮದುವೆ ಮಂಟಪದಿಂದ ವಧುವಿನ ವೇಷದಲ್ಲಿರುವ ನಾಯಕಿ ಪರಾರಿ ಆಗುವುದರೊಂದಿಗೆ ಶುರುವಾಗುತ್ತದೆ. ಆದರೆ, ಹುಡುಗಿ ಎಲ್ಲಿ ಓಡಿ ಹೋಗುತ್ತಾಳೆ, ಯಾಕೆ ಓಡುತ್ತಾಳೆ ಎಂಬುದು ಮಾತ್ರ ನಿಗೂಢ!
undefined
ವಿಷಯ ಇಷ್ಟೇ; ಪದೇ ಪದೇ ಬೀದಿಯಲ್ಲಿ ಕಾಣುವ ನಾಯಕಿ ಹಿಂದೆ ಬೀಳುವ ನಾಯಕ. ಈ ಫಾಲೋಯಿಂಗ್, ಪ್ರೀತಿ- ಪ್ರೇಮ ತನಗೆ ಆಗಿ ಬರಲ್ಲ ಎಂದು ರೋಡ್ ರೋಮಿಯೋಗೆ ಎಚ್ಚರಿಕೆ ಕೊಡುವ ನಾಯಕಿ. ಆದರೂ ನಾಯಕ ಹಿಂಬಾಲಿಸುವ ಪ್ರವೃತ್ತಿ ಬಿಡಲ್ಲ. ತನ್ನನ್ನ ಹಿಂಬಾಲಿಸುತ್ತಿರುವವನು ತನ್ನ ಸಂಬಂಧಿ ಎಂದು ಗೊತ್ತಾದ ಮೇಲೆ ರೆಬೆಲ್ ಆಗಿದ್ದ ನಾಯಕಿ, ಸಾಫ್ಟ್ ಆಗುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಆಗುತ್ತದೆಯೇ ಗೊತ್ತಿಲ್ಲ. ಆದರೆ, ನಾಯಕಿ ಯಾಕೆ ಪದೇ ಪದೇ ಬೀದಿಯಲ್ಲಿ ಓಡಾಡುತ್ತಿದ್ದಳು ಎಂಬುದೂ ಚಿಂತನಾತ್ಮಕ ವಿಚಾರ.
Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು
ತಾರಾಗಣ: ಸತ್ಯ, ಸುಪ್ರಿತಾ ಸತ್ಯನಾರಾಯಣ್, ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ
ನಿರ್ದೇಶನ: ಮಂಜು ಕಾರ್ತಿಕ್
DARBAR REVIEW: ತಮಾಷೆ ಜೊತೆ ವಿಷಾದ ಬೆರೆತ ರಾಜಕೀಯ ವಿಡಂಬನೆ
ಈಗ ನಾಯಕಿಗೆ ಮದುವೆ. ಮನೆಯವರು ಸೇರಿ ನೋಡಿರುವ ಹುಡುಗನ ಜತೆಗೆ ಹೊಸ ಜೀವನ ಮಾಡಲು ನಾಯಕಿ ಕೂಡ ರೆಡಿ ಆಗಿದ್ದಾಳೆ. ಆದರೆ, ಮದುವೆ ದಿನ ತಾಳಿ ಕಟ್ಟಬೇಕಾದ ಹುಡುಗನೇ ಇಲ್ಲ. ಈಗ ನಾಯಕಿ ಹಿಂದೆ ಓಡಾಡುತ್ತಿದ್ದ ನಾಯಕನ ಜತೆಗೆ ಮದುವೆ ಮಾಡಿಸುತ್ತಾರೆ. ತಾಳಿ ಕಟ್ಟಬೇಕಾದವನು ಅಂದು ಯಾಕೆ ಕಾಣೆ ಆಗಿದ್ದ, ಅದಕ್ಕೂ ಮತ್ತು ನಾಯಕನಿಗೂ ಏನು ಸಂಬಂಧ ಎಂದು ಗೊತ್ತಾದ ಮೇಲೆ ನಾಯಕಿ, ಹೀರೋಗೆ ಡೈವೋರ್ಸ್ ಕೊಡುವ ಹಂತಕ್ಕೆ ಬರುತ್ತಾಳೆ. ಮುಂದೇನು ಎಂಬ ಕುತೂಹಲ, ಸಹನೆ ಇದ್ದವರು ಈ ಸಿನಿಮಾ ನೋಡಬಹುದು.