90ರ ದಶಕದಲ್ಲಿ ನಟಿ ಪ್ರೇಮ ಸ್ಟಾರ್ ನಟರೊಂದಿಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ರು.ಈಗ ಮತ್ತೆ ಲಾಯರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಆರ್ ಕೇಶವಮೂರ್ತಿ
ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದಕ್ಕಿಂತ ಮದುವೆ ನಂತರ ಸಂಸಾರ ಮಾಡಿ ನೋಡು ಅನ್ನಬೇಕಾ ಎನ್ನುವ ಗುಮಾನಿ ಹುಟ್ಟಿಸುವ ಕತೆ ‘ವೆಡ್ಡಿಂಗ್ ಗಿಫ್‌್ಟ’ ಸಿನಿಮಾ. ಕಾನೂನು ಮತ್ತು ಮನರಂಜನೆ ನೆರಳಿನಲ್ಲಿ ನೋಡುವಂತೆ ನಿರ್ದೇಶಕ ವಿಕ್ರಂ ಪ್ರಭು ಈ ಚಿತ್ರವನ್ನು ಕಟ್ಟಿಕೊಂಡಿದ್ದಾರೆ.
ನಿರ್ದೇಶನ: ವಿಕ್ರಂ ಪ್ರಭು
ತಾರಾಗಣ: ನಿಶಾನ್, ಸೋನುಗೌಡ
ರೇಟಿಂಗ್: 3
ಮದುವೆಯಾಗುವ ಹೆಣ್ಣಿಗಾಗಿ ಇರುವ ಕಾನೂನು, ಆ ಕಾನೂನಿನ ಅಡಿ ಯಾವುದೇ ಕೇಸು ದಾಖಲಾದರೂ ಗಂಡಿನ ತಪ್ಪು ಇಲ್ಲದಿದ್ದರೂ ಆತನಿಗೆ ಶಿಕ್ಷೆ ಆಗುತ್ತದೆ ಎನ್ನುವ ಅಂಶವನ್ನು ತಿಳಿದುಕೊಂಡ ಹೆಣ್ಣು ಮಕ್ಕಳು ಆ ಕಾನೂನನ್ನು ಹೇಗೆಲ್ಲ ದುರುಪಯೋಗ ಮಾಡಿಕೊಳ್ಳುತ್ತಾರೆ, ಅದರಿಂದ ಉಂಟಾಗುವ ಅನಾಹುತಗಳು, ಸಾವು- ನೋವುಗಳನ್ನು ಯಾವುದೇ ಅಬ್ಬರ ಇಲ್ಲದೆ ಈ ಸಿನಿಮಾ ನಿರೂಪಿಸುತ್ತದೆ.
TOOTU MADIKE FILM REVIEW: ನಕ್ಕು ಹಗುರಾಗಬಹುದಾದ ಮಜಾ ಸಿನಿಮಾ
ಇಡೀ ಸಿನಿಮಾ ಅಚ್ಯುತ್ ಕುಮಾರ್, ಪ್ರೇಮಾ, ಸೋನು ಗೌಡ, ನಿಶಾನ್ ಸುತ್ತ ಸಾಗುತ್ತದೆ. ಮೊದಲರ್ಧ ಕಾಮಿಡಿ ಕಮಾಲ್, ವಿರಾಮದ ನಂತರ ಕಾನೂನಿನ ಸಮರ ಶುರುವಾಗುತ್ತದೆ. ನಟನೆ ವಿಚಾರಕ್ಕೆ ಬಂದರೆ ಎಲ್ಲ ಪಾತ್ರಗಳು ಕತೆಯೊಳಗಿನ ಬಂಧಿಗಳೇ! ನಾಯಕನ ಮೇಲೆ ದ್ವೇಷ ಸಾಧಿಸುವ ನಾಯಕಿ ಪಾತ್ರದ ಹಿನ್ನೆಲೆಯನ್ನು ಮತ್ತಷ್ಟುಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು. ವಿರಾಮದ ನಂತರ ಕೋರ್ಚ್ ಡ್ರಾಮಾ ತುಸು ಹೆಚ್ಚಾಯಿತು ಅನಿಸುತ್ತದೆ.
Bairagi film review: ಶಿವಣ್ಣ ಅಬ್ಬರ, ಬೈರಾಗಿ ಭಯಂಕರ
ವೆಡ್ಡಿಂಗ್ ಗಿಫ್ಟ್ ಟೀಸರ್ ಹೇಳತ್ತೆ ಕುಟುಂಬ ಕಲಹಕ್ಕೆ ಕಾರಣ..!?
ದಿನ ಬೆಳಗಾದ್ರೆ ಸಾಕು ಬಣ್ಣದ ಲೋಕಕ್ಕೀಗ ಹೊಸಬರ ಆಗಮನದೊಂದಿಗೆ ಹೊಚ್ಚ ಹೊಸಾ ಸಂಚಲನ, ಹೊಸತನದ ಪ್ರಯೋಗಗಳು ಆಗುತ್ತಾ ಚಂದನ ವನ ಮತ್ತಷ್ಟು ರಂಗೇರಿದೆ. ಇದೇ ಸೂತ್ರದೊಂದಿಗೆ ವಿಕ್ರಂ ಪ್ರಭು ಅವರ ನಿರ್ದೇಶನದೊಂದಿಗೆ, ನಿರ್ಮಾಣದ ಹೊಣೆಯನ್ನೂ ಹೊತ್ತು ವೆಡ್ಡಿಂಗ್ ಗಿಫ್ಟ್ ಎಂಬ ಚಿತ್ರದ ಮೂಲಕ ನವ ನಿರ್ದೇಶಕರೊಬ್ಬರ ಆಗಮನ ಸ್ಯಾಂಡಲ್ ವುಡ್ ಕುಟುಂಬಕ್ಕೆ ಆಗ್ತಿದೆ. ಈಗಾಗಲೇ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿರೋ ವೆಡ್ಡಿಂಗ್ ಗಿಫ್ಟ್ ಚಿತ್ರದ ಟೀಸರ್ ಬಿಡುಗಡೆಗೊಂಡು ನವ ನಿರ್ದೇಶಕರ ಮೇಲಿನ ಭರವಸೆ ಹೆಚ್ಚಿಸಿದೆ ಅಂದ್ರೆ ತಪ್ಪಾಗಲಾರದು.
ರಿಲೀಸ್ ಆಗಿರೋ ಟೀಸರ್ ನಲ್ಲಿ ನ್ಯಾಯಾಲಯದಿಂದಲೇ ತೆರೆದುಕೊಳ್ಳುತ್ತಾ, ಗಂಭೀರವಾದ ವಿಚಾರಗಳ ಸುತ್ತ ಕಥೆ ಹೆಣೆದಂತೆ ಕಾಣುತ್ತದೆ. ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಸೃಷ್ಟಿಯಾದ ಕಾನೂನುಗಳು ಅವರಿಂದಲೇ ಹೇಗೆಲ್ಲ ದುರುಪಯೋಗವಾಗ್ತಿದೆ ಎಂಬ ಸೂಕ್ಷ್ಮತೆಯೊಂದಿಗೆ ಸೆಳೆಯುತ್ತಿದೆ. ಇಂಥಾ ಸೂಕ್ಷ್ಮ ಎಳೆಯಿಟ್ಟುಕೊಂಡು, ಸಿನೆಮಾ ರೂಪಿಸೋದು ಒಂದು ಚಾಣಕ್ಯವೇ. ಆದ್ರೂ ಸಹ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಈ ಚಿತ್ರವನ್ನ ವಿಕ್ರಂ ಚಿತ್ರಿಸಿರುವ ಕಥೆಗೆ ನಂದೀಶ್ ನಾಣಯ್ಯ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಸೋನು ಗೌಡ ಸಾಥ್ ಕೊಟ್ಟಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಸೋನು ಗೌಡ ಇಷ್ಟಪಟ್ಟು ನಿರ್ವಹಿಸಿರುವ ಪಾತ್ರವಿದಂತೆ.