ಚಂದ್ರಕೀರ್ತಿ ಮತ್ತು ಪಾವನಾ ಗೌಡ ನಟಿಸಿರುವ ತೂತು ಮಡಿಕೆ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ವಿಮರ್ಶೆ...
ರಾಜೇಶ್ ಶೆಟ್ಟಿ
ಪುರಾತನ ಕಾಲದ ಪಂಚಲೋಹದ ವಿಗ್ರಹವೊಂದು ಕಳವಾಗಿದೆ ಎಂಬ ಸುದ್ದಿಯೊಂದಿಗೆ ಈ ಸಿನಿಮಾ ಆರಂಭವಾಗುತ್ತದೆ. ವಿಗ್ರಹದ ಹಿಂದೆ ಬೀಳುವ ಚೋರರು, ಮಧ್ಯದಲ್ಲಿ ಸಿಕ್ಕಿಬೀಳುವ ಪೋರರು- ಇವರಿಬ್ಬರ ಪಯಣದ ಕತೆಯೇ ಈ ಸಿನಿಮಾ. ಇಡೀ ಸಿನಿಮಾ ತಮಾಷೆ ಧಾಟಿಯಲ್ಲೇ ಸಾಗುತ್ತದೆ. ತಮಾಷೆ ಬಿಟ್ಟು ಆಚೆ ಈಚೆ ಹೋಗಲಾರೆ ಎಂದು ನಿರ್ದೇಶಕರು ಮೊದಲೇ ನಿರ್ಧರಿಸಿ ಆ ನಿರ್ಧಾರಕ್ಕೆ ಬದ್ಧವಾಗಿದ್ದಾರೆ. ಅಷ್ಟರಮಟ್ಟಿಗೆ ಇದೊಂದು ನಕ್ಕು ಹಗುರಾಗಬಹುದಾದ ಮಜಾ ಸಿನಿಮಾ.
ಮಾನವನ ದುರಾಸೆ, ಅತಿಯಾಸೆ, ಹಣದ ಮೋಹ ಇಟ್ಟುಕೊಂಡು ನೇಯ್ದಿರುವ ಕತೆ ಇದು. ಚಿತ್ರಕತೆಯಲ್ಲಿ ಹೊಸತನ ಇದೆ. ಅದಕ್ಕೂ ಹೆಚ್ಚಾಗಿ ಚಿತ್ರದ ಸಂಭಾಷಣೆಗಳು ಅನೇಕ ದೃಶ್ಯಗಳನ್ನು ನಾಲ್ಕೈದು ಪದಗಳ ಶಕ್ತಿಯಿಂದಲೇ ಮೇಲೆತ್ತಿವೆæ. ಅದಕ್ಕೆ ಸಂಭಾಷಣಾಕಾರ ರಘು ನಿಡುವಳ್ಳಿ ಮೆಚ್ಚುಗೆಗೆ ಅರ್ಹರು. ನಿರ್ದೇಶಕರಿಗೆ ಸಿನಿಮಾದ ಮೇಲೆ ಸ್ಪಷ್ಟತೆ ಇದೆ. ಎಷ್ಟುಬೇಕೋ ಅಷ್ಟೇ ಹೇಳುತ್ತಾರೆ ಮತ್ತು ಕೆಲವು ದೃಶ್ಯಗಳನ್ನು ಪ್ರೇಕ್ಷಕರನ್ನು ದಾರಿ ತಪ್ಪಿಸಲು ದುಂದುವೆಚ್ಚ ಮಾಡಿದ್ದಾರೆ.
ನಿರ್ದೇಶನ: ಚಂದ್ರಕೀರ್ತಿ
ತಾರಾಗಣ: ಚಂದ್ರಕೀರ್ತಿ, ಪಾವನಾ ಗೌಡ
ರೇಟಿಂಗ್- 3
WINDOW SEAT FILM REVIEW: ಆಘಾತಕರ, ಆಹ್ಲಾದಕರ ಸೈಕಾಲಜಿಕಲ್ ಥ್ರಿಲ್ಲರ್
ಮುಖ್ಯ ಪಾತ್ರಧಾರಿಗಳಾದ ಚಂದ್ರಕೀರ್ತಿ, ಗಿರೀಶ್ ಶಿವಣ್ಣ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಎಲ್ಲರೂ ಈ ಸಿನಿಮಾವನ್ನು ತಮ್ಮ ನಟನೆ ಮೂಲಕ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ನಟರು ಮತ್ತು ಕತೆ ಒಂದರೊಳಗೆ ಸೇರಿಕೊಂಡು ಈ ಸಿನಿಮಾವನ್ನು ಹೆಚ್ಚು ಹತ್ತಿರಾಗಿಸುತ್ತಾರೆ. ಸಂಗೀತ ನಿರ್ದೇಶಕ ಸ್ವಾಮಿನಾಥನ್, ಛಾಯಾಗ್ರಾಹಕ ನವೀನ್ ಚಲ್ಲ ಇಬ್ಬರೂ ತಮ್ಮ ಪ್ರತಿಭೆಯಿಂದ ಈ ಸಿನಿಮಾವನ್ನು ಯಾವುದೇ ಭಾರವಿಲ್ಲದೆ ನೋಡಿಸಿಕೊಂಡು ಹೋಗುವಂತೆ ಮಾಡುತ್ತಾರೆ.
ಒಂದು ಸಿನಿಮಾ ವ್ಯಾಮೋಹಿ ಯುವತಂಡ ಒಟ್ಟಾಗಿ ಸೇರಿಕೊಂಡು ಒಂದು ಅಚ್ಚುಕಟ್ಟಾದ ಸಿನಿಮಾ ಮಾಡಬಲ್ಲರು ಅನ್ನುವುದಕ್ಕೆ ಈ ಸಿನಿಮಾ ಪುರಾವೆ.