ಸಿನಿಮಾದಲ್ಲಿ ನಿರ್ದೇಶಕನೇ ಸಾರ್ವಭೌಮ ಅಂತ ಕಡೆಗೂ ರವಿ ಬಸ್ರೂರು ತೋರಿಸಿಕೊಟ್ಟಿದ್ದಾರೆ. ಪ್ರೂವ್ ಮಾಡೋ ಅಂತ ದಬಾಯಿಸಿ ಕೇಳುವವರಿಗೆ ಗಿರ್ಮಿಟ್ ಸಿನಿಮಾನೇ ಸಾಕ್ಷಿ. ಆ್ಯವರೇಜ್ ವಿಲನ್ನು ನಾಲ್ಕೈದು ಪುಡಿ ವಿಲನ್ನುಗಳ ಜೊತೆ ಅಬ್ಬರಿಸಿ ಬೊಬ್ಬಿರಿಯುತ್ತಿರುವಾಗ ಒಬ್ಬ ಧೈರ್ಯ ಮಾಡಿ ನಿನ್ನ ಹುಟ್ಟಡಗಿಸೋ ಗಂಡು ಬಂದೇ ಬರುತ್ತಾನೆ ಎನ್ನುತ್ತಾನೆ.
ರಾಜೇಶ್ ಶೆಟ್ಟಿ
ಅದಾಗಿ ಎರಡೇ ಸೆಕೆಂಡಲ್ಲಿ ರಾಯಲ್ ಬೈಕ್‌ನಲ್ಲಿ ಬಂದ ಮೂರಡಿ ವೀರ ಆರಡಿ ಡೈಲಾಗ್ ಉದುರಿಸುತ್ತಾನೆ. ಅರೆರೆ ಅವನ ಬಾಯಲ್ಲಿ ರಾಕಿಂಗ್ ಸ್ಟಾರ್ ಯಶ್ ವಾಯ್ಸು. ವಾಯ್ಸೇ ಬಂದು ಹೊಡೆಯುತ್ತೇನೋ ಅನ್ನುವ ರೀತಿ ಆತ ಎಲ್ಲರನ್ನೂ ಹೊಡೆದು ಪುಡಿ ಮಾಡಿ ಬಿಸಾಕುತ್ತಾನೆ. ಹಾಗಂತ ಈ ಹೀರೋ ಯಾವುದೋ ಸೂಪರ್‌ಸ್ಟಾರ್ ಅಲ್ಲ. ಪುಟ್ಟ ಹುಡುಗ.
ಸಖತ್ತಾಗಿದೆ ರಾಧಿಕಾ ಪಂಡಿತ್- ಯಶ್ ಮಾಡಿರುವ ‘ಗಿರ್ಮಿಟ್’!
ಈ ಸಿನಿಮಾದಲ್ಲಿರೋದೆಲ್ಲರೂ ಮಕ್ಕಳು. ಆದರೆ ಅವರು ಮಾಡಿರುವ ಪಾತ್ರ ದೊಡ್ಡವರದು. ದೊಡ್ಡದೊಡ್ಡ ಕಲಾವಿದರೆಲ್ಲಾ ನನಗೆ ಬೇಡವೇ ಬೇಡ, ಪುಟ್ಟ ಮಕ್ಕಳ ಕೈಯಲ್ಲೇ ಎಲ್ಲವನ್ನೂ ಮಾಡಿಸುತ್ತೇನೆ ಎಂಬ ರವಿ ಬಸ್ರೂರು ಧೈರ್ಯ ಇದ್ದಂತಿದೆ ಈ ಗಿರ್ಮಿಟ್ಟು. ಅದಕ್ಕೆ ತಕ್ಕಂತೆ ಕತೆಯೂ ಇದೆ. ಫುಲ್ಲು ಕಮರ್ಷಿಯಲ್ಲು. ಎರಡು ಫೈಟು, ಮೂರು ಸಾಂಗು, ವೀರಾವೇಶಕ್ಕೆ ಉಗ್ರವಾದ ಡೈಲಾಗು, ನೆಂಚಿಕೊಳ್ಳಲು ಸೆಂಟಿಮೆಂಟು, ಎರಡು ಹನಿ ಕಣ್ಣೀರು, ಹಗುರಾಗಲು ಕಾಮಿಡಿ. ಏನುಂಟು ಏನಿಲ್ಲ.
ಗಿರ್ಮಿಟ್ ಸಿನಿಮಾದ ಶಕ್ತಿ ಇಲ್ಲಿ ನಟಿಸಿರುವ ಮಕ್ಕಳು. ಅವರ ಒಂದೊಂದು ಎಕ್ಸ್‌ಪ್ರೆಷನ್ ಕೂಡ ಮುದ್ದು ಮುದ್ದು. ಈ ಮಕ್ಕಳನ್ನು ನೋಡುವುದಕ್ಕಾಗಿಯೇ ಸಿನಿಮಾ ನೋಡಬೇಕು ಅನ್ನಿಸಿದರೆ ತಪ್ಪೇನೂ ಇಲ್ಲ. ಆದರೆ ಅವರ ಧ್ವನಿಯೇ ಇಲ್ಲಿ ಅವರಿಗೆ ಭಾರ. ಯಶ್, ರಾಧಿಕಾ ಪಂಡಿತ್, ಅಚ್ಯುತ್ ಕುಮಾರ್, ತಾರಾ, ರಂಗಾಯಣ ರಘು, ಸುಧಾ ಬೆಳವಾಡಿ, ಪೆಟ್ರೋಲ್ ಪ್ರಸನ್ನ ಮುಖ್ಯ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. ಹಾಗಾಗಿ ಈ ಸಿನಿಮಾವನ್ನು ರೇಡಿಯೋದಲ್ಲಿ ಬಿಡುಗಡೆ ಮಾಡಿದರೂ ಜನ ಕೇಳಬಹುದು.
ಚಿತ್ರ ವಿಮರ್ಶೆ: ಕಪಟ ನಾಟಕ ಪಾತ್ರಧಾರಿ
ಸಿನಿಮಾದ ಛಾಯಾಗ್ರಾಹಕ ಸಚಿನ್ ಬಸ್ರೂರು ಕೆಲವು ಫ್ರೇಮ್ ಅನ್ನು ಎಷ್ಟು ಚೆಂದ ಇಟ್ಟಿದ್ದಾರೆ ಅಂದ್ರೆ ಅದೊಂದು ಪೇಂಟಿಂಗ್ ಥರ ಅನ್ನಿಸುತ್ತದೆ. ಅದಕ್ಕಾಗಿ ಅವರು ಮೆಚ್ಚುಗೆ ಅರ್ಹರು. ಇನ್ನು ಇಲ್ಲಿ ನಿರ್ದೇಶಕ ರವಿ ಬಸ್ರೂರಿಗಿಂತ ಸಂಗೀತ ನಿರ್ದೇಶಕ ರವಿ ಬಸ್ರೂರಿಗೆ ಒಂದು ಅಂಕ ಜಾಸ್ತಿ. ಹೊಸ ಪ್ರಯೋಗ ಮಾಡುವ ಅವರ ಧೈರ್ಯಕ್ಕೆ ಒಂದು ಅಂಕ ಬೋನಸ್ಸು. ಸುಖಕರ ಪಯಣಕ್ಕೆ ಒಳ್ಳೆಯ ಕತೆಯೊಂದೇ ದಾರಿ ಎಂಬುದು ಕಡೆಗಾದರೂ ಅರ್ಥವಾಗಬೇಕು.