ಚಿತ್ರ ವಿಮರ್ಶೆ: ಕಪಟ ನಾಟಕ ಪಾತ್ರಧಾರಿ

By Web Desk  |  First Published Nov 9, 2019, 9:14 AM IST

ಅವನು ಹೇಳೋದು ಯಾಕೋ ನಿಜ ಅನ್ಸುತ್ತೆ. ಮತ್ತೊಂದು ಕಡೆ ಗೊಂದಲವೂ ಇದೆ. ಇರಲಿ,ಅವ್ನ ಬಿಟ್ಟು ಬಿಡಿ..!


ದೇಶಾದ್ರಿ ಹೊಸ್ಮನೆ

ಎದುರಿಗೆ ಕುಳಿತು ವಿಚಾರಣೆ ನಡೆಸುವ ಹಿರಿಯ ಪೊಲೀಸ್ ಅಧಿಕಾರಿಗೂ ಆತ ಅಮಾಯಕ ಎನಿಸುತ್ತದೆ. ಹಿರಿಯ ಅಧಿಕಾರಿಯ ಆದೇಶಕ್ಕೆ ಮನ್ನಣೆ ನೀಡಿ, ಪೊಲೀಸರು ಆತನನ್ನು ಶೆಲ್‌ನಿಂದ ಬಿಟ್ಟು ಕಳುಹಿಸುತ್ತಾರೆ. ಅಂತೂ ಬದುಕಿತು ಬಡಜೀವ ಎನ್ನುವ ನಿರಾಳತೆಯಲ್ಲಿ ಆತ ಠಾಣೆಯಿಂದ ಹೊರಬರುತ್ತಾನೆ. ಅಲ್ಲಿ ತನಕ ಆತನಿಗೆ ಪೊಲೀಸರು ನೀಡಿದ ಟಾರ್ಚರ್ ಕಂಡು ಪಾಪ ಅಂತ ಮರುಗಿದ್ದ ಪ್ರೇಕ್ಷಕನಿಗೆ ಮುಂದೆ ಶಾಕ್.

Latest Videos

undefined

#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ಸಿನಿಮಾ ಶುರುವಾಗುವುದೇ ಒಬ್ಬ ಕೆಳ ವರ್ಗದ ಹುಡುಗ ಕೆಲಸ ಹುಡುಕುವ ಕತೆಯೊಂದಿಗೆ. ಇಂತಹ ಸಮುದಾಯದ ಹುಡುಗರಿಗೆ ಒಂದು ರೀತಿಯ ಸಂಕಟ ಸಹಜ. ಒಂದೆಡೆ ಸರಿಯಾಗಿ ಓದಲಿಲ್ಲ ಎನ್ನುವ ಕೊರಗು, ಮತ್ತೊಂದು ಕಡೆ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ ಎನ್ನುವ ಸಂಕಟ. ಅಲ್ಲಿ ಅವೆರಡರ ನಡುವೆ ಸಿಲುಕಿ ಒದ್ದಾಡುವ ಕಥಾ ನಾಯಕ ಕೃಷ್ಣ, ಕೊನೆಗೂ ಒಂದು ಸೆಕೆಂಡ್ ಹ್ಯಾಂಡ್ ಆಟೋ ಖರೀದಿಸುತ್ತಾನೆ. ಅದರಿಂದ ಬದುಕು ಕಟ್ಟಿಕೊಳ್ಳುವ ಅವನ ಕನಸುಗಳಲ್ಲಿ ಎದುರಾದವಳು ಕಥಾ ನಾಯಕಿ. ಅವಳೊಂದಿಗಿನ ಕನಸು, ಹಾಡು-ಪಾಡು, ಕೂಲಿಂಗ್ ಗ್ಲಾಸು, ಶೋಕಿ ಬದುಕು ಆರಂಭವಾಗುವ ಹೊತ್ತಿಗೆ ಕತೆ ನಿರೀಕ್ಷೆ ಮಾಡದ ರೇಂಜಿಗೆ ತಲುಪುತ್ತದೆ. ಅತ್ಯಾಚಾರಕ್ಕೆ ಸಿಲುಕಿದ ಸತ್ತು ಹೋದ ಒಬ್ಬ ಅಮಾಯಕ ಹುಡುಗಿ ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆನ್ನುವ ಕತೆಗೆ ಹಲವು ರೋಚಕ ತಿರುವುಗಳಿವೆ.

#MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

ಇದು ಕ್ರಿಷ್ ನಿರ್ದೇಶನದ ಮೊದಲ ಸಿನಿಮಾ ಆದರೂ, ಹೊಸತನದಿಂದ ಕತೆಯನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಬಾಲು ನಾಗೇಂದ್ರ ತಮ್ಮ ಸಹಜ ಅಭಿನಯದ ಮೂಲಕ ಓರ್ವ ಪ್ರತಿಭಾವಂತ ನಟ ಎನ್ನುವುದನ್ನು ಇಲ್ಲೂ ರುಜುವಾತು ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಪಟ ನಾಟಕ ಪಾತ್ರಧಾರಿಯಾಗಿ ಅವತಾರವೆತ್ತಿದ್ದಾರೆ. ಅಮಾಯಕ ಹುಡುಗನಾಗಿ ಮಾತ್ರವಲ್ಲದೆ ಸಾಹಸ ದೃಶ್ಯಗಳಲ್ಲೂ ಅಬ್ಬರಿಸಿದ್ದಾರೆ. ನಟನೆ ಸಹಜವಾಗಿ ಕಾಣಿಸಿಕೊಳ್ಳುವ ಹಾಗೆ ಆ್ಯಕ್ಷನ್ ಸೀನ್‌ಗಳಲ್ಲೂ ಸಹಜತೆ ಎದ್ದು ಕಾಣುತ್ತದೆ. ಅವರ ಜತೆಗೆ ಸಂಗೀತಾ ಭಟ್ ಅಭಿನಯದಲ್ಲೂ ಪ್ರಬುದ್ಧತೆ ಇದೆ.

MeToo ವಿವಾದದಿಂದ ನಾನು ಕುಗ್ಗಿಲ್ಲ: ಸಂಗೀತಾ ಭಟ್

ಅವರಂತೆಯೇ ಕರಿಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್, ಉಗ್ರಂ ಮಂಜು ಹಾಗೂ ಜಯದೇವ್ ಕೂಡ ತಮ್ಮ ಅಭಿನಯದ ಮೂಲಕ ಮನಸ್ಸಲ್ಲಿ ಉಳಿದುಕೊಳ್ಳುತ್ತಾರೆ. ಚಿತ್ರದ ತಾಂತ್ರಿಕ ಕೆಲಸದಲ್ಲಿ ಛಾಯಾಗ್ರಹಣ ಹೆಚ್ಚು ಗಮನ ಸೆಳೆಯುತ್ತದೆ. ದೃಶ್ಯಗಳು ಕಣ್ಣ ಮುಂದೆಯೇ ನಡೆಯುತ್ತಿವೆ ಎನ್ನುವ ಹಾಗೆ ಕ್ಯಾಮೆರಾದ ಕುಸುರಿ ಕೆಲಸ ನೈಜವಾಗಿದೆ. ಆದಿಲ್ ನದಾಫ್ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಕೆಲಸ ನೋಡಿದರೆ ಭವಿಷ್ಯದಲ್ಲಿ ಬ್ಯುಸಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಕಿರಣ್ ಚಂದ್ರ ಹಾಗೂ ವೇಣು ಹಸ್ರಾಳಿ ಸಂಭಾಷಣೆ ಚಿತ್ರಕ್ಕೆ ಜೀವಾಳದಂತಿದೆ.

click me!