ಕ್ರಿಕೆಟ್ ಪ್ರೇಮದ ಕಹಿ ಸತ್ಯ: 'ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ' ಒಂದು ವಿಮರ್ಶೆ

By Suvarna NewsFirst Published Sep 25, 2024, 12:29 PM IST
Highlights

ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ ಚಿತ್ರದಲ್ಲಿ ಪತಿಯೊಬ್ಬ ತನ್ನ ಕ್ರಿಕೆಟ್ ಕನಸನ್ನು ಹೆಂಡತಿಯ ಮೂಲಕ ನನಸಾಗಿಸಿಕೊಳ್ಳುತ್ತಾನೆ. ಆದರೆ, ಅವಳ ಯಶಸ್ಸು ಅವನಲ್ಲಿ ಅಸೂಯೆ ಹುಟ್ಟಿಸುತ್ತದೆ. ಈ ಚಿತ್ರದಲ್ಲಿ ರಾಜಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ಅವರ ಅಭಿನಯ ಅದ್ಭುತವಾಗಿದೆ.

- ವೀಣಾ ರಾವ್, ಕನ್ನಡ ಪ್ರಭ

ಅವನಿಗೆ ಕ್ರಿಕೆಟಿಗನಾಗೋ ಕನಸಿಗೆ ಅಪ್ಪ ನೀರೆರೆಯೋಲ್ಲ. ಹೆಂಡ್ತಿ ಮೂಲಕ ತನ್ನ ಕನಸನ್ನು ಈಡೇರಿಸಿಕೊಳ್ಳುತ್ತಾನೆ. ಆದರೆ, ಯಾವಾಗ ಅವಳು ಗೆಲ್ಲುತ್ತಾಳೋ ಗಂಡನ ಅಸೂಯೆ ಸಂಬಂಧವನ್ನೇ ಹಾಳು ಮಾಡುತ್ತೆ. ಅದು ಸರಿ ಆಗೋದು ಹೇಗೆ? 

2024ರಲ್ಲಿ ಬಿಡುಗಡೆಯಾಗಿ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಧರ್ಮ ಫಿಲಮ್ಸ್‌ನ ಚಿತ್ರ ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ. ರಾಜಕುಮಾರ್ ರಾವ್ ಹಾಗೂ ಜಾನ್ವಿ ಕಪೂರ್ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಜರೀನಾ ವಹಾಬ್, ಕುಮುದ್ ಮಿಶ್ರಾ, ಯಾಮಿನಿ ಶರ್ಮಾ, ಪುರೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ ನಟಿಸಿದ್ದಾರೆ. ನಿರ್ದೇಶನ ಶರಣ್ ಶರ್ಮಾ.

Latest Videos

ಅವನು ಮಹೇಂದ್ರಾ, ಅವಳು ಮಹಿಮಾ. ಅವನಿಗೆ ಚಿಕ್ಕಂದಿನಿಂದ ಕ್ರಿಕೆಟಿಗನಾಗುವ ಹುಚ್ಚು. ಅವಳು ಚಿಕ್ಕಂದಿನಲ್ಲಿ ಕ್ರಿಕೆಟ್ ಪಟುವಾಗಬೇಕೆಂದು ಕನಸಿದ್ದರೂ, ತಂದೆ ಆಸೆಯಂತೆ ಡಾಕ್ಟರ್ ಆದವಳು. ಮಹಿಂದ್ರಾ ತಂದೆಯ ಕ್ರೀಡಾ ವಸ್ತುಗಳ ಬಹುದೊಡ್ಡ ಮಳಿಗೆಯ ಉಸ್ತುವಾರಿ ನೋಡುತ್ತಿರುತ್ತಾನೆ. ಅದು ಅವನಿಗೆ ಇಷ್ಟವಿಲ್ಲದ ಕೆಲಸ. ಆದರೆ ಅವನ ಕ್ರಿಕೆಟ್ ಹುಚ್ಚಿಗೆ ತಂದೆ ನೀರೆರೆದು ಪೋಷಿಸುವುದಿಲ್ಲ. ಕ್ರಿಕೆಟ್ ಬಗ್ಗೆ ಅಪಾರ ಅಸೆ ಇದ್ದರೂ ಅವನಿಗೆ ರಣಜಿಯಲ್ಲೇ ಆಯ್ಕೆ ಆಗಲು ಸಾಧ್ಯವಾಗುವುದಿಲ್ಲ. ಅವನ ಕೋಚ್ ಬೆನ್ನಿ ದಯಾಳ್ ನೀನು ಕ್ರಿಕೆಟರ್ ಆಗಲು ಸಾಧ್ಯವೇ ಇಲ್ಲ, ಬೇಕಾದರೆ ಕೋಚ್ ಆಗು ಎಂದು ಬಿಡುತ್ತಾನೆ. ಕೋಚ್ ಆಗಲು ಮಹಿಯ ಸ್ವಾಭಿಮಾನ ಅಡ್ಡ ಬರುತ್ತದೆ. ಮನೆಯಲ್ಲಿ ತಂದೆಯಿಂದಲೂ ಅಂಥ ಪ್ರೋತ್ಸಾಹ ದೊರೆಯುವುದಿಲ್ಲ. ತಂದೆಯ ಬಲವಂತಕ್ಕೆ ಮಳಿಗೆಯಲ್ಲಿ ನಿಲ್ಲುತ್ತಾನೆ.

ಐಸಿ 814 ದಿ ಕಂದಹಾರ್ ಹೈಜಾಕ್ ಕಥೆ ಹೇಳೋ ಚಿತ್ರವಿದು!

ಮಹೇಂದ್ರಾ ಮತ್ತು ಮಹಿಮಾ ಹಿರಿಯರು ತೋರಿಸಿದ ಸಂಬಂಧದಲ್ಲಿ ಸತಿಪತಿಗಳಾಗುತ್ತಾರೆ. ಇಬ್ಬರಿಗೂ ಕ್ರಿಕೆಟ್ ಮೇಲೆ ಅಪಾರ ಪ್ರೀತಿ ಮತ್ತು ಅಸ್ಥೆ ಇರುವುದು ಪರಸ್ಪರ ಮಾತುಕತೆಯಿಂದ ತಿಳಿದು ಕೊಳ್ಳುತ್ತಾರೆ. ಮಹಿಮಾ ಡಾಕ್ಟರಾದರೂ ಕ್ರಿಕೆಟ್ ಪ್ರೇಮಿ. ಮಹಿಂದ್ರಾ ಮದುವೆಗೆ ಮುನ್ನವೇ ಅವಳ ಬಳಿ ತಾನು ಕ್ರಿಕೆಟ್ ಪಟು ಆಗಬೇಕೆಂದು ಆಸೆ ಇದ್ದದ್ದು ತಂದೆಯ ಪ್ರೋತ್ಸಾಹ ದೊರೆಯದೇ ತಾನು ಏನೂ ಆಗದೆ ಹೋದದ್ದು ಹೇಳಿ ಕೊಳ್ಳುತ್ತಾನೆ. ಮಹಿ ಅವನ ಪ್ರಾಮಾಣಿಕತೆಗೆ ಮೆಚ್ಚಿ ಅವನನ್ನೇ ಮದುವೆಯಾಗುತ್ತಾಳೆ.

ಒಮ್ಮೆ ಹಿರಿಯ ಕೋಚ್‌ನನ್ನು ನೋಡಲು ಮಹಿಂದ್ರಾ ಮಹಿಯ ಜೊತೆ ಹೋಗಿದ್ದಾಗ ಅಲ್ಲಿ ಮಹಿ ಕ್ರಿಕೆಟ್ ಆಡುತ್ತಾಳೆ. ಅವಳು ಬಾರಿಸುವ ಸಿಕ್ಸರ್ ನೋಡಿ ಮಹೀಂದ್ರಾ ಚಕಿತನಾಗುತ್ತಾನೆ. ತನ್ನ ಹೆಂಡತಿಗೇ ತಾನು ಕೋಚ್ ಯಾಕಾಗಬಾರದು ಎನಿಸುತ್ತದೆ. ತನ್ನ ಹೆಂಡತಿಗೆ ಕೊಂಚ ತರಪೇಬೇತು ನೀಡಿದರೆ, ಅವಳು ಒಳ್ಳೆಯ ಕ್ರಿಕೆಟರ್ ಆಗುತ್ತಾಳೆ. ತನ್ನ ಆಸೆಯೂ ನೆರವೇರುತ್ತದೆ ಎಂದು ಕೊಳ್ಳುತ್ತಾನೆ.

ಮೊದಲು ಮಹಿ ಗಂಡನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ನಾನೀಗ ಡಾಕ್ಟರ್ ಆಗಿದ್ದೇನೆ, ಕ್ರಿಕೆಟರ್ ಆಗುವ ಕನಸು ನನ್ನ ಬಾಲ್ಯದ್ದು. ಈಗ ಅದನ್ನು ಮೀರಿ ಮುಂದೆ ಬಂದಿದ್ದೇನೆ. ಈಗ ಕ್ರಿಕೆಟರ್ ಆಗಲು ಸಾಧ್ಯವೇ ಇಲ್ಲ ಎಂದು ಬಿಡುತ್ತಾಳೆ. ಅವಳ ಸೀನಿಯರ್ ವೈದ್ಯರಿಂದ ಅವಳಿಗೆ ಕಿರುಕುಳ ಆಗುತ್ತಿರುತ್ತದೆ. ಇದನ್ನು ಮಹಿಂದ್ರಾ ಅವಳಿಗೆ ನೆನಪಿಸಿ, ಹೀಗೆ ಎಷ್ಟು ದಿನ ಅವನ ಕಿರುಕುಳ ಸಹಿಸುತ್ತೀಯಾ? ನಿನ್ನ ಆಸೆ ಕ್ರಿಕೆಟರ್ ಆಗುವುದು ತಾನೆ? ಡಾಕ್ಟರ್ ಆಗಿದ್ದು ನಿನ್ನ ತಂದೆಯ ಆಸೆಯಂತೆ. ನಿನ್ನ ಆಸೆಯಂತೆ ಅಲ್ಲವಲ್ಲ ಎಂದು ಎಷ್ಟೋ ಅವಳ ಬಳಿ ವಾದ ಮಾಡುತ್ತಾನೆ. ಕೊನೆಗೂ ಅವಳನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ.

ಈ ಮಧ್ಯೆ ಒಮ್ಮೆ ಕ್ರಿಕೆಟ್ ಆಟವನ್ನು ಟಿವಿಯಲ್ಲಿ ನೋಡುವ ಸಲುವಾಗಿ ಮಹಿಂದ್ರಾ ತನ್ನ ಅಂಗಡಿಯ ಲಾಕ್ ಸರಿಯಾಗಿ ಮಾಡದೇ ಮನೆಗೆ ಹೋಗಿರುತ್ತಾನೆ. ಅಂಗಡಿಯಲ್ಲಿ ಕಳ್ಳತನವಾಗಿಬಿಡುತ್ತದೆ. ಇದರಿಂದ ತಂದೆ ಹಾಗು ಮಹಿಂದ್ರನ ಸಂಬಂಧ ಮತ್ತೂ ಹದಗೆಡುತ್ತದೆ. ತಂದೆ ಮಗನಿಗೆ ನಿನ್ನ ಕ್ರಿಕೆಟ್ ಹುಚ್ಚಿನಿಂದ ನನ್ನ ಅಂಗಡಿ ನಷ್ಟವಾಯ್ತು ಎಂದು ನಿಂದಿಸುತ್ತಾನೆ. ಇದರಿಂದ ಮಹಿಂದ್ರನ ಕ್ರಿಕೆಟ್ ಮೋಹ ಇನ್ನಷ್ಟು ಬಲವಾಗುತ್ತದೆ. ತಾನು ಅಂಗಡಿಯನ್ನು ನೋಡಿಕೊಳ್ಳುವುದಿಲ್ಲ. ಕೋಚ್ ಆಗುತ್ತೇನೆ. ನನ್ನ ಹೆಂಡತಿಗೇ ಕೋಚ್ ಆಗಿ ಕ್ರಿಕೆಟ್ ಕಲಿಸುತ್ತೇನೆ. ನಿನ್ನ ಅಂಗಡಿಯಲ್ಲಿ ನನ್ನ ಫೋಟೋ ಹಾಕಲು ಜಾಗ ಈಗಿನಿಂದಲೇ ಕಾದಿರಿಸು, ಎಂದು ಹೇಳಿ ಹೊರಬಂದು ಬಿಡುತ್ತಾನೆ. ತಂದೆಯ ಅವಹೇಳನದ ನಗು ಇವನನ್ನು ಹಿಂಬಾಲಿಸುತ್ತದೆ.

ಮನೋರಥಂಗಳ್: ಅಪ್ಪಟ ದೇಸಿ ಸೊಗಡಿನ ದೃಶ್ಯಕಾವ್ಯ

ಕ್ರಿಕೆಟ್ ಯಾತ್ರೆ ಶುರು:
ಮಹಿಂದ್ರಾ ಮಹಿಯ ಕ್ರಿಕೆಟ್ ಯಾತ್ರೆ ಪ್ರಾರಂಭವಾಗುತ್ತದೆ. ಕಠಿಣವಾಗಿ ಅಭ್ಯಾಸ ಮಾಡಿಸುತ್ತಾನೆ. ಇಬ್ಬರೂ ಪರಸ್ಪರ ಹೊಂದಾಣಿಕೆಯೊಂದಿಗೆ ಪ್ರೀತಿಯಿಂದ ಅಭ್ಯಾಸ ಶುರು ಮಾಡುತ್ತಾರೆ. ಕೊನೆಗೂ ಮಹಿಂದ್ರಾ ಮಹಿಯನ್ನು ರಾಜ್ಯಮಟ್ಟದ ಕ್ರಿಕೆಟ್ ಸ್ಪರ್ಧೆಗೆ ಆಯ್ಕೆಯಾಗುವಂತೆ ಮಾಡುವುದರಲ್ಲಿ ಸಫಲನಾಗುತ್ತಾನೆ. ಆಯ್ಕೆಯಾದ ಮಹಿಗೆ ಮಾಧ್ಯಮಗಳ ಸಂದರ್ಶನ ನಡೆಯುತ್ತದೆ. ಅಲ್ಲಿಗೆ ಮಹಿಂದ್ರನನ್ನು ಬಿಡುವುದಿಲ್ಲ. ಆಗ ಅವನಿಗೆ ಎಲ್ಲೋ ಮನದಲ್ಲಿ ಒಂದು ಕಡೆ ಅಸೂಯೆಯ ಗುಳ್ಳೆ ಭಗ್ಗನೆ ಒಡೆಯುತ್ತದೆ. ಅವಳಿಗೆ ತರಬೇತಿ ಕೊಟ್ಟವನು ತಾನು. ತನಗೇ ಇಲ್ಲಿ ಬೆಲೆ ಇಲ್ಲ ಎನಿಸಿದಾಗ ಮಂಕಾಗಿಬಿಡುತ್ತಾನೆ. ಅವರಿಬ್ಬರ ನಡುವೆ ಕಂದಕ ಶುರುವಾಗುತ್ತದೆ. ಆ ಕಂದಕ ಇಬ್ಬರಿಗೂ ಗೊತ್ತಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಮಹಿಂದ್ರಾ, ಮಹಿಯನ್ನು ಮಾತುಮಾತಿಗೆ ಚುಚ್ಚಿ ನೋಯಿಸುವುದು ಅಸಹನೆ ತೋರುವುದು ನಡೆಯುತ್ತಿರುತ್ತದೆ. ಮಹಿಗೆ ಈ ಮಹಿಂದ್ರನ ನಡೆ ಹೊಸತು. ಅವಳಿಗೆ ಏನು ಮಾಡಲೂ ತೋಚುವುದಿಲ್ಲ. ವಾಪಸ್ ವೈದ್ಯ ವೃತ್ತಿಗೂ ಹೋಗಲಾಗದೇ, ಕ್ರಿಕೆಟನ್ನೂ ಪರಿಪೂರ್ಣ ಮನದಿಂದ ಆಡಲಾಗದೇ ಒದ್ದಾಡುತ್ತಾಳೆ. ಅವಳ ಅಪ್ಪಅಮ್ಮನಿಗೆ ಅವಳು ಕ್ರಿಕೆಟರ್ ಆಗುವುದು ಎಷ್ಟು ಮಾತ್ರವೂ ಇಷ್ಟವಿರುವುದಿಲ್ಲ. ಅಪ್ಪ, ಅಮ್ಮನ ಬೆಂಬಲವೂ ಇಲ್ಲದೆ ಮಹಿ ಕಂಗಾಲಾಗುತ್ತಾಳೆ. ರಾಜ್ಯ ಮಟ್ಟದ ಆಟದ ಕ್ರಿಕೆಟ್ ಕೋಚ್ ಬೇರೆ ಇರುತ್ತಾನೆ. ಅವನು ಮಹಿಯನ್ನು ಗಮನಿಸುತ್ತಿರುತ್ತಾನೆ. ಆಗಾಗ 'ನೀನು ಕ್ರಿಕೆಟ್ ಈಗ ಸರಿಯಾಗಿ ಆಡುತ್ತಿಲ್ಲ. ನಿನ್ನ ಧ್ಯಾನ ಎಲ್ಲೋ ಇದೆ, ಏಕಾಗ್ರತೆ ಇಲ್ಲ. ಹೀಗೆ ಆಡಿದರೆ ನಾನು ನಿನ್ನನ್ನು  ಟೀಂನಿಂದ ಕೈ ಬಿಡಬೇಕಾಗುತ್ತದೆ.' ಎಂದು ನಿಷ್ಟುರವಾಗಿ ಹೇಳಿ ಬಿಡುತ್ತಾನೆ. ಮಹಿ ಇನ್ನೂ ಪಾತಾಳಕ್ಕೆ ಕುಸಿಯುತ್ತಾಳೆ.

ಮಹಿಂದ್ರನನ್ನೇ ಪ್ರಾಕ್ಟೀಸ್ ಮಾಡಿಸಲು ಕೇಳಿ ಕೊಳ್ಳುತ್ತಾಳೆ. ಪ್ರಾಕ್ಟೀಸ್ ಮಾಡುವಾಗ ಮಹಿಗೂ ಮಹಿಂದ್ರಾನಿಗೂ ಜಗಳವಾಗುತ್ತದೆ. ಮಹಿ ಮಹಿಂದ್ರನನ್ನು 'ನೀನು ಸ್ವಾರ್ಥಿ. ನಿನ್ನ ಕನಸನ್ನು ನನ್ನ ಮೇಲೆ ಹೇರುತಿದ್ದೀಯ. ನಿನ್ನ ಮಹತ್ವಾಕಾಂಕ್ಷೆಗೆ ನನ್ನನ್ನು ಏಣಿಯಾಗಿಸಿ, ನನ್ನ ಜೀವನ ದುರ್ಭರ ಮಾಡಿದ್ದೀಯ,' ಎಂದು ಬೈದುಬಿಡುತ್ತಾಳೆ. ರಾಜ್ಯ ಕ್ರಿಕೆಟ್ ಟೀಂ ಜೊತೆ ಮ್ಯಾಚಿಗಾಗಿ ಪರ ಊರಿಗೆ ಹೋಗಿ ಬಿಡುತ್ತಾಳೆ.

 

ಮನೆಯಲ್ಲಿ ಸಪ್ಪಗೆ ಕುಳಿತಿದ್ದ ಮಗನನ್ನು ಕಂಡು ಮಹಿಂದ್ರನ ತಾಯಿ (ಜರೀನಾ ವಹಾಬ್) ಕಾರಣ ಕೇಳುತ್ತಾಳೆ. ಮಗನ ಜೊತೆ ಮಾತನಾಡಿ, ಅವನ ಮನಸ್ಸು ತಿಳಿ ಮಾಡುತ್ತಾಳೆ. 'ಕೋಚ್ ಆಗಿ ನಿನ್ನ ತರಬೇತಿ ಯಶಸ್ವಿಯಾಗಿದೆ. ಮಹಿ ರಾಜ್ಯ ಕ್ರಿಕೆಟಿಗೆ ಆಯ್ಕೆಯಾಗಿದ್ದಾಳೆ. ಇದಕ್ಕಿಂತ ಇನ್ನೇನು ಬೇಕು ನಿನಗೆ? ಸಂತೋಷವನ್ನು ಮನಸ್ಸಿನಿಂದ ನೋಡು. ಅನುಭವಿಸು. ಈಗ ನಾನು ತಾಯಿಯಾಗಿ ನಿಮ್ಮ ಸಂತೋಷವನ್ನೇ ನನ್ನ ಸಂತೋಷವೆಂದು ತಿಳಿದಿಲ್ಲವೇ? ನನಗೆ ಯಾರಾದರೂ ಗುರ್ತಿಸಿ ಪ್ರಶಸ್ತಿ ಕೊಡುತ್ತಾರೆಯೇ?’ ಎಂದು ಕೇಳುತ್ತಾಳೆ. ಈಗ ಮಹಿಂದ್ರಾನ ಕಣ್ಣು ತೆರೆಯುತ್ತದೆ. ಅವನ ತಪ್ಪಿನ ಅರಿವಾಗುತ್ತದೆ. ಮಹಿ ಇದ್ದಲ್ಲಿಗೆ ಓಡುತ್ತಾನೆ, ಅವಳ ಕ್ಷಮೆ ಕೇಳುತ್ತಾನೆ. ಇಬ್ಬರೂ ಒಂದಾಗುತ್ತಾರೆ. ಗಂಡನ ಬೆಂಬಲ ಸಿಕ್ಕ ಮಹಿ ಕ್ರಿಕೆಟ್ನಲ್ಲಿ ಸಿಕ್ಸರ್ ಬಾರಿಸಿ ರಾಜ್ಯ ಮಟ್ಟದಲ್ಲಿ ಗೆಲುವು ತಂದು ಕೊಡುತ್ತಾಳೆ. ಹಾಗೆಯೇ ಭಾರತದ ಟೀಮಿಗೂ ಆಯ್ಕೆಯಾಗುತ್ತಾಳೆ. ಹೆಂಡತಿ ಗೆಲುವಿನಲ್ಲಿ ಮಹಿಂದ್ರಾ ತನ್ನ ಗೆಲುವನ್ನೂ ಕಾಣುತ್ತಾನೆ. ಖುಷಿಯಿಂದ ಕುಣಿಯುತ್ತಾನೆ. ಕಥೆ ಸುಖಾಂತ್ಯವಾಗುತ್ತದೆ.

ಮಗಳನ್ನು ಬಲೆಗೆ ಬೀಳಿಸಿದ 'ಸೈತಾನ್': ಮನಸ್ಸನ್ನು ವಶಕ್ಕೆ ಪಡೆದು, ತನ್ನಿಷ್ಟದಂತೆ ಕುಣಿಸುವ ಶೈತಾನ

ಮಹಿಂದ್ರಾ ಆಗಿ ರಾಜ್‌ಕುಮಾರ್ ರಾವ್, ಮಹಿ ಆಗಿ ಜಾನ್ವಿ ಕಪೂರ್ ಬಹಳ ಚೆಂದವಾಗಿ ಅಭಿನಯಿಸಿದ್ದಾರೆ. ಈ ಚಿತ್ರ ನೋಡುವಾಗ ದಶಕಗಳ ಹಿಂದೆ ಬಿಡುಗಡೆಯಾದ ಅಮಿತಾಬ್, ಜಯಾ ಚಿತ್ರ ಅಭಿಮಾನ್ ನೆನಪಾಗಬಹುದು.
 

click me!