ಲಂಗೋಟಿ ಮ್ಯಾನ್‌ ಚಿತ್ರ ವಿಮರ್ಶೆ: ಸರಳ ಕಥೆಯ ಹಿನ್ನೆಲೆಯಲ್ಲಿ ಸಂಕೀರ್ಣ ವಿಚಾರಗಳ ಹೊದಿಕೆ

By Kannadaprabha News  |  First Published Sep 21, 2024, 4:33 PM IST

ತನ್ನ ಸರೀಕರಿಂದ ಗೇಲಿಗೊಳಗಾಗುತ್ತ ಬೆಳೆಯುವ ಈತನಿಗೆ ಒಳಬಟ್ಟೆ ಅನ್ನುವುದೇ ದುಃಸ್ವಪ್ನವಾಗುತ್ತದೆ.  ಎಲ್ಲವೂ ಮುಕ್ತವಾಗಿರುವ ಈ ಕಾಲದಲ್ಲಿ ಪ್ರಾಚೀನ ಪರಂಪರೆಯನ್ನು ಪಾಲಿಸಬೇಕಾದ ದರ್ದಿಗೆ ಬಿದ್ದವ ಆ ನಿಯಮ ಮೀರಲು ಹೊರಟಾಗ ಏನಾಯ್ತು ಅನ್ನೋದು ಸಿನಿಮಾದ ಕಥೆ.


ಪೀಕೆ

ಪರಂಪರೆ ಮತ್ತು ಆಧುನಿಕತೆಗಳ ನಡುವಿನ ಸಂಘರ್ಷ ಬಹಳ ಹಳೆಯದು. ಆದರೆ ಇದನ್ನು ಸಂಕೇತವಾಗಿಟ್ಟು ಈ ಕಾಲದ ದೃಷ್ಟಿಕೋನದಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕಿ ಸಂಜೋತಾ. ಸಂಪ್ರದಾಯಸ್ಥ ಪುರೋಹಿತ ಕುಟುಂಬ. ಇಲ್ಲಿರುವ ತಾತನಿಗೆ ಲಂಗೋಟಿಯ ಬಗ್ಗೆ ಅಭಿಮಾನ. ಕಾಲ ಯಾವುದೇ ಬರಲಿ, ತನ್ನ ಕುಟುಂಬದವರೆಲ್ಲ ಅದನ್ನೇ ತೊಟ್ಟುಕೊಳ್ಳಬೇಕು ಎಂಬ ಖಡಕ್ ನಿಯಮ ಅವರದು. ಆದರೆ ಈ ಕಠಿಣ ನಿಯಮದಿಂದ ಪೇಚಿಗೆ ಸಿಲುಕುವುದು ಈ ಜನರೇಶನ್‌ ಹುಡುಗ ತೀರ್ಥ. 

Latest Videos

undefined

ತನ್ನ ಸರೀಕರಿಂದ ಗೇಲಿಗೊಳಗಾಗುತ್ತ ಬೆಳೆಯುವ ಈತನಿಗೆ ಒಳಬಟ್ಟೆ ಅನ್ನುವುದೇ ದುಃಸ್ವಪ್ನವಾಗುತ್ತದೆ.  ಎಲ್ಲವೂ ಮುಕ್ತವಾಗಿರುವ ಈ ಕಾಲದಲ್ಲಿ ಪ್ರಾಚೀನ ಪರಂಪರೆಯನ್ನು ಪಾಲಿಸಬೇಕಾದ ದರ್ದಿಗೆ ಬಿದ್ದವ ಆ ನಿಯಮ ಮೀರಲು ಹೊರಟಾಗ ಏನಾಯ್ತು ಅನ್ನೋದು ಸಿನಿಮಾದ ಕಥೆ. ಇದರ ಜೊತೆಗೆ ಇನ್ನೊಂದು ಸ್ಟೋರಿ ಲೈನ್‌ ಈ ಸಿನಿಮಾ ಕಥೆಯೊಂದಿಗೆ ಸೇರಿಕೊಂಡಿದೆ. ಕೊಂಚ ಹಾಸ್ಯಶೈಲಿಯಿಂದ ಶುರುವಾಗುವ ಸಿನಿಮಾ ಸೆಕೆಂಡ್‌ ಹಾಫ್‌ನಲ್ಲಿ ಗಂಭೀರವಾಗುತ್ತದೆ. ಬದುಕಿನ ಕಷ್ಟಗಳ ಹಾಗೆ ಇಲ್ಲಿನ ಕಷ್ಟಗಳೂ ಮುಗಿಯುವುದೇ ಇಲ್ಲ.

ಲಂಗೋಟಿ ಮ್ಯಾನ್‌
ತಾರಾಗಣ: ಆಕಾಶ್‌ ರ್‍ಯಾಂಬೊ, ಸ್ನೇಹಾ ಖುಷಿ, ಸಂಹಿತಾ ವಿನ್ಯ, ಹುಲಿ ಕಾರ್ತಿಕ್‌
ನಿರ್ದೇಶನ: ಸಂಜೋತಾ ಭಂಡಾರಿ
ರೇಟಿಂಗ್‌ : 3

ಸರಳ ಕಥಾಹಂದರಕ್ಕೆ ಕಾಂಪ್ಲೆಕ್ಸ್‌ ವಿಚಾರಗಳ ಹೊದಿಕೆ ಇದೆ. ಸಂಜೋತಾ ಈ ಸಿನಿಮಾ ಮೂಲಕ ಒಂದು ಪ್ರಯೋಗ ಮಾಡಲು ಹೊರಟಂತಿದೆ. ಸಾಕಷ್ಟು ಸಮಯ ತೆಗೆದುಕೊಂಡು ಕಥೆಯನ್ನು ವಿವರಿಸುತ್ತಾರೆ. ಕಥೆಗೆ ಪೂರಕ ಅಂಶಗಳನ್ನು ಹೇಳಲು ಹೊರಟು ಮತ್ತೊಂದು ಕಥೆಯನ್ನೇ ಹೇಳುತ್ತಾರೆ. ಸಹನೆಯ ಮಾರ್ಗ ನೆಚ್ಚುವವರಿಗೆ ಈ ಸಿನಿಮಾ ಇಷ್ಟವಾಗಬಹುದು. ಆಕಾಶ್‌ ರ್‍ಯಾಂಬೊ ಚುರುಕುತನದಿಂದಲೇ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇತರರ ನಟನೆಯೂ ಪೂರಕವಾಗಿದೆ.

click me!