ಕೋಮಲ್, ಲೇಖಾ ಚಂದ್ರ, ಗೋವಿಂದೇಗೌಡ ನಟಿಸಿರುವ ನಮೋ ಭತಾತ್ಮ 2 ಸಿನಿಮಾ ಬಿಡುಗಡೆಯಾಗಿದೆ. ಚಿತ್ರ ಹೇಗಿದೆ?
ರಾಜೇಶ್ ಶೆಟ್ಟಿ
ನಗಿಸುವುದು ಎಷ್ಟು ಕಷ್ಟ. ಆದರೆ ಕೋಮಲ್ ಅವರಿಗೆ ನಗಿಸುವುದು ಅಷ್ಟು ಸುಲಭ. ಹಾವಭಾವದಿಂದ, ಡೈಲಾಗ್ ಡೆಲಿವರಿಯಿಂದ, ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವರು ಕೋಮಲ್. ಅವರು ಮತ್ತದೇ ಟ್ರ್ಯಾಕಿಗೆ ಹೊರಳಿರುವುದನ್ನು ಕಾಣಿಸುವ ಸಿನಿಮಾ ಇದು.
undefined
ಸಿನಿಮಾದ ಮೊದಲಾರ್ಧ ಪಾತ್ರಗಳನ್ನು, ಕತೆಯನ್ನು ಪರಿಚಯಿಸಿದರೆ ದ್ವಿತೀಯಾರ್ಧದಲ್ಲಿ ಹಾಸ್ಯ ಮತ್ತು ಸಂದೇಶ ಎರಡೂ ಇದೆ. ಕೋಮಲ್ ಕೆಲವು ಸನ್ನಿವೇಶಗಳಲ್ಲಿ ಇಡೀ ಥಿಯೇಟರ್ ನಗುವಿನ ಅಲೆಯಲ್ಲಿ ಅಲ್ಲಾಡಿಹೋಗುವಂತೆ ನಟಿಸಿದ್ದಾರೆ. ಅವರಿಗೆ ಗೋವಿಂದೇಗೌಡರು ಸಾಥ್ ಕೊಟ್ಟಿದ್ದಾರೆ. ಒಳ್ಳೆಯ ಕರ್ಮದಿಂದ ಒಳ್ಳೆಯದಾಗುತ್ತದೆ, ತಮಗೇ ಗೊತ್ತಿಲ್ಲದೆ ಇನ್ನೊಬ್ಬರಿಗೆ ಕೆಟ್ಟದ್ದು ಮಾಡಿದರೂ ಕೆಟ್ಟದ್ದೇ ಸಿಗುತ್ತದೆ ಎಂಬ ಸಂದೇಶವನ್ನು ಇಂಥದ್ದೊಂದು ಹಾರರ್ ಕಾಮಿಡಿ ಸಿನಿಮಾದಲ್ಲಿ ಕಟ್ಟಿಕೊಟ್ಟಿರುವ ಬರಹಗಾರ, ನಿರ್ದೇಶಕರ ಜಾಣ್ಮೆಗೆ ಮೆಚ್ಚುಗೆ ಸಲ್ಲಬೇಕು.
Achar & Co Review: ಮದ್ವೆ ಸಂಸಾರ ಸುಲಭವಲ್ಲ, ಸುಮಾಳಿಗೆ ಸಾಥ್ ಕೊಟ್ರು ಏರಿಯಾ BBCಗಳು!
ತಾರಾಗಣ: ಕೋಮಲ್, ಲೇಖಾ ಚಂದ್ರ, ಗೋವಿಂದೇಗೌಡ
ನಿರ್ದೇಶನ: ಮುರಳಿ
ರೇಟಿಂಗ್: 3
ಇದೊಂದು ಪಕ್ಕಾ ಹಾರರ್ ಕಾಮಿಡಿ ಸಿನಿಮಾ. ಹಾಗಾಗಿ ಇಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಲಾಜಿಕ್ ಅನ್ನು ಕೇಳಿದರೆ, ಪ್ರಶ್ನೆಗಳನ್ನು ಹಾಕಿದರೆ ಉತ್ತರ ಸಿಗಲಿಕ್ಕಿಲ್ಲ. ಎದುರಿಗಿರುವ ಸನ್ನಿವೇಶವನ್ನು ನೋಡುತ್ತಾ ಆ ಕ್ಷಣವನ್ನು ಕಳೆಯಬೇಕು ಅನ್ನುಸುವಂತೆ ಮಾಡುವ ಕತೆ. ಅಲ್ಲೊಮ್ಮೆ ಇಲ್ಲೊಮ್ಮೆ ಸಿಲ್ಲಿ ಎಂಬ ಭಾವ ಮೂಡಿದರೂ ಮರುಕ್ಷಣವೇ ಹಾಸ್ಯ ರಸ ವಿಜೃಂಭಿಸುವುದರಿಂದ ಅದೆಲ್ಲವೂ ಮರೆತುಹೋಗುತ್ತದೆ. ಚಿತ್ರದ ಆರಂಭದಲ್ಲಿ ಹುಟ್ಟಿಕೊಳ್ಳುವ ಅನುಮಾನಗಳಿಗೆ ಕ್ಲೈಮ್ಯಾಕ್ಸಲ್ಲಿ ಉತ್ತರ ಸಿಗುತ್ತವೆ.
ನಾಲ್ಕು ಮಂದಿ ಸೇರಿಕೊಂಡು ಯಾವುದೋ ಕಾಡಿನ ಮಧ್ಯದ ಮನೆಗೆ ಹೋಗಿ ಸಿಕ್ಕಿ ಬೀಳುವ ಕತೆ ಹೊಸತೇನೂ ಅಲ್ಲ. ಆದರೆ ಅದೇ ಥೀಮನ್ನು ಬಳಸಿಕೊಂಡು ಹೇಗೆ ಮನರಂಜಿಸಬಹುದು ಎಂಬುದನ್ನು ನಿರ್ದೇಶಕರು ಕಂಡುಕೊಂಡಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ.
ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!
ನಿರ್ದೇಶಕರು ಡಾನ್ಸ್ ಮಾಸ್ಟರ್ ಕೂಡ ಆಗಿರುವುದರಿಂದ ನಾಲ್ಕೈದು ಹಾಡುಗಳಲ್ಲಿ ಕೋಮಲ್ ಮತ್ತು ತಂಡದವರಿಂದ ಭರ್ಜರಿ ಡಾನ್ಸ್ ಮಾಡಿಸಿದ್ದಾರೆ. ಒಟ್ಟಾರೆ ಇದೊಂದು ಗ್ಲಾಮರ್ ಸೇರಿಕೊಂಡು ಹಾಸ್ಯರಸವೇ ಪ್ರಧಾನವಾಗಿರುವ ಹಾರರ್ ಸಿನಿಮಾ. ಕೋಮಲ್ ಅವರನ್ನು ಹಾಸ್ಯದ ದಾರಿಗೆ ತಂದಿರುವ ಸಿನಿಮಾ. ಹಾಸ್ಯರಸವನ್ನು ಪ್ರೀತಿಸುವವರಿಗೆ ಇಷ್ಟವಾಗುವ ಸಿನಿಮಾ.