Aura Review: ಅರಣ್ಯ ದಾರಿಯಲ್ಲಿ ನಿಗೂಢ ಪಯಣ ಆರ

By Vaishnavi Chandrashekar  |  First Published Jul 29, 2023, 4:16 PM IST

ರೋಹಿತ್, ದೀಪಿಕಾ ಆರಾಧ್ಯ, ಆನಂದ್‌ ನೀನಾಸಂ, ಸತ್ಯರಾಜ್‌, ಸೋನಿಯಾ ಕೃಷ್ಣಮೂರ್ತಿ ನಟಿಸಿರುವ ಆರ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ?


ಆರ್‌.ಎಸ್‌.

ಗ್ರಾಮೀಣ ಪ್ರದೇಶದ ಊರುಗಳಲ್ಲಿರುವ ದಟ್ಟಾರಣ್ಯದ ಮಧ್ಯೆ ದೇವರ ಗುಡಿ, ನಾಗಬನ ಅಥವಾ ದೈವಸ್ಥಾನ ಇರುವುದು ಸಹಜ. ಮಾನವನ ದುರಾಸೆ ಹೆಚ್ಚಿ ಅರಣ್ಯನಾಶಕ್ಕೆ ಮುಂದಾಗುವ ಎಲ್ಲರನ್ನೂ ಈ ಗುಡಿಗಳು, ದೈವಸ್ಥಾನಗಳು ಹಿಂದೆ ಸರಿಯುವಂತೆ ಮಾಡುತ್ತವೆ ಎಂಬುದು ಬಹಳ ಹಿಂದಿನಿಂದ ಬಂದ ನಂಬಿಕೆ. ಅರಣ್ಯ ನಾಶ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅಂಥದ್ದೊಂದು ನಂಬಿಕೆಯ ಆಧಾರದಲ್ಲಿ ಬಂದ ಕಥೆ ಇದು. ಮಾನವ ಮತ್ತು ಪ್ರಕೃತಿ ಮಧ್ಯದ ಸಂಘರ್ಷದ ಕಥನ.

Tap to resize

Latest Videos

undefined

ನಿರ್ದೇಶನ: ಅಶ್ವಿನ್ ವಿಜಯಮೂರ್ತಿ
ತಾರಾಗಣ: ರೋಹಿತ್, ದೀಪಿಕಾ ಆರಾಧ್ಯ, ಆನಂದ್‌ ನೀನಾಸಂ, ಸತ್ಯರಾಜ್‌, ಸೋನಿಯಾ ಕೃಷ್ಣಮೂರ್ತಿ
ರೇಟಿಂಗ್‌: 3

ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್‌- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!

ಈ ಸಿನಿಮಾದಲ್ಲಿ ಎರಡು ಭಾಗಗಳಿವೆ. ಒಂದು ಒಬ್ಬ ಮುಗ್ಧ ಹುಡುಗನ ಬದಲಾವಣೆಯ ಪ್ರಯಾಣ. ಇನ್ನೊಂದು ಅರಣ್ಯ ರಕ್ಷಣೆಯ ದೈವಿಕ ಪ್ರಯಾಣ. ಇವೆರಡೂ ಒಂದಕ್ಕೊಂದು ಸೇರಿಕೊಂಡು ಈ ಸಿನಿಮಾ ರೂಪುಗೊಂಡಿದೆ. ವಂಚನೆ, ದುರಾಸೆ ಎಲ್ಲವೂ ಒಬ್ಬ ವ್ಯಕ್ತಿಯ ಮುಗ್ಧತೆಯನ್ನು ಹೇಗೆ ಕೊಲ್ಲುತ್ತವೆ ಎಂದು ಹುಡುಗನ ಪ್ರಯಾಣ ತೋರಿಸಿದರೆ, ದುಡ್ಡಿನ ಆಸೆಯಿಂದ ಹೇಗೆ ಮಾನವ ಪ್ರಕೃತಿ, ದೈವಿಕತೆಯ ವಿರುದ್ಧ ನಿಲ್ಲುತ್ತಾನೆ ಎಂಬುದು ಸಂಘರ್ಷ ಕಥನದಲ್ಲಿದೆ.
ಈ ಸಿನಿಮಾದ ಆತ್ಮ, ಹೃದಯ ಸರಿಯಾಗಿದೆ. ಒಂದು ಒಳ್ಳೆಯ ಉದ್ದೇಶದ ಕತೆ ಇದೆ. ಅದಕ್ಕೆ ತಕ್ಕಂತೆ ಚಿತ್ರಕತೆ ಇದೆ. ವಿಶಿಷ್ಟ ರೀತಿಯ ಚಿತ್ರಕತೆ ರೂಪಿಸುವ ವೇಳೆಯಲ್ಲಿ, ಭಾಷೆಯಲ್ಲಿ ಕೆಲವು ಅಂಶಗಳು ಕೊಂಚ ಅಸ್ಪಷ್ಟವಾಗಿ, ಅಬ್‌ಸ್ಟ್ರಾಕ್ಟ್‌ ಆಗಿ ಕಾಣಿಸುತ್ತವೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಸಂಕೀರ್ಣವಾಗಿದೆ.

Kousalya Supraja Rama Review: ಗಂಡಸಿನ ಅಹಂ, ಹೆಣ್ಣಿನ ತಾಳ್ಮೆ ಮಧ್ಯೆ ರಾಮನ ಆಟ

ಇದರ ಶಕ್ತಿ ಇದರ ಪರಿಸರ. ಬಹಳ ಸುಂದರವಾದ ಪರಿಸರದಲ್ಲಿ ಕತೆ ನಡೆಯುತ್ತದೆ. ನಿಗೂಢತೆ ಹೆಚ್ಚಿಸಲು ದಟ್ಟಾರಣ್ಯದ ಗುಹೆಯೊಳಗೆ ದುರ್ಮಾರ್ಗಿಗಳಿದ್ದಾರೆ, ಕಾಲೆಳೆಯುವವರು ನೂರಿದ್ದರೆ ಕಾಯುವುದಕ್ಕೆ ಬೆಟ್ಟದ ತಪ್ಪಲಲ್ಲಿ ಆಂಜನೇಯ ಇದ್ದಾನೆ, ದಾರಿ ತಪ್ಪಿಸಲು ಹತ್ತು ಮಂದಿ ನೋಡಿದರೆ ಕೈಹಿಡಿದು ಕರೆದೊಯ್ಯಲು ಒಳ್ಳೆಯ ಮನಸಿನ ಸ್ನೇಹಿತರಿದ್ದಾರೆ. ಜೊತೆಗೊಂದು ಪ್ರೇಮ ಕತೆಯೂ ಇದೆ. ಇಲ್ಲಿ ಇಲ್ಲ ಎನ್ನುವುದು ಏನೂ ಇಲ್ಲ. ಪ್ರಶ್ನೆಗಳು ಮುಗಿಯುವುದಿಲ್ಲ.
ನಿರ್ದೇಶಕ ಅಶ್ವಿನ್‌ ತಮ್ಮ ಚೌಕಟ್ಟಿನಲ್ಲಿ ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಟನಾಗಿ ರೋಹಿತ್ ಗಮನ ಸೆಳೆಯುತ್ತಾರೆ. ಆನಂದ್‌ ನೀನಾಸಂ ತಮ್ಮ ನಿಲುವಿನಿಂದ, ಛಾಯಾಗ್ರಾಹಕ ಶ್ರೀಹರಿ ತಮ್ಮ ಕೆಲಸದಿಂದ ಅಚ್ಚರಿ ಹುಟ್ಟಿಸುತ್ತಾರೆ. ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಹೊಸ ತಂಡದ ಸಿನಿಮಾ. ಶ್ಲಾಘನೀಯ ಪ್ರಯತ್ನ.

click me!