Kai Jaarida Preethi Review: ಕೇಳದೆ ಬಂದು ಹೇಳದೆ ಹೋಗುವ ಪ್ರೀತಿ

By Kannadaprabha News  |  First Published Jun 17, 2023, 9:20 AM IST

ಚೇತನ್‌ಕೃಷ್ಣ, ಸನತ್, ಮಂಜುಶ್ರೀ ಶೆಟ್ಟಿ ಕೆ ಆರ್, ಮಧುಶೆಟ್ಟಿ ಕೆ ಆರ್, ಸುಮನ್, ಡ್ಯಾನಿ ಕುaಟ್ಟಪ್ಪ, ಕೋಟೆ ಪ್ರಭಾಕರ್ ನಟಿಸಿರುವ ಕೈ ಜಾರಿದ ಪ್ರೀತಿ ಸಿನಿಮಾ ರಿಲೀಸ್ ಆಗಿದೆ. 


ಆರ್‌ಕೆ

ಇಬ್ಬರು ಸ್ನೇಹಿತರು. ಈ ಇಬ್ಬರು ಸಣ್ಣ ಪುಟ್ಟ ಗಲಾಟೆ, ವಸೂಲಿ ಮಾಡಿಕೊಂಡು, ರೌಡಿಸಂ ಹೆಸರಿನಲ್ಲಿ ಜೀವನ ಮಾಡುತ್ತಿದ್ದಾರೆ. ಈ ಇಬ್ಬರಿಗೂ ಒಂದೊಂದು ಪ್ರೇಮ ಕತೆ ಇದೆ. ಒಬ್ಬರು ಒಂದು ಮಗುವಿನ ತಾಯಿಗೆ ತಾಳಿ ಕಟ್ಟುವ ಪ್ರೇಮಕತೆಯಾದರೆ, ಮತ್ತೊಬ್ಬರದ್ದು ಮನೆ ಕೆಲಸ ಮಾಡುವ ಹುಡುಗಿಯ ಜತೆ ಲವ್ವು. ಈ ಎರಡು ಜೋಡಿಗಳ ಮಧ್ಯೆ ಕೇಳದೆ ಹುಟ್ಟಿಕೊಳ್ಳುವ ಪ್ರೇಮ ಕತೆ, ಹೇಳದೆ ಕೈ ಕೋಡುವ ಹೊತ್ತಿಗೆ ‘ಕೈ ಜಾರಿದ ಪ್ರೀತಿ’ ಸಿನಿಮಾ ಮುಗಿಯುತ್ತದೆ. ಆದರೆ, ಈ ಪ್ರೀತಿಯ ಹುಟ್ಟು ಮತ್ತು ಸಾವಿನ ನಡುವೆ ಏನೆಲ್ಲ ಆಗುತ್ತದೆ ಎಂಬುದನ್ನು ನಿರ್ದೇಶಕಿ ಪುಷ್ಪ ಭದ್ರಾವತಿ ಅವರು ಹೇಳುತ್ತಾರೆ.

Tap to resize

Latest Videos

BERA FILM REVIEW: ಕರುಣೆಯ ದೀಪ, ಪ್ರೀತಿಯ ಪಿಸುಮಾತು ಧರಿಸಿರುವ ಬೇರ

ಚಿತ್ರದ ನಾಯಕ ಅನಿವಾರ್ಯ ಸಂದರ್ಭದಲ್ಲಿ ವಿಧವೆಗೆ ತಾಳಿ ಕಟ್ಟುತ್ತಾನೆ. ತಾಳಿ ಕಟ್ಟಿದ ಮೇಲೆ ಆಕೆಯ ಹಿನ್ನೆಲೆ ಗೊತ್ತಾಗುತ್ತದೆ. ಒಂದು ಮಗುವಿನ ತಾಯಿಗೆ ತಾಳಿ ಕಟ್ಟಿದ ನಾಯಕ ಮುಂದೇನಾಗುತ್ತಾನೆ ಎಂಬುದು ಕತೆ. ತೀರಾ ಸಾದಾ ಸೀದಾ ದಾರಿಯಲ್ಲಿ ತನ್ನ ಪಾಡಿಗೆ ತಾನು ನಡೆಯುವ ಸಿನಿಮಾ. ಪ್ರೇಕ್ಷಕ ಕೂಡ ಯಾವ ಎಕ್ಸೈಟ್ ಮೆಂಟ್, ನಿರೀಕ್ಷೆ, ಅಚ್ಚರಿಗಳನ್ನು ತೋರಿಸಿಕೊಳ್ಳದೆ ಸುಮ್ಮನೆ ಪರದೆ ಮುಂದೆ ಕೂತು ನೋಡಬಹುದು. ಆ ಮಟ್ಟಿಗೆ ಚಿತ್ರ ಪ್ರೇಕ್ಷಕನಿಗೆ ಯಾವ ತೊಂದರೆಯೂ ಕೊಡಲ್ಲ!

ತಾರಾಗಣ: ಚೇತನ್‌ಕೃಷ್ಣ, ಸನತ್, ಮಂಜುಶ್ರೀ ಶೆಟ್ಟಿ ಕೆ ಆರ್, ಮಧುಶೆಟ್ಟಿ ಕೆ ಆರ್, ಸುಮನ್, ಡ್ಯಾನಿ ಕುಟ್ಟಪ್ಪ, ಕೋಟೆ ಪ್ರಭಾಕರ್ 

ನಿರ್ದೇಶನ: ಪುಷ್ಪ ಭದ್ರಾವತಿ

Pinki Elli Review: ಹುಡುಕಾಟದಲ್ಲಿ ಜೀವನ ದರ್ಶನ

ಕತೆಗೆ ತಕ್ಕಂತೆ ಪಾತ್ರಧಾರಿಗಳ ನಟನೆ ಕೊರತೆ ಚಿತ್ರವನ್ನು ಕಾಡುತ್ತದೆ. ಹೀಗಾಗಿ ಕತೆಗೆ ಜೀವ ತುಂಬುವ ನಿಟ್ಟಿನಲ್ಲಿ ಪಾತ್ರಧಾರಿಗಳು ಸೋಲುತ್ತವೆ. ಮೇಕಿಂಗ್, ನಿರೂಪಣೆಯಲ್ಲಿ ಸತ್ವ ಇಲ್ಲ. ಇದರ ಹೊರತಾಗಿ ಹಾಡುಗಳು ನೋಡಲು ಮತ್ತು ಕೇಳಲು ಚೆನ್ನಾಗಿವೆ. ಹಾಡಿನ ಮೇಕಿಂಗ್ ಕೂಡ ಶ್ರೀಮಂತವಾಗಿದೆ. ಕತೆ ಕೂಡ ಒಂಚೂರು ಹೊಸತನ ಕಾಯ್ದುಕೊಂಡಿದೆ.

click me!