
ಮಂಜುನಾಥ್ ಮುನಿಯಪ್ಪ ನಿರ್ದೇಶನದ ‘9 ಸುಳ್ಳು ಕಥೆಗಳು’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
TAJ MAHAL 2FILM REVIEW: ಫೈಟಿಂಗ್ ಅಬ್ಬರದಲ್ಲಿ ದುರಂತ ಪ್ರೇಮ ಕಥೆ
ಚಿತ್ರದ ಟ್ರೇಲರ್‌ಗೆ ಶಿವರಾಜ್‌ಕುಮಾರ್ ಧ್ವನಿ ನೀಡಿರುವುದು ವಿಶೇಷ. ಶೃಂಗಾರ, ಹಾಸ್ಯ, ಕರುಣ ಸೇರಿ 9 ನವರಸಗಳ ಮೂಲಕ 9 ಕತೆಗಳನ್ನು ಚಿತ್ರದಲ್ಲಿ ಹೇಳಿದ್ದಾರಂತೆ. ರಂಗಭೂಮಿಯಲ್ಲಿ ಸಾಕಷ್ಟುವರ್ಷಗಳ ಅನುಭವವಿರುವ ಮಂಜುನಾಥ್ ಮುನಿಯಪ್ಪ ಮೊದಲ ಬಾರಿಗೆ ನಿರ್ದೇಶಿಸಿ, ನಿರ್ಮಿಸಿರುವ ಚಿತ್ರವಿದು. ‘ನಾನು ಪುಸ್ತಕಗಳಲ್ಲಿ ಓದಿದ ಮತ್ತು ಕೇಳಿದ ಸಣ್ಣ ಕತೆಗಳನ್ನು ಆಧರಿಸಿದ ನೈಜ ಸಿನಿಮಾ ಇದು. ಇಡೀ ಚಿತ್ರ 9 ರಸಗಳನ್ನು ಒಳಗೊಂಡಿದೆ. ಚಿತ್ರದಲ್ಲಿ 9 ಕತೆಗಳು ಇರುವ ಕಾರಣ ಚಿತ್ರಕ್ಕೆ 9 ಸುಳ್ಳುಕಥೆಗಳು ಎನ್ನುವ ಹೆಸರು ಇಡಲಾಗಿದೆ. ನಿರ್ಮಾಪಕರು ಯಾರು ಸಿಗದ ಕಾರಣ ನನ್ನ ಸ್ನೇಹಿತ ಸೂರ್ಯನಾರಾಯಣ್ ನೆರವಿನಿಂದ ನಾನೇ ಸಿನಿಮಾ ನಿರ್ಮಿಸಿರುವೆ’ ಎಂದರು ಮಂಜುನಾಥ್ ಮುನಿಯಪ್ಪ.
ತಾರಾಗಣ: ಲಕ್ಷ್ಮಿ ಚಂದ್ರಶೇಖರ್, ಸಂಪತ್ ಮೈತ್ರೇಯ, ಕೃಷ್ಣ ಹೆಬ್ಬಾಳೆ, ಸುಕೃತಾ ವಾಗ್ಲೆ, ವಿನಾಯಕ ಜೋಷಿ, ಪ್ರಮೋದ್ ಶೆಟ್ಟಿ, ರಾಘವೇಂದ್ರ
ನಿರ್ದೇಶನ: ಮಂಜುನಾಥ್ ಮುನಿಯಪ್ಪ
ರೇಟಿಂಗ್: 2
Dhamaka Film Review: ಹೇಗಿದೆ ಶಿವರಾಜ್ ಕೆಆರ್ ಪೇಟೆ ಧಮಾಕ ಸಿನಿಮಾ?
ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕರಿಸುಬ್ಬು, ಸುಕೃತ ವಾಗ್ಲೆ, ಲಕ್ಷ್ಮೀ ಚಂದ್ರಶೇಖರ್, ಕೃಷ್ಣ ಹೆಬ್ಬಾಳೆ, ನಂದಗೋಪಾಲ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವಿಳ್ಯಾ ರಾಘವೇಂದ್ರ ಚಿತ್ರದಲ್ಲಿ ನಟಿಸಿದ್ದಾರೆ. ಪ್ರವೀಣ್ ಹಾಗೂ ಪ್ರದೀಪ್ ಸಂಗೀತ ನೀಡಿದ್ದಾರೆ. ವಿಕ್ರಮ… ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಹಾಡುಗಳನ್ನು ಬರೆದಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಪರಮೇಶ್ ಕ್ಯಾಮೆರಾ ಚಿತ್ರಕ್ಕಿದೆ.
Koutilya Review:ಕಪ್ಪು ಹಣ, ಮಾದಕ ವಸ್ತುಗಳ ಘಾಟಿನಲ್ಲಿ ಕೌಟಿಲ್ಯ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.