Dhamaka Film Review: ಹೇಗಿದೆ ಶಿವರಾಜ್‌ ಕೆಆರ್‌ ಪೇಟೆ ಧಮಾಕ ಸಿನಿಮಾ?

By Kannadaprabha News  |  First Published Sep 3, 2022, 9:06 AM IST

ಹಾಸ್ಯನಟ ಶಿವರಾಜ್‌ ಕೆಆರ್‌ ಪೇಟೆ ಮತ್ತು ನಯನ ಅಭಿನಯಿಸಿರುವ ಧಮಾಕ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ಎಷ್ಟು ಸ್ಟಾರ್ ಕೊಡಬಹುದು ನೋಡಿ...


ಆರ್‌ ಕೇಶವಮೂರ್ತಿ

ಒಂದು ಅಪಹರಣ, ಅದರಿಂದ ಆಗುವ ಅನಾಹುತಗಳು ಮತ್ತು ಅಲ್ಲಿಂದ ಎಸ್ಕೇಪ್‌ ಆಗುವುದಕ್ಕೆ ಪಡುವ ಪಾಡುಗಳನ್ನು ಸಾಕಷ್ಟುಚಿತ್ರಗಳಲ್ಲಿ ನೋಡಿದ್ದರೂ ಅದೇ ಸಾಲಿಗೆ ಸೇರುವ ‘ಧಮಾಕ’ ಮತ್ತೆ ನಗಿಸುತ್ತದೆ. ‘ಇಲ್ಲಿ ಎಲ್ಲರು ನಗಿಸುತ್ತಾರೆ...’ ಎನ್ನುವ ಟ್ಯಾಗ್‌ಲೈನ್‌ ‘ಧಮಾಕ’ ಚಿತ್ರಕ್ಕೆ ಕೊಡಬಹುದಿತ್ತು. ಯಾಕೆಂದರೆ ಚಿತ್ರದ ಪ್ರತಿ ಪಾತ್ರವೂ ನಗಿಸುತ್ತದೆ. ಕೊನೆಗೆ ಹಣಕ್ಕಾಗಿ ಕಿಡ್ನಾಪ್‌ ಮಾಡುವ ಕ್ರಿಮಿನಲ್‌ಗಳು ಕೂಡ ಕಾಮಿಡಿ ಮಾಡುತ್ತಾರೆ ಎಂದರೆ ‘ಧಮಾಕ’ ಸಿನಿಮಾ ನೋಡುಗರಿಗೆ ಎಲ್ಲೂ ಬೋರು ಹೊಡೆಸಲ್ಲ. ಕಿರುತೆರೆಯಲ್ಲಿ ನಗಿಸಿ ಸೈ ಎನಿಸಿಕೊಂಡ ಶಿವರಾಜ್‌ ಕೆ ಆರ್‌ ಪೇಟೆ ಹಾಗೂ ನಯನಾ ಅವರ ಜೋಡಿ ಎಂದ ಮೇಲೆ ಪ್ರೇಕ್ಷಕರಿಗೆ ಕಾಮಿಡಿ ಟಾನಿಕ್‌ಗೆ ಕೊರತೆ ಆಗಲ್ಲ. ಒಂದು ಸರಳವಾದ ಕತೆಯನ್ನು ಹಾಸ್ಯ ರೂಪದಲ್ಲಿ ಹೇಳುವ ಮೂಲಕ ಲಕ್ಷ್ಮೀ ರಮೇಶ್‌ ಚಿತ್ರದ ಪಾತ್ರಧಾರಿಗಳಿಗೆ ಮಾತ್ರವಲ್ಲ, ಪ್ರೇಕ್ಷಕರಿಗೂ ಹೆಚ್ಚು ಕೆಲಸ ಕೊಟ್ಟಿಲ್ಲ ಎಂಬುದು ಅವರ ಜಾಣತನ.

Tap to resize

Latest Videos

ತಾರಾಗಣ: ಶಿವರಾಜ್‌ ಕೆ ಆರ್‌ ಪೇಟೆ, ನಯನಾ, ಅರುಣಾ ಬಾಲರಾಜ್‌, ಕೋಟೆ ಪ್ರಭಾಕರ್‌, ಮೋಹನ್‌ ಜುನೇಜ, ಮಿಮಿಕ್ರಿ ಗೋಪಾಲ್‌, ಮಾವಳ್ಳಿ ಕಾರ್ತಿಕ್‌

ನಿರ್ದೇಶನ: ಲಕ್ಷ್ಮೀ ರಮೇಶ್‌

ರೇಟಿಂಗ್‌: 3

ರಿಯಲ್‌ ಎಸ್ಟೇಟ್‌ ಕೆಲಸ ಮಾಡಿಕೊಂಡಿರುವ ಮಧ್ಯಮ ವರ್ಗದ ಕುಟುಂಬದ ನಾಯಕ. ಈತ ಮಹಾನ್‌ ಕುಡುಕ ಬೇರೆ. ಈತನ ಕುಡಿತ ಬಿಡಿಸಬೇಕು ಎಂಬುದು ಕಟ್ಟಿಕೊಂಡವಳು ಮತ್ತು ಜನ್ಮ ಕೊಟ್ಟವಳ ಮಹಾನ್‌ ಆಸೆ. ಆದರೆ, ಹೆತ್ತವಳ ಹಾಗೂ ಕೈ ಹಿಡಿದವಳ ಈ ಆಸೆಯನ್ನು ಭಗ್ನ ಮಾಡುತ್ತಲೇ ಹೋಗುವ ನಾಯಕ, ಕೊನೆಗೆ ಕಿಡ್ನಾಪ್‌ಗೆ ಒಳಗಾಗುತ್ತಾನೆ. ತಮಾಷೆಗಾಗಿ ನಡೆಯುವ ಈ ಕಿಡ್ನಾಪ್‌ ಕೊಂಚ ಗಂಭೀರ ಸ್ವರೂಪಕ್ಕೆ ತಿರುಗುವ ಹೊತ್ತಿಗೆ ಕೊಲೆಯ ಸಂಚು ನಡೆದಿರುತ್ತದೆ. ಕೊಲೆ ಸಂಚು ಹಾಗೂ ಅಪಹರಣದಿಂದ ನಾಯಕ ಹೇಗೆ ಪಾರಾಗುತ್ತಾನೆ, ಇಷ್ಟಕ್ಕೂ ಆತ ಕಿಡ್ನಾಪ್‌ ಆಗಿದ್ದು ಯಾಕೆ ಎಂಬುದರ ಸುತ್ತ ಕತೆ ಸಾಗುತ್ತದೆ. ಬಿಗ್‌ಬಾಸ್‌ ಆಟದಂತೆ ಸಾಗುವ ಕತೆಯಲ್ಲಿ ಪ್ರೇಕ್ಷಕ ಬಂಧಿಯಾಗುತ್ತಾನೆ. ಕೊನೆಗೆ ತನ್ನ ತಾಯಿಯೇ ತನ್ನ ಅಪಹರಣಕ್ಕೆ ಸೂಪಾರಿ ಕೊಟ್ಟಿರುವ ಸಂಗತಿ ಗೊತ್ತಾಗುವ ಹೊತ್ತಿಗೆ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಮುಂದೇನು ಎನ್ನುವ ಕುತೂಹಲಕ್ಕೆ ಚಿತ್ರ ನೋಡಬೇಕು.

Koutilya Review:ಕಪ್ಪು ಹಣ, ಮಾದಕ ವಸ್ತುಗಳ ಘಾಟಿನಲ್ಲಿ ಕೌಟಿಲ್ಯ

ಅದ್ಭುತ ಮೇಕಿಂಗ್‌, ಶಿಳ್ಳೆ ಹಾಕಿ ಚಪ್ಪಾಳೆ ತಟ್ಟುವ ಮಾಸ್‌ ಹಾಗೂ ಹೀರೋಯಿಸಂ ಡೈಲಾಗ್‌ಗಳನ್ನು ನಿರೀಕ್ಷೆ ಮಾಡದೆ ನೆಮ್ಮದಿಯಾಗಿ ಕೂತು ಒಂದು ಕಾಮಿಡಿ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ‘ಧಮಾಕ’ ಒಳ್ಳೆಯ ಆಫರ್‌. ಶಿವರಾಜ್‌ ಕೆ ಆರ್‌ ಪೇಟೆ ಮ್ಯಾನರಿಸಂ, ಕೋಟೆ ಪ್ರಭಾಕರ್‌ ಪಂಚ್‌ ಡೈಲಾಗ್‌, ಮೋಹನ್‌ ಜುನೇಜ ಅವರ ಟೈಮಿಂಗ್‌ ಡೈಲಾಗ್‌, ಮಾಂತೇಶ್‌, ಮಾವಳ್ಳಿ ಕಾರ್ತಿಕ್‌ ಹಾಗೂ ರಘು ರಮಣಕೊಪ್ಪ ಅವರ ಹಾಸ್ಯ ಚಿತ್ರವನ್ನು ಲಿಫ್‌್ಟಮಾಡುತ್ತದೆ.

Dollu Review: ದೊಡ್ಡ ಸದ್ದಿನಾಚೆಗಿನ ಸಣ್ಣ ಕಂಪನ ದಾಟಿಸುವ ಡೊಳ್ಳು

'ನಮ್ಮ ಗ್ರಾಮೀಣ ಪ್ರತಿಭೆ, ಬೇರೆ ಬೇರೆ ಪಾತ್ರಗಳಿಂದ ನಮ್ಮೆಲ್ಲರನ್ನು ಮೆಚ್ಚಿಸಿ, ಒಳ್ಳೊಳ್ಳೆಯ ಸಿನಿಮಾಗಳಲ್ಲಿ, ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುತ್ತಿರುವವರು ಶಿವರಾಜ್ ಕೆ.ಆರ್‌. ಪೇಟೆ. ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಅದ್ಭುತ ಪ್ರತಿಭೆ. ಅವರು ಗ್ರಾಮೀಣ ಪ್ರತಿಭೆ ಅನ್ನೋದು ತುಂಬ ಖುಷಿ ನೀಡುತ್ತದೆ. ಅದಕ್ಕೆ ಅದನ್ನು ಒತ್ತಿ ಒತ್ತಿ ಹೇಳುತ್ತೇನೆ. ಅವರ 'ಧಮಾಕ' ಸಿನಿಮಾದ ಮೋಷನ್ ಪೋಸ್ಟರ್ ನೋಡಿದೆ. ಒಂದು ಒಳ್ಳೆಯ ತಂಡ ಸೇರಿ ಮಾಡಿರುವ ಸಿನಿಮಾ. ಈ ಮೋಷನ್ ಪೋಸ್ಟರ್ ನೋಡಿದ್ರೆನೇ ಗೊತ್ತಾಗುತ್ತದೆ, ಇದೊಂದು ಸೆಲೆಬ್ರೇಷನ್ ಅಂತ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ, ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯಲಿ. ಸೂಪರ್ ಹಿಟ್ ಆಗಲಿ' ಎಂದು ಡಾಲಿ ಧನಂಜಯ್ ಹಾರೈಸಿದ್ದಾರೆ.

click me!