Taj Mahal 2Film Review: ಫೈಟಿಂಗ್‌ ಅಬ್ಬರದಲ್ಲಿ ದುರಂತ ಪ್ರೇಮ ಕಥೆ

By Kannadaprabha NewsFirst Published Sep 3, 2022, 9:16 AM IST
Highlights

ದೇವರಾಜ್‌ ಕುಮಾರ್ ಮತ್ತು ಸಮೃದ್ಧಿ ಶುಕ್ಲಾ ಜೋಡಿಯಾಗಿ ಅಭಿನಯಿಸಿರುವ ತಾಜ್‌ ಮಹಾಲ್ 2 ಸಿನಿಮಾ ಹೇಗಿದೆ?

ಪೀಕೆ

ತಾಜ್‌ಮಹಲ್‌ ಅಂದರೆ ನೆನಪಾಗೋದು ಮುಮ್ತಾಜ್‌ ಷಹಜಹಾನ್‌ ದುರಂತ ಪ್ರೇಮಕಥೆ. ‘ತಾಜ್‌ ಮಹಲ್‌ 2’ ಸಿನಿಮಾದ್ದೂ ದುರಂತ ಪ್ರೇಮಕಥೆಯೇ. ಆ ಅಂಶ ಬಿಟ್ಟರೆ ಇವೆರಡರ ನಡುವೆ ಬೇರೆ ಹೋಲಿಕೆಗಳಿಲ್ಲ.

ಭಗತ್‌ ಬಾಲ್ಯದಲ್ಲೇ ತಂದೆ ತಾಯಿ ಕಳೆದುಕೊಂಡು ಅತ್ತೆ ಮಾವನ ಆಶ್ರಯದಲ್ಲಿ ಬೆಳೆಯುವ ಹುಡುಗ. ಜಲಪಾತದ ಸುಂದರ ಪರಿಸರದ ನಡುವೆ ಜ್ಯೂಸ್‌ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುತ್ತಾನೆ. ಬಂದ ಹಣದಲ್ಲಿ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಸಹಾಯ ಮಾಡುವುದು, ಮಕ್ಕಳಿಗೆ ಲೆಕ್ಕ ಹೇಳಿಕೊಟ್ಟು ಅವರು ಚೆನ್ನಾಗಿ ಮಾರ್ಕ್ಸ್ ಪಡೆಯುವ ಹಾಗೆ ಮಾಡುವುದು.. ಹೀಗೆ ಒಬ್ಬ ಹೀರೋ ಅನಿಸಿಕೊಳ್ಳೋಕೆ ಏನು ಬೇಕೋ ಅದನ್ನೆಲ್ಲ ಮಾಡ್ತಾ ಇರ್ತಾನೆ. ನಾಯಕಿ ಸ್ಪಂದನಾ ಶ್ರೀಮಂತ, ಕ್ರೂರಿ ಗೌಡನ ಮಗಳು. ಆತನೇ ಹೀರೋಗೆ ಜ್ಯೂಸ್‌ ಅಂಗಡಿ ಇಟ್ಟುಕೊಟ್ಟಿದ್ದಾನೆ. ಲೆಕ್ಕದಲ್ಲಿ ಹಿಂದಿರುವ ಸ್ಪಂದನಾ ಲೈಫಿನ ಲೆಕ್ಕಾಚಾರದಲ್ಲೂ ಹಿಂದೆಯೇ. ಅವಳಿಗೆ ಭಗತ್‌ನಿಂದ ಪಠ್ಯದ ಲೆಕ್ಕದ ಜೊತೆಗೆ ಬದುಕಿನ ಲೆಕ್ಕವನ್ನೂ ಹೇಳಿಸಿಕೊಳ್ಳುವ ಆಸೆ. ಶುರುವಲ್ಲಿ ಅವಳ ಅಂತಸ್ತು ನೋಡಿ ಪ್ರೀತಿಗೆ ಒಪ್ಪದ ಭಗತ್‌ ಕೊನೆಗೂ ಸ್ಪಂದನಾಳ ಪ್ರೀತಿಗೆ ಸ್ಪಂದಿಸುತ್ತಾನೆ. ಎರಡು ತೊಡರಿನ ಹಾದಿಯಲ್ಲಿ ಒಂದಾಗುತ್ತಾ ಬೇರಾಗುತ್ತಾ ಹೋಗುವ ಜೋಡಿಗಳು ಪ್ರೀತಿಯನ್ನು ಗೆಲ್ಲಿಸುತ್ತಾರಾ ಅನ್ನೋದೇ ಕತೆ.

DHAMAKA FILM REVIEW: ಹೇಗಿದೆ ಶಿವರಾಜ್‌ ಕೆಆರ್‌ ಪೇಟೆ ಧಮಾಕ ಸಿನಿಮಾ?

ತಾರಾಗಣ: ದೇವರಾಜ್‌ ಕುಮಾರ್‌, ಸಮೃದ್ಧಿ ಶುಕ್ಲಾ, ತಬಲಾ ನಾಣಿ, ಶೋಭರಾಜ್‌, ಜಿಮ್‌ ರವಿ

ನಿರ್ದೇಶನ: ದೇವರಾಜ್‌ ಕುಮಾರ್‌

ರೇಟಿಂಗ್‌: 2

Dollu Review: ದೊಡ್ಡ ಸದ್ದಿನಾಚೆಗಿನ ಸಣ್ಣ ಕಂಪನ ದಾಟಿಸುವ ಡೊಳ್ಳು

ಎಲ್ಲೆಲ್ಲಿಂದಲೋ ಎಂಟ್ರಿ ಕೊಡುವ ರೌಡಿಗಳು, ಪೊಲೀಸರು ಚಿತ್ರದುದ್ದಕ್ಕೂ ಪ್ರೇಮಿಗಳನ್ನು ಕಾಡುತ್ತಾರೆ. ಇವರ ಸೀನ್‌ಗಳಲ್ಲಿ ಮ್ಯೂಟ್‌ ಬ್ಲರ್‌ಗಳದೇ ಸಿಂಹಪಾಲು. ಅಶ್ಲೀಲತೆ ಮತ್ತು ಹಾಸ್ಯದ ನಡುವಿನ ಗೆರೆ ಮಾಯವಾಗಿದೆ. ಫೈಟಿಂಗ್‌ ಯಾವ ಲೆವೆಲ್‌ಗಿದೆ ಅಂದರೆ ಅರೆಕ್ಷಣ ಕಣ್ಣು ಮುಚ್ಚಿದರೂ ಸೌಂಡಿಗೆ ಎದೆ ಧಸಕ್ಕೆನ್ನುತ್ತದೆ. ಹಾಡಿನ ಸೀಕ್ವೆನ್ಸ್‌ ನೋಡೋದಕ್ಕಿಂತ ಕೇಳೋದು ಹಿತ. ಪ್ರೇಮದಲ್ಲಿ ನೊಂದು ಬೆಂದವರು ಈ ಪ್ರೇಮಿಗಳ ಕಷ್ಟನೋಡಿ ತಮ್ಮ ಕಷ್ಟಮರೆಯಬಹುದು. ಉಳಿದವರು ಪ್ರೇಮದ ವಿವಿಧ ಅವಸ್ಥಾಂತರಗಳನ್ನು ಕಣ್ತುಂಬಿಕೊಳ್ಳಬಹುದು.

click me!