ಬೆಂಗಳೂರು (ಫೆ.13): ವಿದೇಶದಿಂದ ಪೆಪ್ಪರ್‌ಮೆಂಟ್ ಹಾಗೂ ಸಿಹಿ ತಿನಿಸುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಾಣಿಕೆಗೆ ಯತ್ನಿಸಿದ್ದ ಪೆಡ್ಲರ್‌ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬ್ಯಾಂಕಾಕ್‌ನಿಂದ ಕೆಐಎಗೆ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದ್ದಾರೆ. ಆಗ ಆತನ ಬ್ಯಾಗ್‌ನಲ್ಲಿದ್ದ ಪೆಪ್ಪರ್‌ಮೆಂಟ್ (ಕ್ಯಾಡಿ) ಹಾಗೂ ಸಿಹಿ ತಿನಿಸುಗಳ ಪೊಟ್ಟಣಗಳನ್ನು ತೆರೆದು ನೋಡಿದಾಗ 4.25 ಲಕ್ಷ ರು. ಮೌಲ್ಯದ 1.7 ಕೆಜಿ ಹ್ಯಾಶೀಶ್ ಹಾಗೂ ಚರಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಟ್ಟಣ ತೆರೆದು ಪರಿಶೀಲಿಸುವ ಸಮಯದ ವಿಡಿಯೋ ಹಾಗೂ ಪೋಟೋವನ್ನು ಕಸ್ಟಮ್ಸ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ಮತ್ತೆ 3.39 ಕೋಟಿ ಮೌಲ್ಯದ ಗಾಂಜಾ ಜಪ್ತಿ
ಕೆಐಎನಲ್ಲಿ ಕಸ್ಟಮ್ಸ್ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 3.39 ಕೋಟಿ ರು. ಮೌಲ್ಯದ 9.7 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ.
ಕೆಐಎಗೆ ಬುಧವಾರ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನ ಬಳಿ ಗಾಂಜಾ ಪತ್ತೆಯಾಗಿದೆ. ಬ್ಯಾಂಕಾಕ್‌ನಿಂದ ಹೈಡ್ರೋ ಗಾಂಜಾ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬ್ಯಾಗ್‌ನಲ್ಲಿ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
10:37 PM (IST) Feb 13
09:22 PM (IST) Feb 13
ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯನ್ನು ಲಾಂಗ್ ರೈಡ್ ಕರೆದುಕೊಂಡು ಹೋದ ಅನ್ಯಕೋಮಿನ ಯುವಕ, ಆಕೆಯನ್ನ ಅತ್ಯಾ*ಚಾರ ಮಾಡಿ, ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಮತಾಂತರಕ್ಕೂ ಒತ್ತಡ ಹೇರಿದ್ದಾನೆ. ಪೊಲೀಸರು, ಇಬ್ಬರನ್ನ ಬಂಧಿಸಿದ್ದಾರೆ. ಸರ್ಕಾರ ಎಸ್‌ಐಟಿ ರಚಿಸಿದೆ.
09:15 PM (IST) Feb 13
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ, ಅಂಬಿಕಾಳ ಕೊಲೆ ರಹಸ್ಯ ಬಯಲಾಗುತ್ತಿದ್ದಂತೆ ಮಾಯಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸುತ್ತಾಳೆ. ಈ ಅಪಾಯಕಾರಿ ದೃಶ್ಯದ ಚಿತ್ರೀಕರಣವನ್ನು ಹೇಗೆ ಮಾಡಲಾಯಿತು, ಎಷ್ಟು ಟೇಕ್‌ಗಳನ್ನು ತೆಗೆದುಕೊಳ್ಳಲಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.
08:24 PM (IST) Feb 13
07:54 PM (IST) Feb 13
ಬಿಗ್‌ಬಾಸ್ 12 ಮುಗಿದರೂ ಸ್ಪರ್ಧಿಗಳ ನಡುವಿನ ಜಗಳ ನಿಂತಿಲ್ಲ. ವಿನ್ನರ್ ಗಿಲ್ಲಿ ನಟನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದ ಅಶ್ವಿನಿ ಗೌಡ, 'ಬಡವನ ಸೋಗು' ಎಂಬ ಪದ ಬಳಸಿ ವಿವಾದ ಸೃಷ್ಟಿಸಿದ್ದರು. ಇದೀಗ, ಅಶ್ವಿನಿ ಕೊಟ್ಟ ಸ್ಪಷ್ಟನೆ ಏನು?
07:31 PM (IST) Feb 13
Karnataka Train Cancellations: Shimoga-Bangalore Jan Shatabdi Cancelled ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಮೇಲ್ಸೇತುವೆನಿರ್ಮಾಣ ಕಾಮಗಾರಿಯಿಂದಾಗಿ, ಬಿರೂರು-ತಾಳಗುಪ್ಪ ಮತ್ತು ಅರಸೀಕೆರೆ-ಚಿಕ್ಕಜಾಜೂರು ವಿಭಾಗಗಳಲ್ಲಿ ರೈಲ್ವೆ 'ಲೈನ್ ಬ್ಲಾಕ್' ಮಾಡಲಾಗುತ್ತಿದೆ.
06:30 PM (IST) Feb 13
06:15 PM (IST) Feb 13
06:14 PM (IST) Feb 13
ಡಾ ವಿಷ್ಣುವರ್ಧನ್‌ರಿಗೆ ಸಾಹಸಿಂಹ ಎಂಬ ಬಿರುದು ಕೊಟ್ಟಿದ್ದ ನಿರ್ದೇಶಕ ಜೋ ಸೈಮನ್ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಆದರೆ ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಅವರು ಸಿನಿಮಾ ಮಾಡಬಾರದು ಎಂದು ಕೆಲವರು ಪಟ್ಟು ಹಿಡಿದಿದ್ದರು.
05:59 PM (IST) Feb 13
ಶಿವಮೊಗ್ಗದ ಗಾಜನೂರಿನಲ್ಲಿ ಕುಡಿದ ಮತ್ತಿನ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಆತನ ಸ್ನೇಹಿತರೇ ಕೈಕಾಲು ಮುರಿದು, ಮರ್ಮಾಂಗಕ್ಕೆ ಚುಚ್ಚಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಿದ್ದಾರೆ.
05:39 PM (IST) Feb 13
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಘೋಷಿಸಿವೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
05:33 PM (IST) Feb 13
Kannada Director Joe Siman Death: ಸಿನಿಮಾಗಳನ್ನು ಪ್ರೀತಿಸಿ, ಸಿನಿಮಾವನ್ನು ಜೀವನವಾಗಿಸಿಕೊಂಡಿದ್ದ ನಟ, ನಿರ್ದೇಶಕ ಜೋ ಸೈಮನ್ ಅವರು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
05:23 PM (IST) Feb 13
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗಿಲ್ಲಿ ನಟ ಅವರು ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಶೋನಿಂದ ಇಲ್ಲಿಯವರೆಗೆ ಏನೇನು ಆಯ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
04:59 PM (IST) Feb 13
ಬಳ್ಳಾರಿಯ ತೆಕ್ಕಲಕೋಟೆ ಉತ್ಖನನದಲ್ಲಿ ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮೂರನೇ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ತಲೆಬುರುಡೆ ಮತ್ತು ಮಡಿಕೆ ಅವಶೇಷಗಳು ಅಂದಿನ ಅಂತ್ಯಕ್ರಿಯೆಯ ಪದ್ಧತಿಗಳ ಮೇಲೆ ಬೆಳಕು ಚೆಲ್ಲಿದ್ದು, ಈ ಐತಿಹಾಸಿಕ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಘೋಷಿಸಲು ಪುರಾತತ್ವ ಇಲಾಖೆ ಮುಂದಾಗಿದೆ.
04:48 PM (IST) Feb 13
ತುಮಕೂರು ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ, ಆಟವಾಡುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿಯ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾಗಿವೆ. ಗಂಭೀರ ಗಾಯಗೊಂಡರೂ ಆಸ್ಪತ್ರೆಗೆ ಸಾಗಿಸದೆ ನಿರ್ಲಕ್ಷ್ಯ ತೋರಿದ ಶಿಕ್ಷಕರು, ತುಂಡಾದ ಬೆರಳುಗಳನ್ನು ಕಸಕ್ಕೆ ಎಸೆದಿದ್ದಾರೆ.
04:17 PM (IST) Feb 13
Kannada Youtuber Sannu Munnu Love: ಸನ್ನು ಮೂನು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಜೋಡಿಯೊಂದು ಮದುವೆಯಾಗಿದೆ. ಮಂಡ್ಯದ ಬಿ ಗೌಡಗೆರೆ ಚಾಮುಂಡಿ ದೇವಸ್ಥಾನದಲ್ಲಿ ಧನುಶ್ರೀ-ಮಂಜು ಗೌಡ ಮದುವೆಯಾಗಿದ್ದಾರೆ. ಇವರ ಲವ್‌ಸ್ಟೋರಿಯೇ ರೋಚಕವಾಗಿದೆ.
03:37 PM (IST) Feb 13
ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದಂತೆ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಅತೀವೇಗದಿಂದ ಬಂದ ಎಕ್ಸ್‌ಯುವಿ ಕಾರು ಬೈಕ್ ಹಾಗೂ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ.
03:05 PM (IST) Feb 13
ಶಿವಮೊಗ್ಗದ ಹೊಸನಗರ ತಾಲೂಕಿನ ವಿದ್ಯಾರ್ಥಿ ಎಸ್. ಭುವನ್, ತನ್ನ ವಿಶಿಷ್ಟ ನೆನಪಿನ ಶಕ್ತಿಯಿಂದ ಗಮನ ಸೆಳೆದಿದ್ದಾನೆ. ಈತ ತನ್ನ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೇವಲ ಅವರ ಕಾಲಿನ ಬೆರಳು ಹಾಗೂ ಪಾದದ ವಿನ್ಯಾಸವನ್ನು ನೋಡಿ ನಿಖರವಾಗಿ ಗುರುತಿಸುತ್ತಾನೆ.
02:57 PM (IST) Feb 13
01:26 PM (IST) Feb 13
ಬಿಗ್ ಬಾಸ್ ಸೀಸನ್ 4ರ ವಿಜೇತ ಪ್ರಥಮ್, ಸೀಸನ್ 12ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆ ಕಾಣಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರಿಬ್ಬರನ್ನು 'ದೊಡ್ಡವ್ವ-ಚಿಕ್ಕವ್ವ' ಎಂದು ಕರೆದಿದ್ದನ್ನು ಪ್ರಶ್ನಿಸಿ, ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
01:21 PM (IST) Feb 13
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಪಘಾತಗಳನ್ನು ತಡೆಯಲು ಇದೇ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿ ಪೂಜೆ ನಡೆಸಿದ್ದರು.
01:11 PM (IST) Feb 13
ಬೀದರ್ ತಾಲೂಕಿನ ಯದಲಾಪುರ ಗ್ರಾಮದಲ್ಲಿ, ಸಾಲದ ಸುಳಿಗೆ ಸಿಲುಕಿದ್ದ ಶಿವಕುಮಾರ್ ಮೇತ್ರೆ (42) ಎಂಬುವವರು ಬಾವಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣ ಹಾಗೂ ಆಸ್ಪತ್ರೆ ವೆಚ್ಚಕ್ಕಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದ ಅವರು, ಮಾನಸಿಕ ಖಿನ್ನತೆಯಿಂದ ಈ ದುರಂತ ನಿರ್ಧಾರ
01:10 PM (IST) Feb 13
ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು 'ಡಿ ಉತ್ಸವ'ವಾಗಿ ಆಚರಿಸುತ್ತಿದ್ದಾರೆ. ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಮುಗಿದ ನಂತರ, ಈ ವರ್ಷದ ಮಧ್ಯಭಾಗದಲ್ಲಿ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
12:46 PM (IST) Feb 13
12:15 PM (IST) Feb 13
12:10 PM (IST) Feb 13
ಹಿಂದೂ ಸಮಾಜದ ಜಾತೀಯತೆ, ಅಸ್ಪೃಶ್ಯತೆಯ ವಿಷಜಾಲ ಭೇದಿಸುವ ತಂತ್ರ ಹೇಳಿದ ಆರ್‌ಎಸ್‌ಎಸ್ ಸರಸಂಘಚಾಲಕ
ಯಾವುದೋ ಕಾಲಘಟ್ಟದಲ್ಲಿ ಹಿಂದೂ ಸಮಾಜದ ಭಾಗವಾಗಿರುವ ಜಾತಿ, ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಪ್ರತಿಯೊಬ್ಬ ಇಂದು ಸಂಕಲ್ಪ ಮಾಡಬೇಕೆಂಬ ಸಂದೇಶ ನೀಡಿದ್ದರು.
12:04 PM (IST) Feb 13
Actor Ram Charan Teja And Upasana Konidela Babies: ಮೆಗಾಸ್ಟಾರ್ ಚಿರಂಜೀವಿ ಆಸೆಯಂತೆ ಅವರ ಮನೆಗೆ ವಾರಸುದಾರ ಬಂದಿದ್ದಾನೆ. ರಾಮ್ ಚರಣ್ ತೇಜ ಹಾಗೂ ಉಪಾಸನಾ ದಂಪತಿಯು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗ ಈ ಮಕ್ಕಳಿಗೆ ನಾಮಕರಣ ಆಗಿದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
11:29 AM (IST) Feb 13
11:27 AM (IST) Feb 13
ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ಜಾಹ್ನವಿ ನಟನೆಯ ಯುವ ಸರ್ಕಾರ್ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಬಗ್ಗೆ ಸಿನಿಮಾ ತಂಡವು ಮಾಧ್ಯಮದ ಮುಂದೆ ಬಂದು, ಮಾತನಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
11:11 AM (IST) Feb 13
ವಿಶ್ವ ಬಾನುಲಿ ದಿನದ ಅಂಗವಾಗಿ, ಈ ಲೇಖನವು ರೇಡಿಯೋ ಮಾಧ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಪರಿಶೀಲಿಸುತ್ತದೆ. AI ತಂತ್ರಜ್ಞಾನವು ಕಾರ್ಯಕ್ರಮ ನಿರ್ಮಾಣ, ವೈಯಕ್ತೀಕರಣ ಮತ್ತು ಭಾಷಾಂತರದಲ್ಲಿ ಕ್ರಾಂತಿಯನ್ನು ತರುತ್ತಿದ್ರೂ ಮಾನವ ಉದ್ಯೋಗ ಮತ್ತು ಭಾವನಾತ್ಮಕ ಸ್ಪರ್ಶದ ಬಗ್ಗೆ ಕಳವಳಗಳಿವೆ.
10:49 AM (IST) Feb 13
Grandma Video: ಪುರುಷನೋರ್ವ ಫೂಟ್‌ಬಾತ್‌ನಲ್ಲಿ ಸ್ಕೂಟಿಯಲ್ಲಿ ಬಂದಿದ್ದನು. ಇದನ್ನು ವೃದ್ಧೆಯೋರ್ವರು ತಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಪುರುಷನಿಗೆ ವೃದ್ಧೆ ಬುದ್ಧಿ ಕಲಿಸಿದ್ದಾರೆ.
10:45 AM (IST) Feb 13
ಬೆಂಗಳೂರು: ಚಿನ್ನ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಶುಭ ಶುಕ್ರವಾಗಿ ಪರಿಣಮಿಸಿದ್ದು, ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡಿದೆ. ಫೆಬ್ರವರಿ 14ರ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.
10:16 AM (IST) Feb 13
10:07 AM (IST) Feb 13
ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ! ಕೊಪ್ಪಳ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
09:02 AM (IST) Feb 13
08:34 AM (IST) Feb 13
08:21 AM (IST) Feb 13
ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ ಕೆಂಪು ಮಾರ್ಗದ ಡಬಲ್ ಡೆಕ್ಕರ್ ವಿನ್ಯಾಸಕ್ಕೆ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿನ್ಯಾಸವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.