ಮೆಟ್ರೋದಲ್ಲಿ ಚೆಲ್ಲಿದ ಆಹಾರ ಸ್ವಚ್ಛಗೊಳಿಸಿದ ಯುವಕ: ತರುಣನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

By Suvarna News  |  First Published Sep 28, 2023, 11:11 AM IST

ಯುವಕನೋರ್ವ ಮೆಟ್ರೋದಲ್ಲಿ ಚೆಲ್ಲಿದ ಆಹಾರವನ್ನು (Food) ಸ್ವಚ್ಛಗೊಳಿಸಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಸಾರ್ವಜನಿಕ ಸ್ಥಳ, ಸಾರ್ವಜನಿಕ ಆಸ್ತಿ ಎಂದರೆ ಬಹುತೇಕ ಭಾರತೀಯರಿಗೆ ಅದರ ಬಗ್ಗೆ ಅಸಡ್ಡೆ ಜಾಸ್ತಿ, ಅದನ್ನು ಸರ್ಕಾರ ನೋಡಿಕೊಳ್ಳುತ್ತದೆ. ನಾವೇಕೆ ಸಾರ್ವಜನಿಕ ಸ್ಥಳ ಸ್ವಚ್ಛಗೊಳಿಸಬೇಕು ಅದು ನಮ್ಮದಲ್ಲ ಎಂಬ ಭಾವನೆ ಬಹುತೇಕರದ್ದು, ಇದೇ ಕಾರಣಕ್ಕೆ ನಮ್ಮ ಸರ್ಕಾರಿ ಬಸ್ ನಿಲ್ದಾಣಗಳು ರೈಲು ನಿಲ್ದಾಣಗಳು, ಸಾರ್ವಜನಿಕ ಶೌಚಾಲಯಗಳು ಎಷ್ಟೇ ಆಧುನಿಕವಾಗಿ ಸಿದ್ಧಗೊಂಡರು ಕೆಲವೇ ದಿನಗಳಲ್ಲಿ ದುಸ್ಥಿಗೆ ತಲುಪುತ್ತದೆ. ಸ್ವಚ್ಛತಾ ಕಾರ್ಯದಲ್ಲಿ ಜನರ ಸಾರ್ವಜನಿಕ ಸಹಭಾಗಿತ್ವ ಇಲ್ಲದೇ ಇರುವುದು ಇದಕ್ಕೆ ಕಾರಣ. ಆದರೆ ಸ್ವಚ್ಛ ಭಾರತ ಅಭಿಯಾನಗಳ ನಂತರ ಇತ್ತೀಚೆಗೆ ಜನರು ಸ್ವಲ್ಪ ಸ್ವಲ್ಪವೇ ಜಾಗೃತರಾಗಿದ್ದು, ಸಾಮಾಜಿಕ ಜವಾಬ್ದಾರಿ ಮೆರಯುತ್ತಿದ್ದಾರೆ. ಸಾರ್ವಜನಿಕ ಆಸ್ತಿಯ ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅದಕ್ಕೆ ಈ ಯುವಕನ ಕಾರ್ಯವೇ ಸಾಕ್ಷಿಯಾಗಿದೆ.

ಯುವಕನೋರ್ವ ಮೆಟ್ರೋದಲ್ಲಿ ಚೆಲ್ಲಿದ ಆಹಾರವನ್ನು (Food) ಸ್ವಚ್ಛಗೊಳಿಸಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದು, ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದಾ ಬೇರೆ ಬೇರೆ ಕಾರಣಕ್ಕೆ ಸುದ್ದಿಯಲ್ಲಿರುವ ದೆಹಲಿ ಮೆಟ್ರೋದಲ್ಲಿ ಈ ಘಟನೆ ನಡೆದಿದೆ.  ಕೆಲ ಮೂಲಗಳ ಪ್ರಕಾರ ಇದು 2007 ಫೋಟೋ ಎಂದು ಹೇಳಲಾಗುತ್ತಿದೆ. ಅಂಶು ಸಿಂಗ್ ಎಂಬುವವರು ಈ ದೃಶ್ಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.  ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಶುಭಮ್ ವರ್ಮಾ ಎಂಬ ಪ್ರಯಾಣಿಕ ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದರು.  

Tap to resize

Latest Videos

ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್‌

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ತರುಣನೋರ್ವ ತನ್ನ ಬ್ಯಾಗ್‌ನಿಂದ ನೀರಿನ ಬಾಟಲ್ ತೆಗೆಯುವಾಗ ಆತನ ಟಿಪನ್ ಬಾಕ್ಸ್‌ ಕೆಳಗೆ ಬಿದ್ದು, ಅದರಲ್ಲಿದ್ದ ಆಹಾರ ಮೆಟ್ರೋ ಕಾರಿಡಾರ್‌ನ ಫ್ಲೋರ್ ಮೇಲೆ ಚೆಲ್ಲಿತ್ತು. ಈ ವೇಳೆ ಯುವಕ ತನ್ನ ಬಳಿ ಇದ್ದ ಪುಸ್ತಕವೊಂದರ ಪೇಜ್‌ನ್ನು ಹರಿದು ಅದರಿಂದ ಚೆಲ್ಲಿದ ಆಹಾರವನ್ನು  ತೆಗೆದು ಸ್ವಚ್ಛಗೊಳಿಸಿದ್ದ. 

ಈ ದೃಶ್ಯವನ್ನು ನೋಡಿದ ಅನೇಕರು ಈತ ಸ್ವಚ್ಛ ಭಾರತದ (Clean India) ನಿಜವಾದ ಬ್ರಾಂಡ್ ಅಂಬಾಸಿಡರ್ (Brand Ambassadorಎಂದು ಶ್ಲಾಘನೆ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗ್ತಿದೆ. ಈ ತರುಣನ ಕೆಲಸ ಆತನ ಸಂಸ್ಕಾರವನ್ನು ತಿಳಿಸುತ್ತದೆ. ಈತನ ಕುಟುಂಬ ಈತನಿಗೆ ಒಳ್ಳೆಯ ಮೌಲ್ಯವನ್ನು ಕಲಿಸಿದೆ ಎಂದು ಒಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ದೆಹಲಿ ಮೆಟ್ರೋ (Delhi Metro) ಸದಾಕಾಲ ಸೋಶಿಯಲ್ ಮೀಡಿಯಾ (Social Media) ಸ್ಟಾರ್‌ಗಳ ಕಿತಾಪತಿಯಿಂದ ಸುದ್ದಿಯಲ್ಲಿರುತ್ತದೆ.  ಇತ್ತೀಚೆಗೆ ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿ ಬಿಂದಾಸ್ ಆಗಿ ಡಾನ್ಸ್‌ ಮಾಡುತ್ತಿರುವ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೂ ಮೊದಲು ಯುವಕನೋರ್ವ ಸ್ನಾನ ಮಾಡಿ ಬರುವವನಂತೆ ಟವೆಲ್ ಸುತ್ತಿಕೊಂಡು ಬರುವ ವೀಡಿಯೋ ಕೂಡ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್‌ ಗಳಿಸುವ ಹಾಗೂ ವೈರಲ್ ಆಗುವ ದೃಷ್ಟಿಯಿಂದ ಅನೇಕರು ಈ ದೆಹಲಿ ಮೆಟ್ರೋದಲ್ಲಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. 

ಕೆಲ ತಿಂಗಳ ಹಿಂದಷ್ಟೇ ದೆಹಲಿ ಮೆಟ್ರೋ ಪ್ರಾಧಿಕಾರ ಮೆಟ್ರೋದಲ್ಲಿ ಎರಡು ಬಾಟಲ್ ಮದ್ಯ ಸಾಗಣೆಗೆ ಅವಕಾಶ ನೀಡಿ ಸುದ್ದಿಯಾಗಿತ್ತು. 

ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು

click me!