
ದೇಶದಲ್ಲಿ ಹೆಣ್ಣು ಮಕ್ಕಳ (Females )ಕನಿಷ್ಠ ವಿವಾಹ (Wedding )ವಯೋಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸುವ ಹೊಸ ಕಾನೂನು (Law )ಚರ್ಚೆಯಲ್ಲಿದೆ. ಹಿಂದೆ ಭಾರತದಲ್ಲಿ ಬಾಲ್ಯ ವಿವಾಹ(Child Marriage)ಗಳು ನಡೆಯುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಪಾಲಕರಾಗಿದ್ದಾರೆ. ಆಟವಾಡುವ ಸಮಯದಲ್ಲಿ ಮಕ್ಕಳ ಪಾಲನೆ ಜವಾಬ್ದಾರಿ ಹೊತ್ತವರ ಸಂಖ್ಯೆ ಸಾಕಷ್ಟಿದೆ. ಕೆಲ ಬುಡಕಟ್ಟು ಕುಟುಂಬಗಳಲ್ಲಿ ಈಗ್ಲೂ ಬಾಲ್ಯ ವಿವಾಹ ಚಾಲ್ತಿಯಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ತಾಯಿಯಾಗಿದ್ದೊಂದೇ ಅಲ್ಲ ಚಿಕ್ಕ ವಯಸ್ಸಿನಲ್ಲಿಯೇ ತಂದೆ(Father)ಯಾದ ಅನೇಕ ಪ್ರಕರಣಗಳಿವೆ. 13-14 ವರ್ಷ ವಯಸ್ಸಿನಲ್ಲೇ ತಂದೆಯಾದ ಪ್ರಕರಣಗಳು ಚರ್ಚೆಗೆ ಬರುತ್ತಿರುತ್ತವೆ. ಸಂತಾನೋತ್ಪತ್ತಿಯ ಕನಿಷ್ಠ ವಯಸ್ಸು ಹುಡುಗರಲ್ಲಿ 14 ವರ್ಷಗಳು ಮತ್ತು ಹುಡುಗಿಯರಲ್ಲಿ ಸುಮಾರು 13 ವರ್ಷಗಳು ಎಂದು ವೈದ್ಯರು ಹೇಳ್ತಾರೆ. ಆದ್ರೆ 11 ವರ್ಷದಲ್ಲಿಯೇ ತಂದೆಯಾದವರಿದ್ದಾರೆ.
ಕಡಿಮೆ ವಯಸ್ಸಿನಲ್ಲಿ ತಂದೆಯಾದವರು
ಹಲವು ವರ್ಷಗಳ ಹಿಂದೆ ಇಂಥ ಪ್ರಕರಣ ನ್ಯೂಜಿಲೆಂಡ್ (New Zealand)ನ ಕೋರ್ಟ್ (Court )ಮೆಟ್ಟಿಲೇರಿತ್ತು. ತಂದೆಯಾದ ಹುಡುಗನ ವಯಸ್ಸು ಕೇವಲ 11 ವರ್ಷವಾಗಿತ್ತು. ಈ ಪ್ರಕರಣ(Case)ದಲ್ಲಿ ತಾಯಿ ದೊಡ್ಡ ವಯಸ್ಸಿನವಳು. ಪ್ರಕರಣದಲ್ಲಿ ತಂದೆ ಹಾಗೂ ತಾಯಿ ಹೆಸರನ್ನು ರಹಸ್ಯವಾಗಿಡಲಾಗಿತ್ತು. ನ್ಯೂಜಿಲೆಂಡ್ ದಾಖಲೆ ಪ್ರಕಾರ, 2008 ರಲ್ಲಿ 15 ವರ್ಷದೊಳಗೆ 11 ಮಂದಿ ತಂದೆಯಾಗಿದ್ದರು. 2007 ರಲ್ಲಿ ಈ ಅಂಕಿ 15 ಆಗಿತ್ತು.
ನ್ಯೂಜಿಲೆಂಡ್ ನಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಕಡಿಮೆ ವಯಸ್ಸಿನಲ್ಲಿ ತಂದೆಯಾದವರಿದ್ದಾರೆ.
ಮೆಕ್ಸಿಕೋ(Mexico)ದಿಂದ ಬಂದಿತ್ತು ಈ ಸುದ್ದಿ
ನವೆಂಬರ್ 12, 2015 ರಂದು ಮೆಕ್ಸಿಕೋದ ಟೆಲಿಮುಂಡೋದ ಬಡ ಹಾಗೂ ಹಿಂದುಳಿದ ಪ್ರದೇಶದಲ್ಲಿ 10 ವರ್ಷದ ಬಾಲಕ ತಂದೆಯಾಗಿದ್ದ. ಪಾಲಕರು(Parents),ಜಾನುವಾರುಗಳ ಬದಲಾಗಿ ಮಗನನ್ನು ನೀಡಿದ್ದರು. ಆತನನ್ನು 16 ವರ್ಷದ ಹುಡುಗಿ ಜೊತೆ ಇರಿಸಲಾಗಿತ್ತು. ಕೆಲ ತಿಂಗಳ ನಂತರ ಹುಡುಗಿ ಗರ್ಭ(Pregnancy) ಧರಿಸಿದ್ದಳು. ಇದಕ್ಕೆ ಬಾಲಕ ಕಾರಣ ಎನ್ನಲಾಗಿತ್ತು.
Relationship Tips: ಅವಳಿಗೆ ನಾನು ಇಷ್ಟವಿಲ್ಲ. ಆದ್ರೆ ಮರೆಯೋಕಾಗ್ತಿಲ್ಲ..ಏನ್ಮಾಡ್ಲಿ..?
ಚೀನಾ (China)ದಲ್ಲಿ ತಾಯಿಯಾದ 10 ವರ್ಷದ ಬಾಲಕಿ : 2010 ರಲ್ಲಿ ಚೀನಾದ ಹುಡುಗಿಯೊಬ್ಬಳು 10ನೇ ವಯಸ್ಸಿನಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಳು. ರಷ್ಯಾ(Russia )ದ ಸುದ್ದಿ ಸಂಸ್ಥೆ ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ಆದ್ರೆ ಸುದ್ದಿಯನ್ನು ಚೀನಾ ಖಚಿತಪಡಿಸಿಲ್ಲ.
ಭಾರತ(India)ದಲ್ಲಿ ಕಡಿಮೆ ವಯಸ್ಸಿನಲ್ಲಿ ತಂದೆಯಾದ ಬಾಲಕ : ಭಾರತದಲ್ಲಿ 2007ರಲ್ಲಿ ಇಂಥ ಸುದ್ದಿ ಕೇಳಿ ಬಂದಿತ್ತ. ಮಾರ್ಚ್ 27, 2007 ರಂದು ಕೇರಳ(Kerala)ದ ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 16 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಳು. ಆ ಮಗುವಿನ ತಂದೆ ವಯಸ್ಸು 12 ವರ್ಷ ಎನ್ನಲಾಗಿತ್ತು. ಭಾರತದ ಅತ್ಯಂತ ಕಿರಿಯ ತಂದೆ ಈತ ಎನ್ನಲಾಗಿದೆ. ಡಿಎನ್ಎ ಪರೀಕ್ಷೆಯಲ್ಲೂ ಆತನೇ ತಂದೆ ಎಂಬುದು ಸಾಬೀತಾಗಿದೆ. ಆತನ ವಿರುದ್ಧ ದೂರು ದಾಖಲಾಗಿತ್ತು.
ಯುಕೆ (UK)ಯಲ್ಲಿ 11 ವರ್ಷದ ತಂದೆ : ಬ್ರಿಟನ್ ಕೂಡ ಈ ಪಟ್ಟಿಯಲ್ಲಿದೆ. ಜನವರಿ 21, 1998 ರಲ್ಲೇ 11 ವರ್ಷದ ಬಾಲಕ ತಂದೆಯಾಗಿದ್ದ. 16 ವರ್ಷದ ಗೆಳತಿ ಮಗುವಿಗೆ ಆತ ತಂದೆಯಾಗಿದ್ದ.
Health Tips: ಹಾಲಿನ ಜತೆ ಈ ಆಹಾರಗಳನ್ನು ಸೇವಿಸಿದರೆ ಜೀವಕ್ಕೇ ಅಪಾಯ..!
ವೈದ್ಯರು ಸಂತಾನೋತ್ಪತ್ತಿ ವಯಸ್ಸನ್ನು ವೈದ್ಯ (Doctor)ರು ಹುಡುಗರಲ್ಲಿ 14,ಹುಡುಗಿಯರಲ್ಲಿ 13 ಎಂದರೂ ಕೆಲವೊಮ್ಮೆ ಇದು ಬದಲಾಗುತ್ತದೆ. ಹುಡುಗರ ವಯಸ್ಸು 12ರಿಂದ 14 ವರ್ಷ ಹಾಗೂ ಹುಡುಗಿಯರ ವಯಸ್ಸು 10-12 ಆಗಬಹುದು ಎಂದಿದ್ದಾರೆ. ಸಂತಾನೋತ್ಪತ್ತಿ ವಯಸ್ಸಿನಲ್ಲಿ ವಾದ-ವಿವಾದವಿದೆ. 14 ವರ್ಷದೊಳಗೆ ಹುಡುಗರು ವೀರ್ಯ ತಯಾರಿಸಲು ಸಾಧ್ಯವಿಲ್ಲವೆಂದು ಕೆಲವರು ವಾದಿಸಿದ್ದಾರೆ. ಆದರೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ತಂದೆಯಾದ ಉದಾಹರಣೆಗಳಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.