ಹಾಲು (Milk) ಕುಡಿಯುವುದು ಆರೋಗ್ಯ (Health)ಕ್ಕೆ ಉತ್ತಮ ಹೌದು. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು ಅನ್ನೋದು ನಿಮಗೆ ಗೊತ್ತಾ. ಹಾಲಿನ ಜತೆಗೆ ಕೆಲವೊಂದು ಆಹಾರ (Food) ಗಳನ್ನು ತಿನ್ನುವುದರಿಂದ ಜೀವಕ್ಕೇ ಅಪಾಯವಾಗುವ ಸಾಧ್ಯತೆಗಳೂ ಇವೆ
ಹಾಲು ಆರೋಗ್ಯಕ್ಕೆ ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಪ್ರೋಟೀನ್ ಮೊದಲಾದ ಅಂಶಗಳಿದ್ದು, ಇದು ಆರೋಗ್ಯ ಹದಗೆಡದಂತೆ ಕಾಪಾಡುತ್ತದೆ. ಈ ಬಿಳಿ ಪೇಯದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಉತ್ತಮ-ಗುಣಮಟ್ಟದ ಪ್ರೋಟೀನ್, ಜೀವಸತ್ವಗಳು, ರೈಬೋಫ್ಲೇವಿನ್ ಮತ್ತು ನಿಯಾಸಿನ್ ಪೋಷಕಾಂಶಗಳಿರುತ್ತವೆ. ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿರುವ ಪೋಷಕಾಂಶಗಳೇ ಆಗಿವೆ. ಅಲ್ಲದೆ ಪ್ರೋಟೀನ್ ಅಂಶ ಸಹ ಹಾಲಿನಲ್ಲಿ ಸಮೃದ್ಧವಾಗಿದೆ. ಒಂದು ಲೋಟ ಹಾಲಿನಲ್ಲಿ 8 ಗ್ರಾಂನಷ್ಟು ಪ್ರೊಟೀನ್ ಇದೆ. ಹೀಗಾಗಿಯೇ ಬೆಳಗ್ಗೆ ಅಥವಾ ರಾತ್ರಿ ಹಾಲನ್ನು ತಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.
ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಹೌದು. ಆದರೆ ಹಾಲಿನ ಜತೆ ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು ಅನ್ನೋದು ನಿಮಗೆ ಗೊತ್ತಾ. ಹಾಲಿನೊಂದಿಗೆ ಕೆಲವೊಂದು ಆಹಾರಗಳನ್ನು ಜತೆಯಾಗಿ ತಿನ್ನುವುದು ಹೊಟ್ಟೆನೋವು, ಸುಸ್ತು, ಗ್ಯಾಸ್ಟ್ರಿಕ್ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ದೀರ್ಘಕಾಲದ ವರೆಗೆ ಈ ರೀತಿಯ ತಪ್ಪು ಆಹಾರ ಸಂಯೋಜನೆಯನ್ನು ಸೇವಿಸುವುದನ್ನು ಮುಂದುವರಿಸಿದರೆ, ಜೀವಕ್ಕೇ ತೊಂದರೆಯಾಗುವ ಸಾಧ್ಯತೆಯೂ ಇದೆ. ಹಾಲಿನ ಜತೆ ತಿನ್ನಬಾರದ ಆಹಾರಗಳು ಇವು..
undefined
How to preserve milk: ಹಾಲನ್ನು ದೀರ್ಘ ಕಾಲ ಹಾಳಾಗದಂತೆ ಉಳಿಸೋದು ಹೇಗೆ?
ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ
ಆಯುರ್ವೇದ (Ayurveda) ಕೂಡ ಹಾಲು ಹಾಗೂ ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವಿಸಲು ಸಲಹೆ ನೀಡುತ್ತದೆ. ಸಿಟ್ರಸ್ ಅಥವಾ ಆಮ್ಲೀಯ ವಸ್ತುಗಳನ್ನು ಹಾಲಿನೊಂದಿಗೆ ಸೇರಿಸಬಾರದು. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣು (Fruit)ಗಳನ್ನು ಹಾಲಿನೊಂದಿಗೆ ಸಂಯೋಜಿಸಬಾರದು. ಅದರಲ್ಲೂ ಮುಖ್ಯವಾಗಿ ಹಾಲು ತಿಂದ ತಕ್ಷಣ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ (Lemon) ಮುಂತಾದವುಗಳನ್ನು ಸೇವಿಸಬಾರದು. ಯಾಕೆಂದರೆ ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಹಾಲು (Milk) ಕುಡಿದು ನಿಂಬೆ ಅಥವಾ ಯಾವುದೇ ಸಿಟ್ರಸ್ ಹಣ್ಣನ್ನು ಸೇವಿಸಿದಾಗ, ಹಾಲು ಹೆಪ್ಪುಗಟ್ಟುತ್ತದೆ. ಇದು ಗ್ಯಾಸ್ ಮತ್ತು ಎದೆಯುರಿಗೆ ಕಾರಣವಾಗಬಹುದು.
ಬಾಳೆಹಣ್ಣು (Banana)ಗಳನ್ನು ತಿಂದ ಬಳಿಕವೂ ಹಾಲನ್ನು ಕುಡಿಯಬಾರದು, ಚೆರ್ರಿ ಹಣ್ಣುಗಳನ್ನು ಹಾಲನ್ನು ಸಹ ಒಟ್ಟಿಗೆ ಸೇವಿಸಬಾರದು ಆದರೆ ಕೆಲವೊಂದು ಸಿಹಿ ಹಣ್ಣುಗಳಾದ ಮಾವಿನಹಣ್ಣು, ಬೆಣ್ಣೆಹಣ್ಣು, ಅಂಜೂರ, ಖರ್ಜೂರ ಈ ರೀತಿಯ ಹಣ್ಣುಗಳನ್ನು ಹಾಲಿನ ಜೊತೆ ಸೇವಿಸಬಹುದು.
ಉಪ್ಪಿನ ಅಂಶ ಹೆಚ್ಚಿರುವ ಆಹಾರ ತಿಂದ ಬಳಿಕ ಹಾಲು ಕುಡಿಯಬಾರದು
ಹಾಲು ಕುಡಿಯುವ ಮೊದಲು ಉಪ್ಪಿನ ಅಂಶ ಹೆಚ್ಚಿರುವ ಆಹಾರಗಳನ್ನು ತಿನ್ನಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಪ್ಪು (Salt) ಮತ್ತು ಹಾಲು ಒಟ್ಟಿಗೆ ಸೇವಿಸಿದರೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಉಪ್ಪಿನ ಅಂಶ ಹೆಚ್ಚಾಗಿ ಇರುವ ವಸ್ತುಗಳನ್ನು ತಿಂದರೆ, ಆ ವಸ್ತುವನ್ನು ಸೇವಿಸಿದ ಎರಡು ಗಂಟೆಗಳ ಬಳಿಕ ಹಾಲು ಕುಡಿಯುವುದು ಒಳ್ಳೆಯದು.
Goat Milk : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೇಕೆ ಹಾಲು
ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡ
ಹಾಲಿನಿಂದಲೇ ಮೊಸರು (Curd) ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬೇಡಿ. ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ ಎರಡು ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ. ಮೊಸರು ತಿಂದು ಹಾಲು ಕುಡಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ದೇಹವು ಹಾಲಿನ ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡವೇ ಬೇಡ.
ಉದ್ದಿನಿಂದ ತಯಾರಿಸಿದ ತಿಂಡಿಗಳನ್ನು ತಿಂದ ಬಳಿಕ ಹಾಲು ಕುಡಿಯಬಾರದು
ಉದ್ದಿನ ಬೇಳೆಯಿಂದ ಮಾಡಿದ ತಿಂಡಿಗಳನ್ನು ತಿಂದ ನಂತರವೂ ಹಾಲು ಸೇವಿಸಬಾರದು. ಉದ್ದಿನ ಬೇಳೆ ಉಪಯೋಗಿಸಿ, ಮಾಡಿದ ತಿಂಡಿಯನ್ನು ತಿಂದ ಕೂಡಲೇ ಹಾಲು ಕುಡಿದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಹೀಗಾಗಿ ಕೂಡಲೇ ಹಾಲು ಕುಡಿಯಬಾರದು. ಹುಳಿ ವಸ್ತುಗಳನ್ನು ಅಥವಾ ಹುಳಿ ಹಣ್ಣುಗಳನ್ನು ಸೇವಿಸಿದ ನಂತರವೂ ಹಾಲು ಕುಡಿಯುವುದು ಒಳ್ಳೆಯದಲ್ಲ.
ಮೊಟ್ಟೆ, ಮಾಂಸ ಮತ್ತು ಮೀನು
ಎಲ್ಲಕ್ಕಿಂತ ಮುಖ್ಯವಾಗಿ ಮಾಂಸಾಹಾರದ ಜತೆಗೆ, ಮೊಟ್ಟೆ, ಮಾಂಸ ಮತ್ತು ಮೀನು ಸೇವನೆಯ ನಂತರ ಹಾಲು ಕುಡಿಯಬಾರದು. ಇದು ತೂಕ ಹೆಚ್ಚಳ ಹಾಗೂ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ಮೀನು (Fish) ತಿಂದ ಬಳಿಕ ಹಾಲು ಕುಡಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಗಳಿರುತ್ತವೆ. ಹೀಗಾದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.