ನೀತಾ ಅಂಬಾನಿ ಕೈಯಲ್ಲಿರುವ ಈ ವಾಚಿನ ಬೆಲೆ ನೀವು ಊಹಿಸಲೂ ಸಾಧ್ಯವಿಲ್ಲ!

Published : Aug 25, 2025, 07:39 AM IST
neeta ambani

ಸಾರಾಂಶ

NMACC ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ ವಜ್ರ ಖಚಿತ ಐಷಾರಾಮಿ ಕೈಗಡಿಯಾರ ಪಾಟೆಕ್ ಫಿಲಿಪ್ ಬ್ರ್ಯಾಂಡ್‌ನದ್ದು. 18 ಕ್ಯಾರೆಟ್ ಚಿನ್ನ ಮತ್ತು ಅಪರೂಪದ ವಜ್ರಗಳಿಂದ ಮಾಡಲ್ಪಟ್ಟಿದೆ. ಇದರ ಬೆಲೆ ಕೇಳಿದರೆ ನೀವು ಹೌಹಾರಬಹುದು. 

ತಮ್ಮ ಅನಾಯಾಸ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾದ ನೀತಾ ಅಂಬಾನಿ, ತಮ್ಮ ಸೊಗಸಾದ ಫ್ಯಾಷನ್ ಹಾಗೂ ದಿರಿಸು, ತೊಡುಗೆಗಳಿಂದ ನಮ್ಮನ್ನು ಯಾವಾಗಲೂ ಮೋಡಿ ಮಾಡುತ್ತಾರೆ. ಇತ್ತೀಚೆಗೆ NMACC ನಲ್ಲಿ ಕಾಣಿಸಿಕೊಂಡ ನೀತಾ ಅಂಬಾನಿ, ಮನೀಶ್ ಮಲ್ಹೋತ್ರಾ ಅವರು ಡಿಸೈನ್‌ ಮಾಡಿದ ವಿಶೇಷ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಆದರೆ ಅದಕ್ಕಿಂತಲೂ ಹೆಚ್ಚು ಗಮನ ಸೆಳೆದಿದ್ದು ಅವರ ಮಣಿಕಟ್ಟಿನ ಮೇಲಿದ್ದ ವಜ್ರ-ಖಚಿತ ಗಡಿಯಾರ.

ನೀತಾ ಅಂಬಾನಿಯವರ ಶೈಲಿಯು ಲಕ್ಷುರಿ ಮತ್ತು ಸೊಬಗಿನ ಪರಿಪೂರ್ಣ ಮಿಶ್ರಣ. ಯಶಸ್ವಿ ಉದ್ಯಮಿ ಮಹಿಳೆಯಾದ ಈಕೆ ಸುಂದರವಾದ ಕಂದು ಬಣ್ಣದ ಸೀರೆಯಲ್ಲಿ ದೇಸಿ ಸೊಬಗನ್ನು ಹೊರಹಾಕಿದರು. ಸೀರೆಯ ಅಂಚುಗಳಲ್ಲಿ ಸಂಕೀರ್ಣವಾದ ಕುಸುರಿ ಕೆಲಸ ಮಾಡಲಾಗಿತ್ತು. ಅವರ ಬ್ಲೌಸ್‌ಗೆ ಪಲ್ಲು ಮತ್ತು ಸೊಂಟದ ಮೇಲೆ ನೆರಿಗೆಗಳನ್ನು ಹೊಂದಿರುವ ಅವರ ಆಕರ್ಷಕವಾಗಿ ಹೊದಿಸಿದ ಸೀರೆಯು ಅವರ ನೋಟಕ್ಕೆ ಅತ್ಯಾಧುನಿಕ ಮೋಡಿಯನ್ನು ಸೇರಿಸಿತು. ಹೆಚ್ಚು ಕಸೂತಿ ಮಾಡಿದ ಬ್ಲೌಸ್‌ನೊಂದಿಗೆ ಸೀರೆಯನ್ನು ಧರಿಸಿದ್ದರು. ಇದು ಅವರ ಆಕರ್ಷಕ ವ್ಯಕ್ತಿತ್ವಕ್ಕೆ ಇನ್ನಷ್ಟು ವಿಲಾಸಿ ಸ್ಪರ್ಶವನ್ನು ನೀಡಿತು.

ನೀತಾ ಅಂಬಾನಿಯವರ ಸೀರೆ ಎಲ್ಲರ ಗಮನ ಸೆಳೆಯಿತು. ಆದರೆ ಅಂತರ್ಜಾಲದಾದ್ಯಂತ ಸಾಕಷ್ಟು ಸಂಚಲನ ಮೂಡಿಸಿದ್ದು ಅವರ ವಜ್ರ-ಖಚಿತ ಗಡಿಯಾರ. ಈ ವಾಚ್ ಐಷಾರಾಮಿ ಬ್ರ್ಯಾಂಡ್ ಪಾಟೆಕ್ ಫಿಲಿಪ್‌ನಿಂದ ಬಂದಿದ್ದು. ಇದರ ರಿಟೇಲ್‌ ಬೆಲೆ ಕೇಳಿ ಹೌಹಾರಬೇಡಿ. ಅದು $428,450, ಅಂದರೆ ಸರಿಸುಮಾರು 3.72 ಕೋಟಿ ರೂ.

ಇದನ್ನು ವಿಶಿಷ್ಟ ಮತ್ತು ವಿಶೇಷವಾಗಿಸುವುದು ಬೆರಗುಗೊಳಿಸುವ ವಜ್ರಗಳನ್ನು ಹುದುಗಿಸಲಾಗಿರುವ ಅದರ ಭವ್ಯವಾದ ವಿನ್ಯಾಸ. ಕತ್ತಲಲ್ಲೂ ಕಾಣಬಲ್ಲಂತೆ ಅದರ ಅಂಕಿಗಳನ್ನು ಹೊಳೆಯುವ ಲೇಪನದಿಂದ ಮಾಡಲಾಗಿದೆ. 18 ಕ್ಯಾರೆಟ್‌ ಚಿನ್ನದ ಸರಪಳಿ ಇದೆ. ಇದು ಅದರ ನೋಟಕ್ಕೆ ಐಷಾರಾಮಿ ಸ್ಪರ್ಶವನ್ನು ನೀಡುತ್ತದೆ. ಗುಲಾಬಿ ಬಣ್ಣದ ಚಿನ್ನದ ಬ್ರೇಸ್ಲೆಟ್ ಇದನ್ನು ಸಂಪೂರ್ಣ ಆವರಿಸಿದೆ. ಕೊನೆಯದಾಗಿ ಇದನ್ನು ಅಪರೂಪದ ಕಾಲಾತೀತ ತುಣುಕನ್ನಾಗಿ ಮಾಡುವುದು ವಜ್ರ- ಸೆಟ್ ನಾಟಿಲಸ್ ಫೋಲ್ಡ್-ಓವರ್ ಕ್ಲಾಸ್ಪ್, ಇದು ವಾಚ್‌ಗೆ ಅತಿ ವಿಲಾಸಿ, ಅತ್ಯಾಧುನಿಕ ಆಕರ್ಷಣೆಯನ್ನು ನೀಡುತ್ತದೆ.

ಈ ಐಷಾರಾಮಿ ಗಡಿಯಾರದ ಜೊತೆಗೆ ನೀತಾ ಅಂಬಾನಿ ತಮ್ಮ ಆಕ್ಸೆಸರಿ ಭಂಡಾರಕ್ಕೆ ದೊಡ್ಡ ಗಾತ್ರದ ಹೂವಿನ ವಿನ್ಯಾಸದ ಕಿವಿಯೋಲೆಗಳನ್ನು ಸೇರಿಸಿದ್ದರು. ಕೊನೆಯದಾಗಿ ಅವರ ಸೂಕ್ಷ್ಮ ಮೇಕಪ್ ಮತ್ತು ಸಣ್ಣ ಬನ್, ಅವರ ಲುಕ್‌ಗೆ ಇನ್ನಷ್ಟು ಪಾಯಿಂಟ್‌ಗಳನ್ನು ಸೇರಿಸಿತು.

ನೀತಾ ಅಂಬಾನಿ ಜೊತೆಗೆ, ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡೆ ಕೂಡ ಪಾಟೆಕ್ ಫಿಲಿಪ್ ಗಡಿಯಾರವನ್ನು ಹೊಂದಿದ್ದಾರೆ. ಅದರ ಮೌಲ್ಯ $78,250 (ಸುಮಾರು 67,19,000 ಲಕ್ಷ ರೂ.). ಅಲ್ಲದೆ, ಕೈಗಡಿಯಾರಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನೀತಾ ಅಂಬಾನಿಯವರ ಮಗ ಅನಂತ್ ಅಂಬಾನಿ, ಇದುವರೆಗೆ ತಯಾರಿಸಿದ ಅತ್ಯಂತ ದುಬಾರಿ, ಸಂಕೀರ್ಣ ಪಾಟೆಕ್ ಫಿಲಿಪ್ ಕೈಗಡಿಯಾರವನ್ನು ಹೊಂದಿದ್ದಾರೆ. ಅದರ ಮೌಲ್ಯ, ಗಾಬರಿಯಾಗಬೇಡಿ, 18 ಕೋಟಿ ರೂ. !

ಇನ್ನು ನೀತಾ ಅಂಬಾನಿ ಬಳಿ ಇರುವ ಅತೀ ದುಬಾರಿ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ VIII. ರೋಸ್ ಕಲರ್ ಈ ಕಾರು ಐಷಾರಾಮಿ ಕಾರಿಗಿದೆ. ಇದರ ಬೆಲೆ ಸರಿಸುಮಾರು 10 ಕೋಟಿ ರೂಪಾಯಿ. ಬೆಲೆ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕಾರಣ ಇದು ಕಸ್ಟಮೈಸೈಡ್ ಎಡಿಶನ್ ಕಾರಾಗಿದ್ದು, ಎಕ್ಸ್‌ಟೆಂಡ್ ವ್ಹೀಲ್‌ಬೇಸ್ ಹೊಂದಿದೆ. ಹೀಗಾಗಿ ಮಾಲೀಕರ ಬೇಡಿಕೆಗೆ ತಕ್ಕಂತೆ ಕಾರು ಕಸ್ಟಮೈಸ್ಡ್ ಮಾಡಲಾಗುತ್ತದೆ. ಈ ವೇಳೆ ಇದರ ಬೆಲೆ ಹೆಚ್ಚಾಗಲಿದೆ. 12 ರಿಂದ 15 ಕೋಟಿ ವರೆಗೂ ಕಾರಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಅನಂತ್ ಅಂಬಾನಿ ಮದುವೆ ವೇಳೆ ಈ ಕಾರು ಹೆಚ್ಚಾಗಿ ಓಡಾಡಿತ್ತು. ಮದುವೆ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಈ ಕಾರಿನಲ್ಲಿ ಆಗಮಿಸಿದ್ದರು. ಮದುವೆ ವೇಳೆ ಅನಂತ್ ಅಂಬಾನಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಬ್ಲಾಕ್ ಬ್ಯಾಡ್ಜ್ ಕಾರು ಬಳಸಿದ್ದರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?
ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!