
ಬೆಂಗಳೂರು (ಫೆ.12): ನಿಮ್ಹಾನ್ಸ್ ನಮ್ಮ ನೆಲದ ಯೋಗ ವಿದೇಶಗಳಲ್ಲಿ ನಿತ್ಯ ಚಟುವಟಿಕೆಯ ಒಂದು ಭಾಗವೇ ಆಗಿಬಿಟ್ಟಿದೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಪ್ರಯೋಜನಗಳು ಹಲವು. ಬೆಂಗಳೂರಿನ ವಿವೇಕಾನಂದ ಯೋಗ ಕೇಂದ್ರ ಹಾಗೂ ನಿಮ್ಹಾನ್ಸ್‌ನ ಯೋಗ ಕೇಂದ್ರಗಳು ನಡೆಸಿದ ಸಂಶೋಧನೆಯಿಂದ ಮಾನಸಿಕ ಅಸ್ವಸ್ಥರಿಗೂ ಯೋಗ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಮಾನಸಿಕ ಸಮಸ್ಯೆ ಹತೋಟಿಗೆ: ಯೋಗದಿಂದ ಮಾಂಸ ಖಂಡಗಳು ಫ್ಲೆಕ್ಸಿಬಲ್ ಆಗುತ್ತವೆ. ರಕ್ತ ಸಂಚಾರವು ಸುಧಾರಿಸುತ್ತದೆ. ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತವೆ. ಯೋಗ ಮಾಡಿದ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಓಪಿಯಾಡ್ಸ್ ಪ್ರಮಾಣ ಹೆಚ್ಚಾಗಿ ಮನಸ್ಸಿಗೆ ಸಮಾಧಾನ ಉಂಟಾಗುತ್ತದೆ, ಉತ್ಸಾಹ ಹೆಚ್ಚುತ್ತದೆ. ಒತ್ತಡದ ಹಾರ್ಮೋನ್‌ಗಳಾದ ಕಾರ್ಟಿಸಾಲ್ ದೈಹಿಕ ಪರಿಣಾಮವನ್ನು ಕಡಿಮೆಗೊಳಿಸುವುದು.
ಉಸಿರಾಟದ ಕ್ರಿಯಾ ಯೋಗವು (ಉದಾಹರಣೆಗೆ ಸುದರ್ಶನ ಶ್ರೇಯಾ ಯೋಗ) ಮನಸ್ಸಿನಲ್ಲಿ ಬರುವ ನಕಾರಾತ್ಮಕ ಆಲೋಚನೆಗಳನ್ನೂ ಕಡಿಮೆಗೊಳಿಸುತ್ತದೆ. ಹಿತವಾದ ಯೋಚನೆಗಳಿಗೆ ಎಡೆ ಮಾಡಿಕೊಡುತ್ತದೆ. ಎಷ್ಟೋ ಮಂದಿ ಯೋಗ ಅಭ್ಯಾಸ ಆರಂಭ ಮಾಡಿಕೊಂಡ ನಂತರವೇ ತಮಗೆ ಉತ್ತಮ ನಿದ್ರೆ ಬರುತ್ತಿದೆ ಎಂದು ಹೇಳುವುದು ಹೊಸದೇನಲ್ಲ. ಉತ್ತಮ ನಿದ್ರೆಯಿಂದಲೂ ಉತ್ತಮವಾದ ಮನಸ್ಸಿನ ಆರೋಗ್ಯ ಹೊಂದಬಹುದು. ಭಾವನೆಗಳಲ್ಲಿನ ಏರುಪೇರು ಕೂಡ ಕಡಿಮೆಯಾಗುವುದು. ನಿಮ್ಹಾನ್ಸ್‌ನಲ್ಲಿನ ಹಾಗೂ ಕ್ಯಾಲಿಫೋರ್ನಿಯಾದಲ್ಲಿನ ಸಂಶೋಧನೆಯಿಂದ ಕೆಲವು ತರಹದ ಯೋಗದಿಂದ ಖಿನ್ನತೆಯನ್ನು ಗುಣಪಡಿಸುವಲ್ಲಿ ಸಹಕಾರಿಯಾಗಬಲ್ಲದು ಎಂದು ತಿಳಿದು ಬಂದಿದೆ. ಇದರ ಬಗ್ಗೆ ಖಾತ್ರಿಯಾಗಿ
ತಿಳಿದುಕೊಳ್ಳುವ ಸಲುವಾಗಿ ನಿರಂತರ ಸಂಶೋಧನೆಯು ನಡೆಯುತ್ತಿದೆ. ಹೀಗೆ ಯೋಗವು ಒಂದು ಜೀವನಶೈಲಿ ಮಾತ್ರವಲ್ಲದೇ, ಕೆಲವು ಒತ್ತಡದಿಂದ ಬರುವ ಖಾಯಿಲೆಗಳನ್ನು ತಡೆಯುತ್ತದೆ. ಕೆಲವೊಂದು ಮಾನಸಿಕ ಖಾಯಿಲೆಗಳನ್ನು
ಗುಣಪಡಿಸಲು ಸಹಕಾರಿಯಾಗಬಲ್ಲದು. ಇದನ್ನು ಅಭ್ಯಾಸ ಮಾಡಬೇಕೆನ್ನುವವರು ತಮ್ಮ ವೈದ್ಯರೊಡನೆ ಸಮಾಲೋಚಿಸಿ, ಯೋಗದ ಸದುಪಯೋಗ ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.