ಮಧುಮಂಚದಲ್ಲಾಗುವ ಸಮಸ್ಯೆಗಳಿಗೆ ಧೃತಿಗೆಡಬೇಡಿ; ಎಂಜಾಯ್ ಮಾಡಿ

By Suvarna Web DeskFirst Published Feb 12, 2018, 5:10 PM IST
Highlights

ನೇಹಾ ಹಾಸಿಗೆಯಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಅವಳನ್ನು ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೇ ಗಂಡ ಕಂಗಾಲಾಗಿದ್ದ. ಮದುವೆಯಾಗಿ  ವಾರವೂ ಕಳೆದಿರಲಿಲ್ಲ. ಹನಿಮೂನ್‌ಗೆಂದು ಹಿಲ್‌ಸ್ಟೇಶನ್‌ಗೆ ಬಂದಿದ್ರು.
ಒಂದೇ ದಿನದಲ್ಲಿ ಈ ಸ್ಥಿತಿ. ನೇಹಾ ರೂಮ್‌ಬಿಟ್ಟು ಆಚೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಈ ಅಪರಿಚಿತ ಜಾಗದಲ್ಲಿ ಒಳ್ಳೆಯ ಡಾಕ್ಟರ್‌ಅನ್ನು ಎಲ್ಲಿ ಅಂತ ಹುಡುಕಿಕೊಂಡು ಹೋಗೋದು? ಮನೆಯವರಿಗೆ ಈ ಸಮಸ್ಯೆ ಬಗ್ಗೆ
ಹೇಳಲೂ ಸಂಕೋಚ. ಕೊನೆಗೆ ನೇಹಾಳ ಗಂಡ, ವೈದ್ಯನಾಗಿದ್ದ ತನ್ನ ಗೆಳೆಯನಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಆ ಮಿತ್ರ ತನ್ನ  ಗೆಳೆಯನನ್ನು ಒಂದಿಷ್ಟು ಕಾಲೆಳೆದು ರೇಗಿಸಿದ ಬಳಿಕ ಆತನಿಗೆ  ಈ ಸಮಸ್ಯೆಯ ಬಗ್ಗೆ ವಿವರಿಸಿದ. ಇದು ಹನಿಮೂನ್ ಸಿಸ್ಟಿಸಿಸ್. ಮೊದಲ ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಂಡಾಗ ಬರುವ ಸಮಸ್ಯೆ. ಹೆಚ್ಚಿನೆಲ್ಲ ಹೆಣ್ಮಕ್ಕಳು ಒಮ್ಮೆಯಾದರೂ ಈ ಸಮಸ್ಯೆ ಅನುಭವಿಸಿರುತ್ತಾರೆ. ಈ ಸಮಸ್ಯೆ ಗಂಡಸರಿಗೆ ಬರೋದಿಲ್ಲ.

ಬೆಂಗಳೂರು (ಫೆ. 12): ನೇಹಾ ಹಾಸಿಗೆಯಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಅವಳನ್ನು ಹೇಗೆ ಸಮಾಧಾನ ಮಾಡಬೇಕೆಂದು ತಿಳಿಯದೇ ಗಂಡ ಕಂಗಾಲಾಗಿದ್ದ. ಮದುವೆಯಾಗಿ  ವಾರವೂ ಕಳೆದಿರಲಿಲ್ಲ. ಹನಿಮೂನ್‌ಗೆಂದು ಹಿಲ್‌ಸ್ಟೇಶನ್‌ಗೆ ಬಂದಿದ್ರು.
ಒಂದೇ ದಿನದಲ್ಲಿ ಈ ಸ್ಥಿತಿ. ನೇಹಾ ರೂಮ್‌ಬಿಟ್ಟು ಆಚೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಈ ಅಪರಿಚಿತ ಜಾಗದಲ್ಲಿ ಒಳ್ಳೆಯ ಡಾಕ್ಟರ್‌ಅನ್ನು ಎಲ್ಲಿ ಅಂತ ಹುಡುಕಿಕೊಂಡು ಹೋಗೋದು? ಮನೆಯವರಿಗೆ ಈ ಸಮಸ್ಯೆ ಬಗ್ಗೆ
ಹೇಳಲೂ ಸಂಕೋಚ. ಕೊನೆಗೆ ನೇಹಾಳ ಗಂಡ, ವೈದ್ಯನಾಗಿದ್ದ ತನ್ನ ಗೆಳೆಯನಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಆ ಮಿತ್ರ ತನ್ನ  ಗೆಳೆಯನನ್ನು ಒಂದಿಷ್ಟು ಕಾಲೆಳೆದು ರೇಗಿಸಿದ ಬಳಿಕ ಆತನಿಗೆ  ಈ ಸಮಸ್ಯೆಯ ಬಗ್ಗೆ ವಿವರಿಸಿದ. ಇದು ಹನಿಮೂನ್ ಸಿಸ್ಟಿಸಿಸ್. ಮೊದಲ ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಂಡಾಗ ಬರುವ ಸಮಸ್ಯೆ. ಹೆಚ್ಚಿನೆಲ್ಲ ಹೆಣ್ಮಕ್ಕಳು ಒಮ್ಮೆಯಾದರೂ ಈ ಸಮಸ್ಯೆ ಅನುಭವಿಸಿರುತ್ತಾರೆ. ಈ ಸಮಸ್ಯೆ ಗಂಡಸರಿಗೆ ಬರೋದಿಲ್ಲ.
 
ಹನಿಮೂನ್ ಸಿಸ್ಟಿಸಿಸ್ ಆದ್ರೆ ಏನಾಗುತ್ತೆ?

ಬ್ಲಾಡರ್ ಅಥವಾ ಮೂತ್ರಕೋಶದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತೆ. ಹೆಚ್ಚಿನ ಸಲ ಮೂತ್ರನಾಳದ ಸೋಂಕಿನಿಂದ ಈ ಸಮಸ್ಯೆ ಕಂಡುಬರುತ್ತೆ. ಹೆಣ್ಣು  ಮೊದಲ ಸಲ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಾಗ ಆಕೆಯ ಗುದದ್ವಾರದ  ಚರ್ಮದಲ್ಲಿರುವ ಉ.್ಚಟ್ಝಜಿ ಎಂಬ ಬ್ಯಾಕ್ಟೀರಿಯಾ ಸಂಗಾತಿಯ ಶಿಶ್ನ ಅಥವಾ ಬೆರಳಿನ ಮೂಲಕ ಮೂತ್ರನಾಳ ಪ್ರವೇಶಿಸುತ್ತದೆ. ಅಲ್ಲಿಂದ  ಮೂತ್ರಕೋಶ ತಲುಪುವಾಗ ಈ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿ ಯೋನಿಯಲ್ಲಿ ತಡೆಯಲಾರದ ಉರಿ, ಉರಿಮೂತ್ರದಂಥ
ಸಮಸ್ಯೆ, ಪದೇಪದೇ ಮೂತ್ರ ವಿಸರ್ಜಿಸಬೇಕೆಂಬ ಒತ್ತಡ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಕಿಡ್ನಿಗೆ ತಲುಪಿದರಂತೂ ಉರಿ, ನೋವು ಬಿಗಡಾಯಿಸುತ್ತದೆ. ಸಾಮಾನ್ಯಇಪ್ಪತ್ತರಿಂದ ಮೂವತ್ತು ವಯೋಮಾನದ
ಹೆಣ್ಣುಮಕ್ಕಳಲ್ಲಿ ಮೊದಲ ಲೈಂಗಿಕ ಕ್ರಿಯೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದು. ನವದಂಪತಿಗಳಲ್ಲಿ ಹೆಚ್ಚಿನವರಿಗೆ ಲೈಂಗಿಕ ಕ್ರಿಯೆ ನಂತರದ ಸ್ವಚ್ಛತೆಯ ಅರಿವಿರುವುದಿಲ್ಲ. ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆಯ ಬಳಿಕ ಹೆಣ್ಣು ಮೂತ್ರ ವಿಸರ್ಜಿಸದಿದ್ರೆ, ಯೋನಿ ಭಾಗವನ್ನು ಕ್ಲೀನ್  ಮಾಡಿಕೊಳ್ಳದಿದ್ದರೆ ಸಿಸ್ಟಿಸಿಸ್ ತೀವ್ರವಾಗಬಹುದು.
ಈ ಕಂಡೀಶನ್‌ಗಳನ್ನು ಫಾಲೋ ಮಾಡಿ  ಸಿಸ್ಟಿಸಿಸ್ ಆದಾಗ ಅತಿಯಾದ ಸೆಕ್ಸ್ ಒಳ್ಳೆಯದಲ್ಲ. ಇದರಿಂದ ರಿಸ್ಕ್ ಹೆಚ್ಚು. ಯೋನಿ ತೇವಗೊಂಡಿಲ್ಲದೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವಿಕೆಯಿಂದ  ಈ ಸಮಸ್ಯೆ ಹೆಚ್ಚಾಗಬಹುದು. ಗರ್ಭ ನಿರೋಧಕಗಳ ಅತಿಯಾದ ಬಳಕೆಯಿಂದ ಹನಿಮೂನ್ ಸಿಸ್ಟಿಸಿಸ್  ಸಮಸ್ಯೆ ಹೆಚ್ಚಾಗಬಹುದು. ಗುಪ್ತಾಂಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಇಲ್ಲವಾದರೆ ಸಿಸ್ಟಿಸಿಸ್  ಉಲ್ಬಣವಾಗುವ ಸಾಧ್ಯತೆ ಇರುತ್ತದೆ.

ಹನಿಮೂನ್ ಸಿಸ್ಟಿಸಿಸ್‌ನ ಲಕ್ಷಣ ಹೀಗಿರುತ್ತದೆ
ಪದೇ ಪದೇ ಮೂತ್ರ ವಿಸರ್ಜನೆ ಮೂತ್ರ ವಿಸರ್ಜಿಸುವಾಗ ಉರಿ, ನೋವು  ಕೆಲವೊಮ್ಮೆ ಮೂತ್ರದ ಜೊತೆಗೆ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು. ಮೂತ್ರ ವಿಸರ್ಜಿಸುವ ಜಾಗದಲ್ಲಿ ತುರಿಕೆ, ಕೆಂಪಾಗುವಿಕೆ, ದದ್ದ ಇತ್ಯಾದಿ. ಹೊಟ್ಟೆನೋವು ಹೆಚ್ಚಾಗಬಹುದು.
ಹೀಗಾದ್ರೆ ಏನ್ಮಾಡೇಕು?

ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅವರು ಕೆಲವು ಆ್ಯಂಟಿಬಯಾಟಿಕ್ಸ್ ಮತ್ತು ನೋವಿನ ಉಪಶಮಯಕ್ಕೆ ಔಷಧ ಕೊಡುತ್ತಾರೆ.
ಲೈಂಗಿಕ ಕ್ರಿಯೆಗೂ ಮೊದಲು ಹಾಗೂ ನಂತರ ಗುಪ್ತಾಂಗವನ್ನು ಸ್ವಚ್ಛಗೊಳಿಸಿ.ಲೈಂಗಿಕ ಕ್ರಿಯೆಯ ಬಳಿಕ ಮೂತ್ರ ವಿಸರ್ಜಿಸಿ.
ಚೆನ್ನಾಗಿ ನೀರು ಕುಡಿಯಿರಿ, ಕಾಫಿಯಂಥ ಪೇಯಗಳಿಂದ ದೂರವಿರಿ.
ಹಣ್ಣಿನ ಜ್ಯೂಸ್ ಒಳ್ಳೆಯದು. ಲೈಂಗಿಕ ಕ್ರಿಯೆಯಲ್ಲಿ ತೇವವಾಗದಿದ್ದರೆ
ಲ್ಯೂಬ್ರಿಕೆಂಟ್ ಜೆಲ್‌ಗಳು ಸಿಗುತ್ತವೆ. ಅವನ್ನು ಬಳಸಿ. 

click me!