
ಹಿಂದೂಗಳ ಇಷ್ಟ ದೈವ ಶಿವನನ್ನು ಪೂಜಿಸುವ ವಿಶೇಷ ದಿನ ಶಿವರಾತ್ರಿ. ಮಂಗಳವಾರ ಈ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಲ್ಲಿ ಕೆಲವು ತಿಂಡಿಗಳನ್ನು ಮಾಡಿ ಈಶ್ವರನಿಗೆ ಅರ್ಪಿಸಿ, ನಾವು ಸೇವಿಸುವುದು ಸಾಮಾನ್ಯ. ಅದರಲ್ಲಿ ಮುಖ್ಯವಾದ ಹೆಸರು ಬೇಳೆ ಪಾಯಸ ಮಾಡೋ ವಿಧಾನ ಇಲ್ಲಿದೆ...
ಬೇಕಾಗುವ ಸಾಮಾಗ್ರಿಗಳು...
ಹೆಸರುಬೇಳೆ – 1 ಲೋಟ
ಹಾಲು – 3 ಲೋಟ
ಸಕ್ಕರೆ – 1 ಲೋಟ
ಏಲಕ್ಕಿ ಪುಡಿ – 4-5 ಚಿಟಿಕೆ
ಕೇಸರಿ ದಳ – 2-3
ದ್ರಾಕ್ಷಿ, ಗೋಡಂಬಿ – ಸ್ವಲ್ಪ, ತುಪ್ಪದಲ್ಲಿ ಹುರಿದುಕೊಳ್ಳಬೇಕು.
ತುಪ್ಪ – 3-4 ಚಮಚ
ಮಾಡುವುದು ಹೇಗೆ?
ತುಸು ತುಪ್ಪದಲ್ಲಿ ಹುರಿದುಕೊಂಡ ಹೆಸರು ಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬೇಕು. ಅದಕ್ಕೆ ಸಕ್ಕರೆ ಹಾಲು ಮಿಕ್ಸ್ ಮಾಡಿ ಕುದಿಸಬೇಕು. ಇದಕ್ಕೆ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಹಾಕಿದರೆ, ರುಚಿ ರುಚಿಯಾದ ಹೆಸರುಬೇಳೆ ಪಾಯಸ ರೆಡಿ.
ಶಿವನಿಗೂ ಪ್ರಿಯವಾದ ಈ ಪಾಯಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಈ ಪಾಯಸ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.