
ಹೆಚ್ಚಿನವರ ಲೈಫ್ನಲ್ಲಿ ಬರುವ ಆತಂಕದ ಗಳಿಗೆ ಇದು. ನಮ್ಮ ಇಂಡಿಯನ್ ಫ್ಯಾಮಿಲಿಗಳಲ್ಲಿ ಮಕ್ಕಳನ್ನು ಅಪ್ಪ ಅಮ್ಮ ಜೊತೆಗೆ ಮಲಗಿಸಿಕೊಳ್ಳೋದು ರೂಢಿ. ಅಪ್ಪ ಅಮ್ಮನ ಮಧ್ಯದಲ್ಲಿ ಪಾಪು ಮಲಗಿರುತ್ತೆ. ಹಾಗಂತ ಆ ಅಪ್ಪನಿಗೆ ಸೆಕ್ಸ್ ನಲ್ಲಿ ವೈರಾಗ್ಯ ಬರೋ ವಯಸ್ಸಲ್ಲ. ಮಗು ಮಲಗಿದ ಚೆನ್ನಾಗಿ ನಿದ್ರಿಸಿತು ಅಂತ ಕನ್‌ಫರ್ಮ್ ಆದ ಮೇಲೆ ಅಪ್ಪ ಅಮ್ಮನ ಪಕ್ಕ ಬರುತ್ತಾನೆ. ನಿಧಾನಕ್ಕೆ ಅವರಿಬ್ಬರು ಸೆಕ್ಸ್ ಮೂಡ್ಗೆ ಮರಳುತ್ತಾರೆ. ತೀವ್ರವಾಗಿ ಸೆಕ್ಸ್ನಲ್ಲಿ ತೊಡಗಿಸಿಕೊಂಡಿರುವ ಹೊತ್ತಿಗೆ ಸರಿಯಾಗಿ ಮಗು ಎದ್ದು ಕೂರುತ್ತೆ. ಕಣ್ಣು ಪಿಳಿ ಪಿಳಿ ಬಿಡುತ್ತಾ ಆತ್ತಿತ್ತ ನೋಡುತ್ತೆ. ಕಳ್ಳರಿಬ್ಬರು ಸಿಕ್ಕಿಬೀಳ್ತಾರೆ!
ಷಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ನೋಡುವ ಪುಟ್ಟ ಕಂದಮ್ಮನ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಶಿವಮೊಗ್ಗದ ಪ್ರಖ್ಯಾತ ಮನೋಶಾಸ್ತ್ರಜ್ಞ ದಿ. ಡಾ.ಅಶೋಕ್ ಪೈ ಹಲವು ಕಥೆಗಳನ್ನು ಬರೆದಿದ್ದಾರೆ. ಮಗುವಿನ ಮಾನಸಿಕ ಆರೋಗ್ಯವನ್ನು ಇಂಥವು ಬಹಳಷ್ಟು ಘಾಸಿಗೊಳಿಸುತ್ತವೆ. ಆ ಕಾರಣದಿಂದಲೇ ಪೋಷಕರು ಇಂಥ ವಿಷಯಗಳಲ್ಲಿ ಎಷ್ಟು ಎಚ್ಚರ ವಹಿಸಿದರೂ ಸಾಲದು. ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸುವಂಥ ಚಾಕಚಕ್ಯತೆ ಇರಬೇಕು.
ಮಕ್ಕಳನ್ನು ಬೇರೆ ರೂಮ್ ನಲ್ಲಿ ಮಲಗಿಸಿರೋರಿಗೂ ಈ ಗೋಳು ತಪ್ಪಿದ್ದಲ್ಲ. ಇಬ್ಬರೂ ಮೈಮೇಲೆ ಪ್ರಜ್ಞೆಯಿಲ್ಲದೇ ಸೆಕ್ಸ್ನಲ್ಲಿ ಮುಳುಗಿರುವ ಹೊತ್ತಿಗೆ ಸರಿಯಾಗಿ ಪುಟ್ಟ ಪಾದಗಳು ಮಂಚದ ಕೆಳಗೆ ಕಾಣಿಸಿಕೊಳ್ಳುತ್ತವೆ. ಗಾಬರಿ, ಆತಂಕ, ನಾಚಿಕೆಯಲ್ಲಿ ಗಂಡ ಹೆಂಡತಿ ತಡಬಡಾಯಿಸುತ್ತಾರೆ. ಇಂಥಾ ಟೈಮಲ್ಲಿ ಏನ್ಮಾಡ್ಬೇಕು ಅಂತ ಗೊತ್ತಾಗದ ಹೆತ್ತವರು ಮೈ ಮೇಲೆ ಬೆಡ್ ಶೀಟ್ ಎಳೆದುಕೊಂಡು ಮಗುವನ್ನು ಮಲಗಿಸುವ ಪ್ರಯತ್ನ ಮಾಡುತ್ತಾರೆ. ಕೆಲವರು ಅದರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಾರೆ, ಮತ್ತೆ ಕೆಲವರು ಬೈದು ಮಗುವನ್ನು ಆಚೆ ಕಳಿಸೋದು, ಅದರ ಪ್ರಶ್ನೆಗಳನ್ನು ಮುಚ್ಚಿಹಾಕಲು ಪ್ರಯತ್ನಿಸುವುದೋ ಮಾಡುತ್ತಾರೆ. ಆದರೆ ಇಂಥಾ ಟೈಮ್ನಲ್ಲಿ ಪೋಷಕರು ಹೇಗೆ ಬಿಹೇವ್ ಮಾಡಿದರೆ ಅವರಿಗೂ ಒಳ್ಳೆಯದು ಮಕ್ಕಳ ಮನಸ್ಸಿಗೂ ಉತ್ತಮ ಅನ್ನೋ ಡೀಟೈಲ್ಸ್ ಇಲ್ಲಿದೆ.
ಮಗುವಿನ ಬಗ್ಗೆ ನಿಮ್ಮಲ್ಲಿರುವ ಈ ತಪ್ಪುಕಲ್ಪನೆಗಳನ್ನು ತೊಡೆದು ಹಾಕಿ
- ಹೀಗೆ ಸಿಕ್ಕಿಬಿದ್ದಾಗ ಮಗುವಿಗೆ ಏನಾದರೂ ತಿಳಿಸೋ ಮೊದಲು ಅದು ಏನನ್ನೆಲ್ಲ ಗಮನಿಸಿದೆ ಅನ್ನೋದನ್ನು ಕನ್‌ಫರ್ಮ್ ಮಾಡಿಕೊಳ್ಳಿ. ಎಷ್ಟೋ ಸಲ ನಾವೇ ಗಾಬರಿ ಬಿದ್ದಿರ್ತೀವಿ ಮಗು ಎಲ್ಲವನ್ನೂ ನೋಡಿ ಬಿಟ್ಟಿತೇನೋ, ನಮ್ಮ ಮರ್ಯಾದೆ ಎಲ್ಲ ಹೋಯ್ತೇನೋ ಅಂತ. ಆದರೆ ನಿಜದಲ್ಲಿ ಮಗುವಿಗೆ ನೀವೇನು ಮಾಡ್ತಿದ್ದೀರಿ ಅನ್ನೋದೇ ಗೊತ್ತಾಗಿರಲ್ಲ. ಅದಿನ್ನೂ ನಿದ್ದೆಯ ಮೂಡ್ನಲ್ಲೋ ಕನಸಿನ ಮೂಡ್‌ನಲ್ಲೋ ಇರುತ್ತೆ. ಹೀಗಾಗಿ ಆರಂಭದಲ್ಲೇ ಕಳ್ಳನ ಥರ ಮನಸ್ಸು ಹುಳ್ಳಗೆ ಮಾಡ್ಬೇಡಿ, ಉಪಾಯವಾಗಿ ಮಗು ಏನನ್ನೆಲ್ಲ ಗಮನಿಸಿತು ಅನ್ನೋದನ್ನು ತಿಳಿಯಲು ಪ್ರಯತ್ನಿಸಿ.
- ಮಗುವಿನ ವಯಸ್ಸು ಯಾವುದು ಅನ್ನೋದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸೆಕ್ಸ್ ಬಗ್ಗೆ ಮಗುವೇನಾದರೂ ಪ್ರಶ್ನೆ ಕೇಳಿದರೆ ಉತ್ತರಿಸಬಹುದು.
- ಮಗು ಇನ್ನೂ ತುಂಬಾ ಚಿಕ್ಕದು, ಎರಡರಿಂದ ಐದು ವರ್ಷ ಒಳಗಿನದು ಅಂತಾದರೆ ಅದಕ್ಕೆ ನೀವು ಸೆಕ್ಸ್ ಮಾಡ್ತಿದ್ದೀರಿ ಅಂತ ಗೊತ್ತಾಗಲ್ಲ. ಅಂಥ ಪರಿಸ್ಥಿತಿಯನ್ನು ಮುಗ್ಧ ಮಗುವಿನ ಮನಸ್ಸಿಗೆ ಆಘಾತವಾಗದಂತೆ ಎದುರಿಸಿ.
- ಮಗು ಇನ್ನೂ ಸ್ವಲ್ಪ ದೊಡ್ಡದು ಆರೇಳು ವರ್ಷದಿಂದ ಹತ್ತು ವರ್ಷದೊಳಗಿನ ಪ್ರಾಯದ್ದು ಅಂದರೆ ಅದ್ಕೆ ನೀವು ಮಾಡುತ್ತಿರುವ ಕ್ರಿಯೆಯ ಬಗ್ಗೆ ಕುತೂಹಲ ಇರುತ್ತೆ. ಮಗುವಿಗೆ ಇದನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರೌಢತೆ ಇದೆ ಅಂತ ನಿಮಗನಿಸಿದರೆ ಯಾವ ಕುತೂಹಲವೂ ಬೆಳೆಯದ ಹಾಗೆ ವೈಜ್ಞಾನಿಕವಾಗಿ ಲೈಂಗಿಕತೆಯನ್ನು ವಿವರಿಸಿ. ವಯಸ್ಕರ ಸಾಮಾನ್ಯ ದೈಹಿಕ ಕ್ರಿಯೆ ಅದು ಅನ್ನೋದನ್ನು ವಿವರಿಸಿ.
- ಹನ್ನೊಂದು ವರ್ಷ ಅಥವಾ ಅದಕ್ಕಿಂತ ದೊಡ್ಡ ವಯಸ್ಸಿನ ಮಕ್ಕಳಾಗಿದ್ದರೆ ಮಗುವಿಗೆ ಇದೊಂದು ಗಂಡ ಹೆಂಡತಿ ನಡುವೆ ನಡೆಯುವ ಕ್ರಿಯೆ. ಇದು ಸಹಜ ಅನ್ನೋದನ್ನು ವಿವರಿಸಬಹುದು.
- ಟೀನೇಜ್ ಮಕ್ಕಳಾಗಿದ್ರೆ ಅವರಿಗೆ ಇಷ್ಟೊತ್ತಿಗಾಗಲೇ ಸೆಕ್ಸ್ ಬಗ್ಗೆ ತಿಳಿದಿರುತ್ತೆ. ಆದರೆ ನಿಮ್ಮ ಸೆಕ್ಸ್ ಅನ್ನು ಕಣ್ಣಾರೆ ನೋಡುವ ಕುತೂಹಲ ಇರಬಹುದು. ಅವರಿಗೆ ಸೆಕ್ಸ್ ಬಗ್ಗೆ ವಿವರಿಸಿ. ಇದನ್ನು ಯಾವಾಗ, ಯಾರು ಮಾಡಿದ್ರೆ ಸೇಫ್ ಅನ್ನೋದನ್ನು ಮನದಟ್ಟು ಮಾಡಿಸಿ.
ಹಿಂಗೆ ಮಾಡಿದ್ರೆ ಕಿರಿಕ್ ಮಾಡದೆ ಡ್ರೆಸ್ ಹಾಕೊಳ್ತಾರೆ ಮಕ್ಕಳು
ಯಾವ ಕಾರಣಕ್ಕೂ ಇಂಥಾ ವಿಷಯದಲ್ಲಿ ಮಗುವಿನ ಮುಗ್ಧ ಮನಸ್ಸನ್ನು ಮೋಸಮಾಡಬೇಡಿ, ನೋವು ಮಾಡಬೇಡಿ. ಮಗುವಿನಲ್ಲಿ ಸಂಶಯ ಉಳಿಯದ ಹಾಗೆ, ಕುತೂಹಲ ಬೆಳೆಯದ ಹಾಗೆ ನೋಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.