ವೇಗವಾಗಿ ಬೆಳೆಯುತ್ತಿದೆ ವಿಶ್ವದ ಜನಸಂಖ್ಯೆ, ಎಷ್ಟು ಗೊತ್ತಾ?

By Suvarna NewsFirst Published Dec 8, 2022, 4:00 PM IST
Highlights

ವಿಶ್ವದ ಜನಸಂಖ್ಯೆಯಲ್ಲಿ ಚೀನಾದ ದೊಡ್ಡ ಪಾಲಿದೆ. ಈ ವಿಷ್ಯದಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಕೆಲವೇ ವರ್ಷದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ. ಚೀನಾ, ಭಾರತ ಬಿಟ್ಟು ಅನೇಕ ದೇಶಗಳು ಈ ಪಟ್ಟಿಯಲ್ಲಿ ಸ್ಪರ್ಧೆ ನೀಡ್ತಿವೆ. 
 

2022 ಕಳೆದು 2023 ಬರ್ತಿದೆ. ನಮ್ಮ ದೇಶ, ವಿದೇಶದ ಬಗ್ಗೆ ನಾವು ತಿಳಿಯಬೇಕಾಗಿದ್ದು ಸಾಕಷ್ಟಿದೆ. ಜನಸಂಖ್ಯೆ ದಿನ ದಿನ ಹೆಚ್ಚಾಗ್ತಿದೆ ಎನ್ನುವ ಮಾತನ್ನು ನಾವು ಆಗಾಗ ಕೇಳ್ತಿರುತ್ತೇವೆ. ಆದ್ರೆ ಯಾವ ದೇಶದಲ್ಲಿ ಎಷ್ಟು ಜನಸಂಖ್ಯೆಯಿದೆ, ಯಾವ ದೇಶ ಜನಸಂಖ್ಯೆ ವಿಷ್ಯದಲ್ಲಿ ಎಷ್ಟನೇ ಸ್ಥಾನದಲ್ಲಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನಾವಿಂದು 2022ರಲ್ಲಿ ಯಾವ್ಯಾವ ದೇಶದ ಜನಸಂಖ್ಯೆ ಎಷ್ಟು ಎಂಬುದನ್ನು ನಿಮಗೆ ಹೇಳ್ತೇವೆ. 

ವಿಶ್ವ (World) ದ ಅತಿ ಹೆಚ್ಚು ಜನಸಂಖ್ಯೆ (Population) ಹೊಂದಿರುವ ದೇಶ ಚೀನಾ (China) ಎಂಬುದು ಎಲ್ಲರಿಗೂ ಗೊತ್ತು. ಚೀನಾದ ಜನಸಂಖ್ಯೆ 144 ಕೋಟಿ ಮೀರಿದೆ. ಈ ಪಟ್ಟಿಯಲ್ಲಿ ನಮ್ಮ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತ (India)ದ ಪ್ರಸ್ತುತ ಜನಸಂಖ್ಯೆ 140 ಕೋಟಿಗೂ ಹೆಚ್ಚು. ವಿಶ್ವಸಂಸ್ಥೆ 1989 ರಲ್ಲಿ ಮೊದಲ ಬಾರಿಗೆ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ಘೋಷಿಸಿತು. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ದೊಡ್ಡ ಸಮಸ್ಯೆಯಾಗ್ತಿದೆ. ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದ ಜನಸಂಖ್ಯೆ ಪ್ರತಿ ಗಂಟೆಗೆ, ಪ್ರತಿ ಸೆಕೆಂಡಿಗೆ ಹೆಚ್ಚುತ್ತಿದೆ. ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುವುದು ಕಷ್ಟ. ಅದನ್ನು ಅಂದಾಜು ಮಾಡಬಹುದು. ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವುದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. 

ಮನುಷ್ಯ ಪ್ರಾಣಿಗಿಂತ ಏಕೆ ವಿಭಿನ್ನ ಹೇಳಿ? ಚಾಣಕ್ಯ ಏನು ಹೇಳಿದ್ದಾನೆ ಕೇಳಿಸ್ಕೊಳ್ಳಿ

ಪ್ರಪಂಚದ ಜನಸಂಖ್ಯೆ ಎಷ್ಟು ? : ಪ್ರಸ್ತುತ ಸಮಯದ ಬಗ್ಗೆ ಮಾತನಾಡುವುದಾದ್ರೆ 2022ರಲ್ಲಿ ಪ್ರಪಂಚದ ಜನಸಂಖ್ಯೆ 8 ಶತಕೋಟಿ ದಾಟಿದೆ. ಇದು ಪ್ರತಿ ಕ್ಷಣವೂ ಹೆಚ್ಚುತ್ತಿದೆ. ಈ ಬೆಳೆಯುತ್ತಿರುವ ಜನಸಂಖ್ಯೆಗೆ ಚೀನಾ ಅತಿ ದೊಡ್ಡ ಕೊಡುಗೆ ನೀಡುತ್ತಿದೆ. ಇದರ ನಂತರ ಭಾರತ ಬರುತ್ತದೆ. ವಿಶ್ವದ ಶೇಕಡಾ 17.9 ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ ಅಂದ್ರೆ ನೀವು ಅಚ್ಚರಿಪಡಬೇಕಾಗಿಲ್ಲ. ಇನ್ನು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಿಯಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ  ಐದನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಎಂಟನೇ ಸ್ಥಾನದಲ್ಲಿದೆ.

ವೇಗವಾಗಿ ಹೆಚ್ಚುತ್ತಿದೆ ಜನಸಂಖ್ಯೆ : ಪ್ರಪಂಚದ ಜನಸಂಖ್ಯೆ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದನ್ನು ನೀವು ಈ ಕೆಳಗಿನ ಪಟ್ಟಿಯಿಂದ ತಿಳಿಯಬಹುದು. 

1974ರಲ್ಲಿ ಪ್ರಪಂಚದ ಜನಸಂಖ್ಯೆ 4 ಬಿಲಿಯನ್ ಇತ್ತು. 
1987ರಲ್ಲಿ ಪ್ರಪಂಚದ ಜನಸಂಖ್ಯೆ 5 ಬಿಲಿಯನ್ ಗೆ ಏರಿತ್ತು.
1999ರಲ್ಲಿ ಪ್ರಪಂಚದಾದ್ಯಂತ 6 ಬಿಲಿಯನ್ ಜನಸಂಖ್ಯೆಯಿತ್ತು.
2012ರಲ್ಲಿ ಪ್ರಪಂಚದ ಜನಸಂಖ್ಯೆ 7 ಬಿಲಿಯನ್ ಗೆ ಬಂದು ನಿಂತಿತ್ತು.
2022ರಲ್ಲಿ ಪ್ರಪಂಚದ ಜನಸಂಖ್ಯೆ 8 ಬಿಲಿಯನ್ ಗೆ ಏರಿಕೆಯಾಗಿದೆ. 

ಇಂಟರ್ನೆಟ್‌ನಲ್ಲಿ ವರ್ಲ್ಡ್‌ಮೀಟರ್ ಎಂಬ ಹೆಸರಿನ ವೆಬ್‌ಸೈಟ್  ನಲ್ಲಿ ಇಡೀ ಪ್ರಪಂಚದ ಪ್ರಸ್ತುತ ಜನಸಂಖ್ಯೆಯ ಮಾಹಿತಿ ಲಭ್ಯವಾಗುತ್ತದೆ. ಬಹುತೇಕ ಎಲ್ಲ ದೇಶದ ಲೈವ್ ಜನಸಂಖ್ಯೆಯನ್ನು ಈ ಇವೆಬ್ಸೈಟ್ ನೀಡುತ್ತದೆ. ಈ ವೆಬ್‌ಸೈಟ್ ಪ್ರಕಾರ ಪ್ರಸ್ತುತ ಇಡೀ ಪ್ರಪಂಚದ ಜನಸಂಖ್ಯೆ 800 ಕೋಟಿ. ಇದು ಪ್ರತಿ ಸೆಕೆಂಡಿಗೆ ಹೆಚ್ಚುತ್ತಿದೆ. 1950 ರಲ್ಲಿ ಪ್ರಪಂಚದ ಜನಸಂಖ್ಯೆ ಸುಮಾರು 250 ಕೋಟಿ ಇತ್ತು. ಈಗ ಅದು 8 ಬಿಲಿಯನ್ ದಾಟಿದೆ. ಇಡೀ ವಿಶ್ವದಲ್ಲಿ ಭಾರತದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎನ್ನಲಾಗುತ್ತದೆ. ಆದರೆ ಪ್ರಪಂಚದ ಇತರ ದೇಶಗಳ ಜನಸಂಖ್ಯೆಯ ಬೆಳವಣಿಗೆ ದರವು ಭಾರತಕ್ಕಿಂತ ವೇಗವಾಗಿದೆ. ಕೆಲವು ಅಂಕಿಅಂಶಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಭಾರತವು ಜನಸಂಖ್ಯೆಯ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. 

ವೈನ್ ಬಾಟಲಿ 750 ಎಂಎಲ್ ಇರೋದ್ಯಾಕೆ?

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ದೇಶಗಳು :
1. ಚೀನಾ 144 ಕೋಟಿ 84 ಲಕ್ಷ  
2. ಭಾರತ 140 ಕೋಟಿ 66 ಲಕ್ಷ 
3. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ 33 ಕೋಟಿ 48 ಲಕ್ಷ  
4. ಇಂಡೋನೇಷ್ಯಾ 27 ಕೋಟಿ 91 ಲಕ್ಷ  
5. ಪಾಕಿಸ್ತಾನ 22 ಕೋಟಿ 94 ಲಕ್ಷ  
6. ನೈಜೀರಿಯಾ 21 ಕೋಟಿ 67 ಲಕ್ಷ  
7. ಬ್ರೆಜಿಲ್ 21 ಕೋಟಿ 53 ಲಕ್ಷ  
8. ಬಾಂಗ್ಲಾದೇಶ 16 ಕೋಟಿ 78 ಲಕ್ಷ  
9. ರಷ್ಯಾ 14 ಕೋಟಿ 58 ಲಕ್ಷ  
10. ಮೆಕ್ಸಿಕೋ 13 ಕೋಟಿ 15 ಲಕ್ಷ  

ಪ್ರಸ್ತುತ ವಿಶ್ವದ ಜನಸಂಖ್ಯೆಯು 8 ಬಿಲಿಯನ್ ದಾಟಿದೆ. ಮುಂದಿನ 30 ವರ್ಷಗಳವರೆಗೆ ಜನಸಂಖ್ಯೆಯ ಬೆಳವಣಿಗೆಯ ದರ ಇದೇ ಆಗಿದ್ದರೆ  2050 ರ ವೇಳೆಗೆ ವಿಶ್ವದ ಜನಸಂಖ್ಯೆ 9.8 ಶತಕೋಟಿ ದಾಟಲಿದೆ.

click me!