ಪ್ರಾಣಾಯಾಮದಲ್ಲಿ ನಮ್ಮ ಆರೋಗ್ಯದ ಗುಟ್ಟಿದೆ. ಪ್ರತಿ ದಿನ ಪ್ರಾಣಾಯಾಮ ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಚಂದ್ರನಾಡಿ ಹಾಗೂ ಸೂರ್ಯನಾಡಿ ಪ್ರಾಣಾಯಾಮ ನಮ್ಮ ದೇಹವನ್ನು ರೋಗದಿಂದ ದೂರವಿಡುವ ಕೆಲಸ ಮಾಡುತ್ತವೆ.
ಈಗಿನ ಒತ್ತಡದ ಜೀವನದಲ್ಲಿ ಆರೋಗ್ಯದ (Health) ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಯೋಗ ನಮಗೆ ನೆರವಾಗುತ್ತದೆ. ದಿನದಲ್ಲಿ ಅರ್ಧ ಗಂಟೆ ಯೋಗಾಭ್ಯಾಸ ಮಾಡಿದ್ರೂ ನಾವು ರೋಗದಿಂದ ದೂರವಿರಬಹುದು. ಯೋಗ– ಪ್ರಾಣಾಯಾಮಗಳು ನಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತವೆ. ಪ್ರಾಣಾಯಾಮದಲ್ಲಿ ಅನೇಕ ವಿಧಾನಗಳಿವೆ. ಅದ್ರಲ್ಲಿ ಮೂಗಿನಿಂದ ಉಸಿರಾಡುವ ಪ್ರಾಣಾಯಾಮ ಕೂಡಾ ಸೇರಿದೆ. ಒಂದು ಹೊಳ್ಳೆಯನ್ನು ಮುಚ್ಚಿ ಮತ್ತೊಂದು ಹೊಳ್ಳೆಯಲ್ಲಿ ಮಾತ್ರ ಉಸಿರಾಡಲಾಗುತ್ತದೆ.
ಎಡ (Left) ಹೊಳ್ಳೆಯಿಂದ ಉಸಿರಾಡುವ ಪ್ರಾಣಾಯಾಮ (Pranayama) ವನ್ನು ನೀವು ಮಾಡ್ತಿದ್ದರೆ ಅದ್ರ ಪ್ರಯೋಜನ ತಿಳಿದುಕೊಳ್ಳಿ. ಎಡ ಹೊಳ್ಳೆಯಿಂದ ಉಸಿರಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಎಡ ಹೊಳ್ಳೆಯನ್ನು ಚಂದ್ರನಾಡಿ ಎಂದು ಕರೆಯುತ್ತಾರೆ. ಇದು ತಂಪಾದ ಗುಣವನ್ನು ಹೊಂದಿದೆ. ಅದನ್ನು ಮಹಿಳೆಯರಿಗೆ ಹೋಲಿಕೆ ಮಾಡಲಾಗುತ್ತದೆ. ಎಡ ಹೊಳ್ಳೆಯಿಂದ ಉಸಿರಾಟ (Breath) ಅಭ್ಯಾಸ ಮಾಡಿದ್ರೆ ಒತ್ತಡ ಕಡಿಮೆ ಮಾಡಬಹುದು. ಮೆದುಳನ್ನು (Brain) ಚುರುಕುಗೊಳಿಸಬಹುದು.
DIABETES DIET: ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಮೆಂತ್ಯೆ ಸೊಪ್ಪು
ನಿಮ್ಮ ಸೃಜನಶೀಲ ಸಾಮರ್ಥ್ಯ ಇದ್ರಿಂದ ಹೆಚ್ಚಾಗುತ್ತದೆ. ಎಡ ಮೂಗಿನ ಮೂಲಕ ಉಸಿರಾಡುವುದರಿಂದ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಕಡಿಮೆ ಮಾಡಬಹುದು. ಇದ್ರಿಂದ ದೇಹ ತಂಪಾಗುವ ಜೊತೆಗೆ ಸಂತಾನೋತ್ಪತ್ತಿ ಸುಲಭವಾಗುತ್ತದೆ. ಎಡ ಹೊಳ್ಳೆಯಲ್ಲಿ ನಾವು ಉಸಿರಾಟ ಕ್ರಿಯೆ ನಡೆಸಿದಾಗ ಇಡಾ ನಾಡಿ ಮೂಲಕ ಪ್ರಾಣದ ಹರಿವು ಹೆಚ್ಚಾಗುತ್ತದೆ. ಆಗ ನಿಮ್ಮ ದೇಹ ತಂಪಾಗುತ್ತದೆ. ಇದು ಸ್ಯಾಕ್ರಲ್ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಇದಲ್ಲದೆ ಇದನ್ನು ಅಭ್ಯಾಸ ಮಾಡುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲ ಸಕ್ರಿಯಗೊಳ್ಳುತ್ತದೆ.
ಎಡ ಹೊಳ್ಳೆ ಮೂಲಕ ಉಸಿರಾಡಿದ್ರೆ ಆಗುವ ಪ್ರಯೋಜನಗಳು :
ಎಡ ಹೊಳ್ಳೆಯಲ್ಲಿ ನೀವು ಉಸಿರಾಟ ಕ್ರಿಯೆ ನಡೆಸಿದ್ರೆ ಜೀರ್ಣಕ್ರಿಯೆ ಸುಗಮವಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಉತ್ತಮ ನಿದ್ರೆಗೆ ಇದು ಸಹಕಾರಿಯಾಗಿದೆ. ಎಡ ಹೊಳ್ಳೆಯಲ್ಲಿ ನೀವು ಉಸಿರಾಡುವುದ್ರಿಂದ ನಿಮ್ಮ ಬಲ ಮೆದುಳು ಸೃಜನ ಶೀಲ ಚಿಂತನೆ ನಡೆಸಲು ಶುರು ಮಾಡುತ್ತದೆ. ಮೆದುಳಿನ ಬಲಭಾಗಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದ್ರಿಂದಾಗಿ ಸೃಜನಶೀಲ ಚಿಂತನೆ, ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಉತ್ತೇಜನಗೊಳ್ಳುತ್ತದೆ.
ಎಡ ಹೊಳ್ಳೆಯಲ್ಲಿ ಉಸಿರಾಟ ನಡೆಸುವುದ್ರಿಂದ ನಮ್ಮ ಉಸಿರಾಟದ ಸ್ನಾಯು ಬಲಗೊಳ್ಳುತ್ತದೆ. ಒಂದೇ ಹೊಳ್ಳೆಯಲ್ಲಿ ಉಸಿರಾಡಿದಾಗ ಸ್ವಾಭಾವಿಕ ಉಸಿರಾಟಕ್ಕೆ ಇದು ಪ್ರತಿರೋಧ ಉಂಟುಮಾಡುತ್ತದೆ. ಹಾಗಾಗಿ ನಮ್ಮ ಉಸಿರಾಟದ ಲಯವನ್ನು ನಿಧಾನಗೊಳಿಸುತ್ತದೆ. ಎಡ ಹೊಳ್ಳೆಯಲ್ಲಿ ನಾವು ಉಸಿರಾಟ ಕ್ರಿಯೆ ನಡೆಸುವುದ್ರಿಂದ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಬಹುದು. ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ.
ಪ್ರಾಣಾಯಾಮ ಮಾಡುವ ವೇಳೆ ನಮ್ಮ ಗಮನ ಸಂಪೂರ್ಣವಾಗಿ ಉಸಿರಿಟಾದ ಮೇಲೆ ಇರಬೇಕಾಗುತ್ತದೆ. ನಾವು ಒಂದೇ ಹೊಳ್ಳೆಯಲ್ಲಿ ಉಸಿರನ್ನು ತೆಗೆದುಕೊಂಡು ಹೊರಗೆ ಬಿಡ್ತಿದ್ದರೆ ನಮ್ಮ ಗಮನ ಅದ್ರ ಮೇಲೆ ಕೇಂದ್ರೀಕರಿಸುವ ಕಾರಣ ಗಮನ ಬೇರೆಡೆ ಹೋಗುವುದಿಲ್ಲ. ಅನವಶ್ಯಕ ಆಲೋಚನೆ, ಚಿಂತನೆಗಳಿಂದ ನಾವು ದೂರವಿರಬಹುದು.
Exercise ಅತಿಯಾದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ, ಅತಿಯಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ?
ಎಡ ಹೊಳ್ಳೆಯಿಂದ ಉಸಿರಾಡುವುದು ಹೇಗೆ? : ಮೊದಲು ನಿಮಗೆ ಆರಾಮವೆನಿಸುವ ಆಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು ನೇರವಾಗಿರಬೇಕು. ನಿಮ್ಮ ಬಲಗೈ ಹೆಬ್ಬೆರಳಿನಿಂದ ಬಲ ಹೊಳ್ಳೆಯನ್ನು ಮುಚ್ಚಬೇಕು. ನಂತ್ರ ನಿಧಾನವಾಗಿ ಮತ್ತು ದೀರ್ಘವಾದ ಉಸಿರನ್ನು ಎಡ ಹೊಳ್ಳೆಯಿಂದ ತೆಗೆದುಕೊಂಡು ನಿಧಾನವಾಗಿ ಬಿಡಬೇಕು. ಮುಖದಲ್ಲಿ ಮಂದಹಾಸವಿರಬೇಕು. ಮನಸ್ಸು ಶಾಂತವಾಗಿರಬೇಕು. ನಿಮ್ಮೆಲ್ಲ ಗಮನ ಸಂಪೂರ್ಣ ಉಸಿರಾಟದ ಮೇಲೆ ಇರಬೇಕು. ಉಸಿರು ತೆಗೆದುಕೊಳ್ಳುವಾಗ ಹಾಗೂ ಬಿಡುವಾಗ ಅತಿಯಾದ ಶಬದ್ಧ ಮಾಡಬಾರದು. ನೀವು ಕನಿಷ್ಟ 12 ಬಾರಿಯಾದ್ರೂ ಈ ಕ್ರಿಯೆ ನಡೆಸಬೇಕು. ಪ್ರತಿ ದಿನ ಈ ಪ್ರಾಣಾಯಾಮ ಮಾಡುವುದ್ರಿಂದ ನೀವು ಹೆಚ್ಚಿನ ಲಾಭವನ್ನು ಕಾಣಬಹುದು.