ಮಕ್ಕಳ ಬ್ರೇಕ್ ಫಾಸ್ಟ್ ಹೇಗಿದ್ದರೆ ಚೆಂದ?

By Web Desk  |  First Published Jan 19, 2019, 3:07 PM IST

ಮಕ್ಕಳು ಹೊಟ್ಟೆ ತುಂಬಾ ತಿಂದು ಹೊರಟರೆ ಅಮ್ಮನಿಗೆ ಏನೋ ನೆಮ್ಮದಿ. ಆದರೆ, ತಿನಸೋದು ನೆನಪಿಸಿಕೊಂಡರೆ ನಿದ್ರೆಯೇ ಬರೋಲ್ಲ. ಇದಕ್ಕೆ ಇಲ್ಲಿದೆ ಪರಿಹಾರ....


 

ಪ್ರತಿ ತಾಯಂದಿರಿಗೆ ಇರುವ ಒಂದು ದೊಡ್ಡ ತಲೆ ನೋವೆಂದರೆ ಮಕ್ಕಳಿಗೆ ಬೆಳಗ್ಗಿನ ತಿಂಡಿ ಏನು ಮಾಡೋದು ಎಂದು? ಏಕೆಂದರೆ ಮಕ್ಕಳಿಗೆ ಟೇಸ್ಟಿ ಆಹಾರ ಬೇಕು, ಜೊತೆಗೆ ಅದು ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು. ಅದು ಟೇಸ್ಟಿ ಇರದಿದ್ದರೆ ಮಕ್ಕಳು ತಿನ್ನೋದು ಕಷ್ಟ. ಟೇಸ್ಟ್ ಹಾಗೂ ಹೆಲ್ದೀ ಎರಡೂ ಜತೆಯಾಗೋದು ಮತ್ತೂ ಕಷ್ಟ. ಈ ಟೆನ್ಷನ್ ಇರೋ ಪೋಷಕರಿಗೆ ಸುಲಭವಾಗಿ ತಯಾರಿಸಬಲ್ಲ ಹೆಲ್ದೀ ಆಹಾರಗಳು ಇಲ್ಲಿವೆ..

Latest Videos

undefined

ಹಾಲು: ಮಕ್ಕಳಿಗೆ ಹಾಲು ಇಷ್ಟವೆಂದರೆ ಮುಂಜಾನೆ ಬ್ರೇಕ್ ಫಾಸ್ಟ್ ಜೊತೆ ಅದನ್ನೇ ನೀಡಿ. ಆದರೆ ಕೊಡುವ ಹಾಲಿನಲ್ಲಿ ಈ ಅಂಶಗಳು ಇರುವಂತೆ ನೋಡಿಕೊಳ್ಳಿ. ಫುಲ್ ಫ್ಯಾಟ್, ಚಾಕಲೇಟ್ ಪುಡಿ ಹಾಕಿರುವ ಹಾಲನ್ನು ಮಕ್ಕಳು ಚಪ್ಪರಿಸಿ ಕುಡಿಯುತ್ತಾರೆ.

ಬ್ರೇಕ್ ಫಾಸ್ಟ್ ಮಿಸ್ ಮಾಡಿದರೇನಾಗುತ್ತೆ?

 

ನಟ್ಸ್ ಮತ್ತು ಡ್ರೈ ಫ್ರುಟ್ಸ್: ಪಿಸ್ತಾ, ಬಾದಾಮ್, ಖಾಜು, ವಾಲ್ನಟ್ ನೀಡಿ. ಒಣ ಹಣ್ಣುಗಳಲ್ಲಿ ಒಣ ದ್ರಾಕ್ಷಿ, ಖರ್ಜೂರ, ಅಂಜೂರ ನೀಡಿ. ಮಕ್ಕಳಿಗೆ ಭೇದಿ ಕಾಣಿಸಿಕೊಂಡರೆ ರಾತ್ರಿ ನೆನೆಸಿಟ್ಟಂತಹ ಒಣ ದ್ರಾಕ್ಷಿಯೂ ಆರೋಗ್ಯಕ್ಕೆ ಮದ್ದು.

 

ತಾಜಾ ಹಣ್ಣುಗಳು: ಸ್ಥಳೀಯ ಹಣ್ಣುಗಳು, ಸೀಸನಲ್ ಹಣ್ಣುಗಳು, ಬಾಳೆಹಣ್ಣು, ಸಪೋಟಾ, ಕಿತ್ತಳೆ ಹಣ್ಣು, ದ್ರಾಕ್ಷಿಯಂಥ ತಾಜಾ ಹಣ್ಣುಗಳನ್ನು ಮಕ್ಕಳಿಗೆ ನೀಡಿದರೆ ಆರೋಗ್ಯವೂ ಸುಧಾರಿಸುತ್ತೆ. ಹೊಟ್ಟೆಯೂ ತುಂಬುತ್ತೆ. ಆದರೆ ಪ್ಯಾಕೆಟ್‌ನಲ್ಲಿ ಬರುವಂಥ ಹಣ್ಣುಗಳನ್ನುಅವೈಯ್ಡ್ ಮಾಡಿದರೊಳಿತು.

ಬ್ರೆಡ್‌ನ 10 ಯುನಿಕ್ ಬ್ರೇಕ್ ಫಾಸ್ಟ್‌ಗಳಿವು...

ಮನೆ ತಿಂಡಿ: ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ದೋಸೆ, ಪರೋಟಾ, ಗೋಧಿಯಿಂದ ತಯಾರಿಸಿದ ಆಹಾರಗಳನ್ನೂ ಮಕ್ಕಳಿಗೆ ನೀಡಿ. ಆದರೆ ಯಾವುದೇ ಕಾರಣಕ್ಕೂ ಕಾರ್ನ್ ಫ್ಲೆಕ್ಸ್, ಓಟ್ಸ್, ಪ್ಯಾಕೆಟ್ ಜ್ಯೂಸ್‌ಗಳನ್ನು ನೀಡಬೇಡಿ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ರಾಗಿ ಮಾಲ್ಟ್ ಕೊಡಿ. ಮಕ್ಕಳಿಗೆ ಒಂದು ವೇಳೆ ಜೀರ್ಣ ಕ್ರಿಯೆ ಸಮಸ್ಯೆ, ಆ್ಯಸಿಡಿಟಿ ಅಥವಾ ಪಿರಿಯಡ್ಸ್ ಸಮಸ್ಯೆ ಕಂಡು ಬಂದರೆ ರಾಗಿ ಅಥವಾ ಜೋಳದ ಆಹಾರ ನೀಡಿ.

click me!