ಕೊಬ್ಬು ಕರಿಗಿಸೋ ಬಟಾಣಿ ಕಾ ಕಮಾಲ್ ಇದು...

By Web Desk  |  First Published Jan 18, 2019, 2:58 PM IST

ಇದು ಫ್ರೆಷ್ ಬಟಾಣಿ ಸಿಗೋ ಸೀಸನ್. ಪಲಾವ್, ವಾಂಗಿಬಾತಿಗೆ ಬಳಸೋ ಇದರಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತವೆ. ಸಿಗೋ ಸಮಯದಲ್ಲಿ ದೇಹಕ್ಕೆ ಸಾಕಷ್ಟು ಹೋದರೆ ಒಳ್ಳೆಯದು...


ಬಟಾಣಿ ಕಾಳು ಬಡಜನರ ಆಹಾರವೆಂದುಕೊಳ್ಳುತ್ತಾರೆ ಹಲವು ಮಂದಿ. ಆದರೆ ಇದೊಂದು ಪವರ್ ಹೌಸ್ ಎಂಬುವುದು ನಿಮಗೆ ಗೊತ್ತಾ? ಇದನ್ನು ಸರಿಯಾಗಿ ಬಳಸಿದರೆ ಆರೋಗ್ಯಕರ. ಇದರ ಪ್ರಯೋಜನಗಳೇನು?

  • ತೂಕ ಇಳಿಸುತ್ತೆ. ಬಟಾಣಿಯಲ್ಲಿ ಕಡಿಮೆ ಫ್ಯಾಟ್ ಇದೆ. ಒಂದು ಕಪ್ ಬಟಾಣಿಯಲ್ಲಿ 100 ಕ್ಯಾಲರಿಗಿಂತ ಕಡಿಮೆ ಶಕ್ತಿ ಇರುತ್ತದೆ. ಆದರೆ ಪ್ರೊಟೀನ್, ಫೈಬರ್ ಮತ್ತು ನ್ಯೂಟ್ರಿಯೆಂಟ್ಸ್ ಅಧಿಕವಾಗಿರುತ್ತದೆ.
  • ಹೊಟ್ಟೆ ಕ್ಯಾನ್ಸರ್ ನಿವಾರಿಸುತ್ತದೆ. ಪ್ರತಿದಿನ ಒಂದು ಕಪ್ ಬಟಾಣಿ ಸೇವಿಸಿದರೆ ಕ್ಯಾನ್ಸರ್ ಬರೋದಿಲ್ಲ.
  • ರೋಗ ನಿರೋಧಕ ಶಕ್ತಿ ಇದರಲ್ಲಿ ಹೆಚ್ಚಿದೆ. ಇದು ಇಮ್ಯೂನ್ ಸಿಸ್ಟಮನ್ನು ಬೂಸ್ಟ್ ಮಾಡುತ್ತದೆ. ಅಲ್ಲದೆ ಇದನ್ನು ಸೇವಸಿದರೆ ಹೆಚ್ಚು ಎನರ್ಜಿಯೂ ದಕ್ಕುತ್ತದೆ.
  • ಬಟಾಣಿ ಸುಕ್ಕು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಮರೆವು , ಹೃದಯ ಸಮಸ್ಯೆಯನ್ನೂ ನಿವಾರಿಸಬಲ್ಲದು.
  • ಬಟಾಣಿ ಸೇವಿಸುತ್ತಿದ್ದರೆ ರಕ್ತದಲ್ಲಿರುವ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ.
  • ಬಟಾಣಿಯಲ್ಲಿರುವ ಹೆಚ್ಚಿನ ಫೈಬರ್ ಅಂಶ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ. ಇದರಿಂದ ಅರೋಗ್ಯ ಉತ್ತಮವಾಗಿರುತ್ತದೆ.
  • ಒಂದು ಕಪ್ ಬಟಾಣಿಯಲ್ಲಿ ಶೇ.44 ವಿಟಾಮಿನ್ ಕೆ ಇರುತ್ತದೆ. ಇದನ್ನು ಸೇವಿಸಿದರೆ ಮೂಳೆಗಳಿಗೆ ಕ್ಯಾಲ್ಸಿಯಂ ದೊರೆಯುತ್ತದೆ.
  • ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಇಳಿಸಲೂ ಬಟಾಣಿ ಸಹಕರಿಸುತ್ತದೆ. ಇದು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗುತ್ತದೆ.
click me!