ಆರೋಗ್ಯ ವೃದ್ಧಿಗೆ ಕೆಲವು ಹಣ್ಣುಗಳನ್ನು ತಪ್ಪದೇ ತಿನ್ನಬೇಕು. ಅಂಥ ಹಣ್ಣುಗಳಿಂದ ಅಗತ್ಯ ಪೋಷಕಾಂಶಗಳು ದೊರೆದು, ಆರೋಗ್ಯವಂತರಾಗಬಹುದು. ಅಂಥ ಹಣ್ಣುಗಳು ಯಾವುವು?
ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಾಸ್ಪ್ಬೆರ್ರಿ, ಬ್ಲಾಕ್ ಬೆರ್ರಿ... ಹೀಗೆ ಬೆರ್ರಿ ಹಣ್ಣುಗಳು ತಿನ್ನುವುದಕ್ಕೆ ಏನೋ ಒಂಥರಾ ರುಚಿಯನ್ನು ಇರುತ್ತದೆ. ಜೊತೆಗೆ ಆರೋಗ್ಯಕ್ಕೂ ಮದ್ದು. ಈ ಹಣ್ಣುಗಳಲ್ಲಿ ವಿಟಮಿನ್ ಸಿ, ಫಾಲೆಟ್, ನಾರು ಮತ್ತು ಪೈಟೊನ್ಯೂಟ್ರಿಷಿಯಂಟ್ಸ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಪ್ರತಿ ದಿನ ಈ ಹಣ್ಣುಗಳಲ್ಲಿ ಒಂದಲ್ಲ ಒಂದು ಸೇವಿಸಿದರೆ ಅರೋಗ್ಯ ಉತ್ತಮವಾಗಿರುತ್ತದೆ. ಏನು ಉಪಯೋಗ ಇವನ್ನು ಸೇವಿಸುವುದರಿಂದ?
ನೆನಪಿನ ಶಕ್ತಿ ಕಡಿಮೆಯಾಗುವುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಸಮಸ್ಯೆ. ಅದರೆ ಬೆರ್ರಿ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.
ಬೆರಿ ಹಣ್ಣುಗಳಲ್ಲಿ ಅಧಿಕ ಪ್ರಮಾಣದ ಪೈಟೋನ್ಯೂಟ್ರಿಯೆಂಟ್ಗಳಿವೆ. ದಿನನಿತ್ಯದ ಆಹಾರದಲ್ಲಿ ಬ್ಲೂ ಬೆರ್ರಿ ಅಥವಾ ಸ್ಟ್ರಾಬೆರಿ ಹಣ್ಣು ಸೇವಿಸಿದರೆ ಹೃದಯಾಘಾತ ತಡೆಯಬಹುದು.
ಬೆರ್ರಿ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿರುತ್ತವೆ. ಇವುಗಳನ್ನು ಸೇವಿಸಿದರೆ ಗರ್ಭಿಣಿಯರು ಆರೋಗ್ಯದಿಂದ ಇರಲು ಸಹಾಯವಾಗುತ್ತದೆ.
ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿರುವ ಬ್ಲ್ಯೂಬೆರ್ರಿ ಚರ್ಮದ ರಕ್ಷಣೆಗೆ ಸಹಕಾರಿ. ಈ ಹಣ್ಣಿನ ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ಚರ್ಮ ಕಪ್ಪಗಾಗುವುದು ಮತ್ತು ಕಲೆಗಳು ಉಂಟಾಗುವುದನ್ನು ನಿವಾರಿಸುತ್ತದೆ. ಜೊತೆಗೆ ದೇಹದಲ್ಲಿರುವ ಬೇಡದ ಜೀವಕೋಶಗಳನ್ನು ಹೊರ ಹಾಕುತ್ತದೆ.
ಕ್ಯಾನ್ಸರ್‌ನಿಂದ ದೂರವಿರಲು ಬೆರ್ರಿ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.
ಆ್ಯಂಟಿ ಆಕ್ಸಿಡೆಂಟ್ ಗುಣವಿರುವ ಬೆರ್ರಿ ಹಣ್ಣುಗಳ ಸೇವನೆಯಿಂದ ಜೀರ್ಣ ಕ್ರಿಯೆ ವೃದ್ಧಿಯಾಗುವುದರ ಜತೆ, ಸಮತೋಲನ ತೂಕ ಕಾಪಾಡಲು ಇದು ಸಹಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.