Secret: 13 ರಿಂದ 19ರ 'ಟೀನ್ ಏಜ್' ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡ್ತಾರೆ?

Published : Oct 25, 2025, 02:45 PM IST
Teen Age Girls

ಸಾರಾಂಶ

ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ಕುರಿತು ಪ್ರಸ್ತುತಪಡಿಸಿದ ವರದಿಯು ಟೀನ್ ಏಜ್ ಹುಡಿಗಿಯರ ಇಂಟರ್ನೆಟ್ ಬಳಕೆಯ ಕುರಿತು ಹಲವು ಕುತೂಹಲಕಾರಿ ವಿಷಯಗಳನ್ನು ಬೆಳಕಿಗೆ ತಂದಿದೆ. ವರದಿಯ ಪ್ರಕಾರ, ದೇಶದಲ್ಲಿರುವ ಯುವ ಪೀಳಿಗೆಯ ಹುಡುಗಿಯರು ಡಿಜಿಟಲ್ ಲೋಕದಲ್ಲಿ ಸಕ್ರಿಯವಾಗಿದ್ದಾರೆ. ಮುಂದೆ ನೋಡಿ..

ಟೀನ್ ಏಜ್ ಹುಡುಗಿಯರು ಗೂಗಲ್‌ನಲ್ಲಿ ಏನು ಸರ್ಚ್ ಮಾಡ್ತಾರೆ?

ಇಂದಿನ ಆಧುನಿಕ ಹಾಗೂ ಇಂಟರ್ನೆಟ್ ಯುಗದಲ್ಲಿ, ಝೆನ್ ಜಿ ಕಾಲದಲ್ಲಿ ಮಹಿಳೆಯರು, ಅದರಲ್ಲೂ ಮುಖ್ಯವಾಗಿ ಟೀನ್ ಏಜ್ (ಹದಿಹರೆಯ) ಹುಡುಗಿಯರು ಆನ್‌ಲೈನ್ ಸರ್ಚ್‌ನಲ್ಲಿ ಏನನ್ನು ಹುಡುಕುತ್ತಾರೆ? ಹದಿಹರೆಯದ (Teen Age) ಹುಡುಗಿಯರು ಗೂಗಲ್ ಹುಡುಕಾಟದಲ್ಲಿ ಮುಖ್ಯವಾಗಿ ಸರ್ಚ್ ಮಾಡೋದು ಏನು? ಈ ಬಗ್ಗೆ ಹೆಚ್ಚಾಗಿ ಟೀನ್ ಏಜ್ ಹುಡುಗರು ತಲೆ ಕೆಡಿಸಿಕೊಳ್ಳುತ್ತಾರೆ. ಹದಿಹರೆಯದ ಹುಡುಗರು ಮಾತ್ರವಲ್ಲ, ಸಮಾಜದಲ್ಲಿ ಬಹಳಷ್ಟು ಜನರು ಈ ಬಗ್ಗೆ ಯೋಚಿಸುತ್ತಾರೆ, ತಮಗೆ ಅನ್ನಿಸಿದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ, ಹರಡುತ್ತಾರೆ.

ಟೀನ್ ಏಜ್ ಗರ್ಲ್ಸ್ ನಡವಳಿಕೆಗಳು ಮತ್ತು ಹುಡುಕಾಟದ ವಿಷಯಗಳು ಸಮಾಜದ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತವೆ. ಇತ್ತೀಚಿನ ವರದಿಯೊಂದು ಭಾರತೀಯ ಮಹಿಳೆಯರ, ಅದರಲ್ಲೂ ಹದಿಹೆಯದ ಹುಡುಗಿಯರ ಇಂಟರ್ನೆಟ್ ಬಳಕೆಯ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದೆ.

ದೇಶದಲ್ಲಿ ಒಟ್ಟು 15 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಅವರಲ್ಲಿ ಸುಮಾರು 6 ಕೋಟಿ ಮಹಿಳೆಯರು, ಅದರಲ್ಲೂ ಸುಮಾರು 2 ಕೋಟಿಯಷ್ಟು ಹದಿಹರೆಯದ ಹುಡುಗಿಯರು ಈಗ ಸಕ್ರಿಯವಾಗಿ ಆನ್‌ಲೈನ್‌ನಲ್ಲಿದ್ದಾರೆ. ಈ ಮಹಿಳೆಯರು ತಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಲು ಇಂಟರ್ನೆಟ್ ಅನ್ನು ಒಂದು ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ. ಆದರೆ, ಅವರು ಅಂತರ್ಜಾಲದಲ್ಲಿ ಏನನ್ನು ಹುಡುಕುತ್ತಾರೆ? ಇಂಟರೆಸ್ಟಿಂಗ್ ಫಾಕ್ಸ್ ಇಲ್ಲಿದೆ ನೋಡಿ..

ಕುತೂಹಲಕಾರಿ ವರದಿ!

ಗೂಗಲ್ ತನ್ನ ಹುಡುಕಾಟ ಫಲಿತಾಂಶಗಳ ಕುರಿತು ಪ್ರಸ್ತುತಪಡಿಸಿದ ವರದಿಯು ಟೀನ್ ಏಜ್ ಹುಡುಗಿಯರು ಇಂಟರ್ನೆಟ್ ಬಳಕೆಯ ಕುರಿತು ಹಲವು ಕುತೂಹಲಕಾರಿ ವಿಷಯಗಳನ್ನು ಬೆಳಕಿಗೆ ತಂದಿದೆ. ವರದಿಯ ಪ್ರಕಾರ, ದೇಶದಲ್ಲಿರುವ ಯುವ ಪೀಳಿಗೆಯ ಹುಡುಗಿಯರು ಡಿಜಿಟಲ್ ಲೋಕದಲ್ಲಿ ಸಕ್ರಿಯವಾಗಿದ್ದಾರೆ. ಅವರು ಹಲವು ಸಂಗತಿಗಳ ಬಗ್ಗೆ ಸರ್ಚ್ ಮಾಡುತ್ತಾರೆ. ಅದು ಹೀಗಿದೆ..

ಹುಡುಗಿಯರು ಗೂಗಲ್‌ನಲ್ಲಿ ಏನೆಲ್ಲಾ ಹುಡುಕುತ್ತಾರೆ ಎಂಬುದು ನಿಜಕ್ಕೂ ಆಸಕ್ತಿದಾಯಕ ಸಂಗತಿ. ಅನೇಕ ಹುಡುಗಿಯರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಆರೋಗ್ಯ ಸಲಹೆಗಳು, ಬ್ಯೂಟಿ ಟಿಪ್ಸ್, ಫ್ಯಾಷನ್ ಟ್ರೆಂಡ್‌ಗಳು, ಉದ್ಯೋಗಾವಕಾಶಗಳು, ಶಿಕ್ಷಣ ಮಾಹಿತಿ, ಅಲ್ಲದೆ, ಸಮಾಜದಲ್ಲಿನ ಪ್ರಸ್ತುತ ವಿದ್ಯಮಾನಗಳು, ಕಲೆ, ಸಾಹಿತ್ಯ ಮತ್ತು ಮನರಂಜನೆಯ ವಿಷಯಗಳ ಬಗ್ಗೆಯೂ ಅವರು ಮಾಹಿತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಇನ್ನೂ ಕೆಲವು ಸಂಗತಿಗಳು ಇವೆ..

ಸೂಕ್ಷ್ಮ ಸಂಗತಿಗಳು?

ಹೌದು, ಇಂಥ ಮಾಹಿತಿಗಳ ಹೊರತಾಗಿಯೂ ಕೆಲವು ಸೂಕ್ಷ್ಮ ವಿಷಯಗಳು ಅಥವಾ ವೈಯಕ್ತಿಕ ಸಮಸ್ಯೆಗಳ ಕುರಿತು ಅವರು ಖಾಸಗಿಯಾಗಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹುಡುಕಿ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ಈ ಟೀನ್ ಏಜ್ ಹುಡುಗಿಯರು ತಮ್ಮ ತೀರಾ ಖಾಸಗಿಯಾದ ಸಂಗತಿಗಳನ್ನು ಕೂಡ ಮೊಬೈಲ್ ಇಂಟರ್ನೆಟ್ ಮೂಲಕ ಹುಡುಕುತ್ತಾರೆ. ಜೊತೆಗೆ, ಇನ್ನೂ ಕೆಲವು ಹೇಳಲಾಗದ, ಹೇಳಬಾರದ ಸಂಗತಿಗಳನ್ನೂ ಅವರು ಸರ್ಚ್ ಮಾಡುತ್ತಾರೆ. ಅದನ್ನೆಲ್ಲಾ ಹೇಳಲಾಗದು.. ಹೇಳದೆಯೂ ಏನೇನೋ ಅಪಾರ್ಥ ಮಾಡಿಕೊಳ್ಳಬೇಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ