
ಸಣ್ಣ ಆಗಬೇಕು ಎಂದರೆ ಊಟ ಬಿಡಬೇಕು, ಜಿಮ್‌ಗೆ ಹೋಗಬೇಕು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಅದು ತಪ್ಪು. ಮನೆಯಲ್ಲಿರುವ ಆಹಾರವನ್ನು ಬಳಸಿ ವಾಕಿಂಗ್ ಮಾಡಿ, ಸಣ್ಣಗಾಗಿದ್ದು ಹೇಗೆ ಎಂದು ಶ್ರೀಶೈಲ ಮುಗದಂ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಬರೊಬ್ಬರಿ ಒಂದು ಕ್ವಿಂಟಾಲ್ ಅಂದರೆ 98kg ಇದ್ದ ನಾನು ಈಗ 84kg. ಸುಮಾರು 85 ದಿನಗಳ ಕಠಿಣ ಪರಿಶ್ರಮದಿಂದ 14kg ತೂಕ ಕಳೆದುಕೊಂಡೆ. ಆವತ್ತು ಜುಲೈ 26 ರಂದು ಊರಿಗೆ ಹೋಗಿ ಬಂದಿದ್ದೆ, ಸಿಕ್ಕಾಪಟ್ಟೆ ಬಳಲಿಕೆ. ನನ್ನ ದೇಹ ನನ್ನ ಕೈತಪ್ಪಿ ಹೋಗಿತ್ತು. ನನ್ನೊಂದಿಗೆ ಸಹಕರಿಸಲು ಕೆಟ್ಟ ವಿರೋಧ. ಅದಕ್ಕಾಗಿ ಡಜನ್ನುಗಟ್ಟಲೇ ಅವಮಾನ ಅನುಭವಿಸಿ ಆಗಿತ್ತು. ಆ ರಾತ್ರಿ ಡಿಸೈಡ್ ಮಾಡಿ ಬಿಟ್ಟಿದ್ದೆ ನಾಳೆಯಿಂದ ನನ್ನ weight lose journy ಶುರು ಮಾಡಲೇ ಬೇಕು. ಅದಕ್ಕೆ ಮೊದಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆ ಕೂಡ. ಹುಂಬು ದೈರ್ಯ ಮಾಡಿ 27 ಜುಲೈ ಬೆಳ್ಳಂಬೆಳಗ್ಗೆ 4-45ಕ್ಕೆ ಎದ್ದವ ಯಾವ ಯಾವ ನಿಯಮ ಪಾಲಿಸಬೇಕಿತ್ತೋ ಅದನ್ನು ಭೀಷ್ಮ ಪ್ರತಿಜ್ಞೆ ಎಂಬಂತೆ ಪಾಲಿಸಲೇ ಬೇಕು ಅಂತ ನಿರ್ಧರಿಸಿ ಶುರು ಮಾಡಿದವ ಇಲ್ಲಿಗೆ ಬಂದು ನಿಂತಿದ್ದೇನೆ. ಇನ್ನು ಸಾಗುವ ದಾರಿ ತುಂಬಾ ದೂರ ಇದೆ.
ಇದಕ್ಕೆ ತುಂಬಾ ಇಚ್ಛಾಶಕ್ತಿ ಬೇಕು. ಯಾವುದೇ ಕಾರಣಕ್ಕೂ ಈ ದಾರಿ ಬಿಟ್ಟು ಕನಲಬಾರದು. ಯಾವುದೋ ಕಾರಣಕ್ಕೆ ದಾರಿ ಸ್ವಲ್ಪ ಪಕ್ಕಕ್ಕೆ ಸರಿದರೂ ಗಟ್ಟಿ ಧೈರ್ಯ ಮಾಡಿ ವಾಪಾಸು ಮತ್ತೆ ಅದೇ ದಾರಿಯಲ್ಲಿ ನಡೆದಾಗ ಮಾತ್ರ ಗುರಿ ತಲುಪಲು ಸಾಧ್ಯ. ಇದನ್ನು ನಾವು ಮಾತ್ರ ಮಾಡಲು ಸಾಧ್ಯ. Push yourself because no one else is going to do it for you
ಈ ದಾರಿಯಲ್ಲಿ ನಾನು ಕೆಲವೊಂದು ಕಡ್ಡಾಯ ನಿಯಮಗಳನ್ನು ಹಾಕಿಕೊಂಡಿದ್ದೆ, ಯಾವುದೇ ಕಾರಣಕ್ಕೂ ಆ ನಿಯಮಗಳನ್ನು ಮುರಿಯಬಾರದು ಅಂತ. ಕೆಲವು ತೀರಾ ಅನಿವಾರ್ಯ ಬಿಟ್ಟರೆ ಈ 85 ದಿನದಲ್ಲಿ ಅದನ್ನು ಯಾವತ್ತೂ ಮುರಿದಿಲ್ಲ.
* ಸಕ್ಕರೆ- ಬೆಲ್ಲ ತಿನ್ನಬಾರದು ಅಂತ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಯಾವುದೇ ರೀತಿಯಿಂದ ಕೂಡ ಇದನ್ನು ತಿನ್ನಲೇ ಬಾರದು ಅಂತ. 3-4 ಸಲ ತೀರಾ ಅನಿವಾರ್ಯವಾಗಿ ಅತೀ ಕಡಿಮೆ ಪ್ರಮಾಣದಲ್ಲಿ ತಿಂದಿದಿನಿ ಬಿಟ್ಟರೆ ಮತ್ತೆ ಯಾವತ್ತೂ ತಿಂದಿಲ್ಲ. ಮತ್ತೆ ಸಿಹಿ ತಿನ್ನಬೇಕು ಅನ್ನಿಸಿದರೆ ಏನು ಮಾಡ್ತಿದ್ರಿ ಅಂತ ನೀವು ಕೇಳಬಹುದು. ಆಗ ನನ್ನ ಆಯ್ಕೆ ಸೇಬು, ಪೇರಲೆ ಮತ್ತು ಪಪ್ಪಾಯಿ ಹಣ್ಣು.
* ಬೇಕರಿ/ಮೈದಾ ಐಟಮ್ ಕಣ್ಣೆತ್ತಿಯೂ ಸಹ ನೋಡಲ್ಲ ಅಂತ ಇನ್ನೊಂದು ಪ್ರತಿಜ್ಞೆ. ಇದನ್ನು ಪಾಲಿಸುವುದು ತುಂಬಾ ಸುಲಭವಾಯಿತು. 85 ದಿನದಲ್ಲಿ ಎರಡು ಸಾರಿ ಸಿಂಗಲ್ ಪೂರಿ ತಿಂದಿದ್ದು ಬಿಟ್ಟರೆ ಆರಾಮಾಗಿ ಇದನ್ನು ಪಾಲಿಸಿಕೊಂಡು ಬಂದೆ.
ಮಾಡಲೇ ಬೇಕು ಅಂತ ಪಾಲಿಸಿದ ನಿಯಮಗಳು.
* ಬೆಳಿಗ್ಗೆ ಎದ್ದ ತಕ್ಷಣ ಒಂದು ದೊಡ್ಡ ಗ್ಲಾಸ್ ಬಿಸಿನೀರು ಕುಡಿಯುವುದು. ಇದು ಹೊಟ್ಟೆ ಸ್ವಚ್ಛ ಮಾಡಲು ಮತ್ತು ಬೇಳಗಿನ ವಿಸರ್ಜನೆಗೆ ಕೂಡ ಸುಲಭವಾಯಿತು.
* ನೀರು ಕುಡಿದ ನಂತರ ಒಂದು ಸಣ್ಣ ಗ್ಲಾಸ್ ಬ್ಲ್ಯಾಕ್ ಕಾಫೀ. ನನಗೆ ಮೊದಲು ಪ್ಯಾಟಿ ಲಿವರ್ ಇತ್ತು weight lose ಮಾಡಬೇಕಾದರೆ ಇದನ್ನು ಕಡಿಮೆ ಮಾಡಲೇ ಬೇಕಾಗಿತ್ತು. ಇದನ್ನು ಪಾಲಿಸಿದ್ದರಿಂದ ನನ್ನ ಪ್ಯಾಟಿ ಲಿವರ್ ಕಡಿಮೆ ಆಯ್ತು, ಜೀರ್ಣಕ್ರಿಯೆಗೆ ಅನುಕೂಲ ಆಯ್ತು ಬೆಳಗಿನ ವ್ಯಾಯಾಮಕ್ಕೂ ಸಹಾಯವಾಯ್ತು.
* ದಿನಕ್ಕೆ ಕನಿಷ್ಠ 10km ನಡಿಗೆ. ದೇಹ ಗಟ್ಟಿಯಾಗಲು, ಬೊಜ್ಜು ಕರಗಿಸಲು ತುಂಬಾ ಸಹಾಯವಾಯಿತು. ವಾರಕ್ಕೆ 6 ದಿನವಾದರೂ ಕನಿಷ್ಠ 10km ಗರಿಷ್ಠ 18km ತನಕ ಸರಾಸರಿ 13km ವಾಕಿಂಗ್ ಮಾಡಿದೆ. ನಂತರ 20 ನಿಮಿಷ ವ್ಯಾಯಾಮ.
* ನಾಲ್ಕೈದು ತರಹದ ದ್ವಿದಳ ಧಾನ್ಯಗಳನ್ನು ರಾತ್ರಿ ನೆನಸಿ ಇಟ್ಟು ಬೆಳಿಗ್ಗೆ ಎದ್ದು ಕುದಿಸಿ ತಿಂತಿದ್ದೆ. ಹಾಗೆ ತಿಂದರೆ ಗ್ಯಾಸ್ ಆಗಿದ್ದರಿಂದ ಕುದಿಸಿ ತಿಂದದ್ದು ಅನುಕೂಲ ಆಯ್ತು. (alternate day ಇದರೊಂದಿಗೆ 2 boiled egg).
* ಮದ್ಯಾಹ್ನ 2 ಚಪಾತಿ/ರೊಟ್ಟಿ, 2type ಪಲ್ಯ, ಸ್ವಲ್ಪ ಅನ್ನ ಸಾರು.
* ರಾತ್ರಿ ನಾನೇ ಮನೆಯಲ್ಲಿ ತಯಾರಿಸಿದ ಪ್ರೊಟೀನ್ ಪೌಡರ್ ಒಂದು ಗ್ಲಾಸ್ ಹಾಲಿನೊಂದಿಗೆ ತಗೊತಿದ್ದೆ ಜೊತೆಗೆ ಯಾವುದಾದರೂ ಒಂದು ಹಣ್ಣು ತಿಂತಿದ್ದೆ.
* ಮದ್ಯ ಹಸಿವಾದರೆ ಒಂದು ಗ್ಲಾಸ್ ಯಾವುದಾದರೂ ಹಣ್ಣಿನ ಜ್ಯೂಸ್ (without sugar) ಅಥವಾ ಯಾವುದಾದರೂ ಒಂದು ಹಣ್ಣು ಅಥವಾ ಮಜ್ಜಿಗೆ ಅಥವಾ ಸಕ್ಕರೆ ಇಲ್ಲದ ಚಹಾ.
ಈ ಮಧ್ಯೆ ತೀರಾ ಹಸಿವು ಅನ್ನಿಸಿದೆ ಇಡ್ಲಿ ಸಾಂಬಾರ್ ತಿಂತಿದ್ದೆ.
ಈ ಮೇಲೆ ತಿಳಿಸಿದ ಅಷ್ಟೂ ಅಂಶಗಳು ನನ್ನ ದಿನಚರಿ. ಹಾಗೆಯೇ ಪಾಲಿಸಿಕೊಂಡು ಬಂದಿದ್ದಿನಿ. ಇನ್ನೂ ಸ್ವಲ್ಪ ದಿನ ಇದೇ routine ಪಾಲಿಸಿಕೊಂಡು ಹೋಗಬೇಕು ಅಂತ ಮಾಡಿದ್ದಿನಿ.
ಇದಕ್ಕಾಗಿ ಬೇರೆ ಏನೂ ಖರ್ಚು ಮಾಡಿಲ್ಲ, ಯಾವುದೇ supplements ತಗೊಂಡಿಲ್ಲ, dedication ಅಂದರೆ ನನ್ನನ್ನು ನಾನು ಸಮರ್ಪಣೆ ಮಾಡಿಕೊಂಡಿದ್ದೆ, ಈಗಲೂ ಇದರಿಂದ ಒಂದು ಸಣ್ಣ ಹೆಜ್ಜೆ ಕೂಡ ಹಿಂದೆ ಸರಿದಿಲ್ಲ.
ಈಗ ಎಷ್ಟು ಖುಷಿಯಾಗಿದ್ದಿನಿ ಅಂದರೆ ಗಾಳಿಯಲ್ಲಿ ಹಾರಾಡಿದ ಅನುಭವ. ಇದಕ್ಕೆ ಕೆರವೊಬ್ಬರ ಸಲಹೆ ಸಹಕಾರ ಇದೆ. ಎಲ್ಲಾರಿಗೂ ಋಣಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.