40 ನಿಮಿಷ ವಾಕ್ ಮಾಡಿ, ಕ್ಯಾನ್ಸರ್, ಹೃದ್ರೋಗ ದೂರವಿಡಿ

 |  First Published Jul 16, 2018, 4:31 PM IST

ನಡೆಯೋದರಿಂದ ಹಲವಾರು ಲಾಭ ಇದೆ. ಇದರಿಂದ ಅರೋಗ್ಯ ಚೆನ್ನಾಗಿರತ್ತೆ ಎಂದು ತಿಳಿದ ಕೂಡಲೇ ಕೆಲವರು ಮಾರ್ನಿಂಗ್ ವಾಕ್ ಮಾಡಲು ಆರಂಭಿಸುತ್ತಾರೆ, ಇನ್ನು ಕೆಲವರು ಜಿಮ್‌ಗೆ ಜಾಯಿನ್ ಆಗುತ್ತಾರೆ. ಆದರೆ ಎಷ್ಟು ದಿನ ಜಾಸ್ತಿ ಎಂದರೆ 5 ತಿಂಗಳು. ಅದರ ನಂತರ ಮತ್ತೆ ಹಳೆ ಜೀವನ ಆರಂಭವಾಗುತ್ತದೆ. ಆದರೆ ನಡೆಯೋದನ್ನು ಮುಂದುವರಿಸಿದರೆ ಕ್ಯಾನ್ಸರ್, ಹೃದಯ ಸಮಸ್ಯೆ ದೂರವಾಗುತ್ತದೆ. ವಾಕಿಂಗ್‌ನಿಂದೇನು ಲಾಭ?


ನಮ್ಮನ್ನು ನಾವು ಫಿಟ್ ಆಗಿಡಲು ಸಾಕಷ್ಟು ದಾರಿಗಳಿವೆ. ಯೋಗ, ಧ್ಯಾನ, ಜಿಮ್...ಹೀಗೆ. ಆದರೆ, ಸುಲಭವಾಗಿ ಮಾಡುವಂಥದ್ದು ವಾಕಿಂಗ್. ಇದಕ್ಕೆ ಮನಸ್ಸು ಮಾಡಬೇಕಷ್ಟೆ. ಅಷ್ಟಕ್ಕೂ ಈ ವಾಕಿಂಗ್ ಮಾಡೋದ್ರಿಂದೇನು ಲಾಭ?

  • ನಾವು ನಡೆದಾಡಿದಾಗ ಮಾಂಸ ಖಂಡಗಳು ಹಾಗು ಜೀವಕೋಶಗಳ ಚಾಲನೆ ಹೆಚ್ಚಾಗುತ್ತದೆ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ. ಇದರಿಂದ ಟಾಕ್ಸಿನ್ ಬೆವರಿನ ರೂಪದಲ್ಲಿ ಹೊರಹೋಗುತ್ತದೆ. 
  • ಪ್ರತಿದಿನ ನಡೆಯುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತವೆ. ದೇಹದಲ್ಲಿ ಸಂತೋಷ ನೀಡುವಂಥ ಹಾರ್ಮೋನ್‌ಗಳಾದ ಸೈರೆಟೋನಿನ್ ಸ್ರಾವ ಹೆಚ್ಚುತ್ತದೆ. ಇದರಿಂದ ಸುಸ್ತು ದೂರವಾಗುತ್ತದೆ. ಚಿಂತೆಯಿಂದ ದೂರ ಇರಲು ಸಹಾಯವಾಗುತ್ತದೆ. 
  • 2-3 ಕಿ.ಮೀ ನಡೆದರೆ ಅಥವಾ ವರ್ಕ್‌ಔಟ್ ಮಾಡಿದರೂ  ದೇಹ ಪೂರ್ಣವಾಗಿ ಚಲನಶೀಲವಾಗುತ್ತದೆ. ಇದರಿಂದ ಮಲಬದ್ಧತೆ, ಆ್ಯಸಿಡಿಟಿ ಮೊದಲಾದ ಸಮಸ್ಯೆಗಳು ದೂರವಾಗುತ್ತವೆ. 
  • ನಡೆಯುವುದರಿಂದ ಸುಸ್ತಾಗುತ್ತದೆ. ಸುಸ್ತಾದರೆ ಬೇಗ ನಿದ್ರೆ ಬರುತ್ತದೆ. ನಡೆಯುವುದರಿಂದ ನಿದ್ರಾ ರೋಗವುಳ್ಳವರ ಸಮಸ್ಯೆ ಶೇ.55ರಷ್ಟು ಕಡಿಮೆಯಾಗುತ್ತದೆ. 
  • ಪ್ರತಿದಿನ ಬೆಳಗ್ಗೆ ರಾತ್ರಿ ವಾಕ್ ಮಾಡುವುದರಿಂದ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಟಾಕ್ಸಿನ್ ಹೊರಗೆ ಬರುತ್ತದೆ ಹಾಗೂ ಮೆದುಳಿನಲ್ಲಿ ಆಮ್ಲಜನಕದ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಹೃದಯ, ಕಿಡ್ನಿ, ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುತ್ತದೆ. 

https://kannada.asianetnews.com/life/amazing-benefits-of-walking-p92z9k

Tap to resize

Latest Videos

 

click me!