ಸ್ಕಿನ್ ಗ್ಲೋ ಆಗಲು ಇಲ್ಲಿವೆ ಸಿಂಪಲ್ ಮನೆ ಮದ್ದು

 |  First Published Jul 11, 2018, 6:11 PM IST

ಫಳ ಫಳ ಹೊಳೆಯೋ ತ್ವಚೆ ಎಂದರೆ ಯಾರಿಗೆ ತಾನೇ ಬೇಡ ಹೇಳಿ? ಆದರೆ, ಅಂಥ ತ್ವಚೆ ಪಡೆಯಲು ಆಗಾಗ ಬ್ಯೂಟಿ ಪಾರ್ಲರ್‌ಗೆ ಹೋಗೋ ಅಗತ್ಯವಿದೆ ಎಂದೇ ಜನರು ಭಾವಿಸುತ್ತಾರೆ. ಮನೆಯಲ್ಲಿಯೇ ಸಿಗೋ ವಸ್ತುಗಳಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲಿವೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಿಂಪಲ್ ಮನೆ ಮದ್ದು.


ಹೆಣ್ಣು ಎಂದ ಮೇಲೆ ಆಕೆ ತನ್ನ ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾಳೆ. ಸೌಂದರ್ಯಕ್ಕೆ ಸಂಬಂಧಿ ಸಮಸ್ಯೆ ಬಗ್ಗೆ ಹೆಚ್ಚು ಚಿಂತಿಸಬೇಡಿ, ಈ ಟಿಪ್ಸ್‌ನಿಂದ ಪರಿಹಾರ
ಕಂಡುಕೊಳ್ಳಿ.

- ಸುಂದರ ತ್ವಚೆ ನಿಮ್ಮದಾಗಲು ಹಾಲು ಮತ್ತು ಟೊಮ್ಯಾಟೊ ರಸವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತಣ್ಣೀರಿನಿಂದ ಮುಖ
ತೊಳೆಯಿರಿ. ಒಂದು ವಾರ ಹೀಗೆ ಮಾಡಿದರೆ ಸುಂದರವಾದ ತ್ವಚೆ ನಿಮ್ಮದಾಗುತ್ತದೆ. 
- ಆಯ್ಲಿ ಸ್ಕಿನ್ ಬೇಡವೆಂದರೆ ಮೂರು ಚಮಚ ಆ್ಯಪಲ್ ತಿರುಳಿಗೆ ಜೇನುತುಪ್ಪ ಬೆರೆಸಿ. ಇದನ್ನು ಮುಖಕ್ಕೆ ಲೇಪಿಸಿಕೊಂಡು 20 ನಿಮಿಷದ ನಂತರ ಮುಖ
ತೊಳೆದುಕೊಳ್ಳಿ.ಇದರಿಂದ ಆಯ್ಲಿ ಸ್ಕಿನ್ ನಿವಾರಣೆಯಾಗುತ್ತದೆ.  

Tap to resize

Latest Videos

"
- ಬ್ಲ್ಯಾಕೆಡ್ಸ್ ನಿವಾರಿಸಲು ಮೊಟ್ಟೆ ಬಿಳಿ ಭಾಗ ಮತ್ತು ನಿಂಬೆ ರಸ ಬೆರೆಸಿ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಮುಖ ತೊಳೆದುಕೊಂಡರೆ ಕ್ರಮೇಣ ಈ ಸಮಸ್ಯೆ
ನಿವಾರಣೆಯಾಗುತ್ತದೆ. 
- ಪಿಂಪಲ್‌‌ ನಿವಾರಿಸಲು ದಾಲ್ಚಿನ್ನಿ ಪುಡಿಗೆ ಜೇನು ತುಪ್ಪ ಸೇರಿಸಿ ಪಿಂಪಲ್‌ ಮೇಲೆ ಹಚ್ಚಿ. 25 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಇದರಿಂದ ಪಿಂಪಲ್‌
ನಿವಾರಣೆಯಾಗುತ್ತದೆ. 
- ಕಲೆರಹಿತ ತ್ವಚೆಗೆ ಮೊಸರು ಮತ್ತು ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಚರ್ಮದ ಮೇಲಿನ
ಕಲೆಗಳು ನಿವಾರಣೆಯಾಗಿ ಚರ್ಮ ಸುಂದರವಾಗುತ್ತದೆ. 
- ಹೆಲ್ತಿ ಸ್ಕಿನ್‌ಗಾಗಿ ಕೊಬ್ಬರಿ ಎಣ್ಣೆ ಮತ್ತು ಅರಿಶಿನ ಪುಡಿ ಮುಖಕ್ಕೆ ಹಚ್ಚಿ. ಇದನ್ನು ನೀವು ಪ್ರತಿ ದಿನ ಮಾಡಿದರೆ ಆರೋಗ್ಯಯುತ ಚರ್ಮ ನಿಮ್ಮದಾಗುತ್ತದೆ. 

ಮುಖದ ಸೌಂದರ್ಯಕ್ಕೆ ಇಲ್ಲಿವೆ ಸಿಂಪಲ್ ಟಿಪ್ಸ್
ಕಾಸ್ಟ್ಲಿ ಕ್ರೀಂ ಬದಲು ಇದನ್ನು ಟ್ರೈ ಮಾಡಿ
ಪಿಂಪಲ್‌ಗೆ ಇಲ್ಲಿದೆ ಮನೆ ಮದ್ದು
ಬೇಸಿಗೆಯಲ್ಲಿ ಚರ್ಮದ ರಕ್ಷಣೆ ಹೇಗೆ?
ಸುಂದರ, ಹೊಳೆಯೋ ವದನ ನಿಮ್ಮದಾಗಬೇಕೇ?

click me!