ಯಾವುದೇ ಪೂಜೆ ಪುನಸ್ಕಾರವಿದ್ದರೂ ಊದಿನ ಕಡ್ಡಿ ಹಚ್ಚುವುದು ಸಹಜ. ರಾಸಾಯನಿಕ ಬಳಸಿ ತಯಾರಿಸುವ ಈ ಊದಿನಕಡ್ಡಿ ಹೊಗೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವ ರೀತಿಯ ಪರಿಣಾಮ ಬೀರಬಹುದು?
ಮಾರುಕಟ್ಟೆಯಲ್ಲಿ ಸಿಗುವ ಕಮ್ಮಿ ಬೆಲೆಯ ಅಗರಬತ್ತಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ಅಗರಬತ್ತಿಗಳನ್ನು ಕೇವಲ ಬೆರಣಿ ಹಾಗೂ ನೈಸರ್ಗಿಕ ಪದಾರ್ಥಗಳನ್ನು ಬಳಸಿಯೇ ತಯಾರಿಸಲಾಗುತ್ತದೆ. ಇಂಥ ಅಗರಬತ್ತಿ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆದರೆ, ಕೆಮಿಕಲ್ ಇರೋ ಊದಿನಕಡ್ಡಿ ಬಳಸಿದರೆ ಏನಾಗುತ್ತದೆ ಗೊತ್ತಾ?
ಮೂತ್ರಪಿಂಡದ ಮೇಲಿನ ಒತ್ತಡ ಹೆಚ್ಚುತ್ತದೆ. ದೇಹಕ್ಕೆ ಸೇರಿದ ವಿಷಕಾರಿ ಅಂಶ ಹೊರಹಾಕುವುದು ಮೂತ್ರದ ಮೂಲಕ ಹೊರ ಹೋಗುತ್ತದೆ. ಇದರಿಂದ ಕಿಡ್ನಿ ಹಾಳಾಗುವ ಸಾಧ್ಯತೆಯೂ ಇದೆ.
ತೆಳು ಚರ್ಮದ ಮೇಲೆ ಊದಿನ ಕಡ್ಡಿ ಹೊಗೆ ಅಲರ್ಜಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಮಕ್ಕಳು ಹಾಗೂ ವೃದ್ಧರ ಚರ್ಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.
ಅಗರಬತ್ತಿಯಲ್ಲಿ ಮೆಗ್ನಿಷಿಯಂ ಹಾಗೂ ಕಬ್ಬಿಣಾಂಶವಿದ್ದರೆ ಕಣ್ಣುರಿ ತರಿಸುತ್ತದೆ.
ನರಕ್ಕೆ ಸಂಬಂಧಿಸಿದ ಕಾಯಿಲೆಯೂ ಕಾಡುವ ಸಾಧ್ಯತೆ ಹೆಚ್ಚು. ಇದರಿಂದ ಮೆದುಳಿನ ಮೇಲೂ ಹಾನಿಯನ್ನುಂಟು ಮಾಡುತ್ತದೆ.
ಇನ್ನು ಕೆಮ್ಮು, ಶೀತದಂಥ ಸಮಸ್ಯೆ ಬಹುತೇಕರನ್ನು ಕಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.