
ಕ್ಯಾಲಿಫೋರ್ನಿಯಾ(ಮಾ.08): ನಿಮಗೂ ಬೈಕ್ ಸ್ಟಂಟ್ ನೋಡುವ ಕ್ರೇಜ್ ನಿಮ್ಮಲ್ಲೂ ಇದೆಯಾ? ಹಾಗಾದ್ರೆ ಕ್ಯಾಲಿಫೋರ್ನಿಯಾದಲ್ಲಿ ಶೂಟ್ ಮಾಡಿರುವ ಈ ವಿಡಿಯೋ ನಿಮ್ಮನ್ನು ರೋಮಾಂಚನಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಾಮಾಜಿಕ ಜಾಲಾತಾಣಗಳಲ್ಲೊಂದಾದ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡುಗರ ಎದೆ ಝಲ್ ಎನಿಸುತ್ತದೆ. ಅಲ್ಲದೇ ಈ ಸ್ಟಂಟ್ ಮಾಡಲು ಬೈಕ್ ಸವಾರ ಅದೆಷ್ಟು ತೊಂದರೆ ಎದುರಿಸಿದ್ದಾನೆಂದು ಅಂದಾಜು ಮಾಡಬಹುದಾಗಿದೆ. ಆದರೆ ಈ ವಿಡಿಯೋ ನೋಡಿದ ಕ್ಯಾಲಿಫೋರ್ನಿಯಾದ ಸಾರಿಗೆ ಅಧಿಕಾರಿಗಳು ಮಾತ್ರ ಸವಾರ ಸಾಗಿದ ರಸ್ತೆಯನ್ನು ಬಂದ್ ಮಾಡಿದ್ದಾರೆ.
ರೋಮಾಂಚನಗೊಳಿಸುವ ಈ ವಿಡಿಯೋವನ್ನು 24ರ ಹರೆಯದ ಕಾಯಿಲ್ ಕಾಟ್ಸಾಂಡ್ರಿಸ್ ಎಂಬಾತ ತನ್ನ ಇನ್ಸ್ಟಾಗ್ರಾಂ ಅಕೌಂಡ್'ನಿಂದ ಶೇರ್ ಮಾಡಿದ್ದಾನೆ. ಈವರೆಗೂ ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.