ಎರಡನೇ ಬಾರಿ ಬಿಸಿ ಮಾಡಿದರೆ ಅಪಾಯಕ್ಕೆ ತಿರುಗುವ ಆಹಾರಗಳು ಯಾವುವು?

By Suvarna Web DeskFirst Published Mar 5, 2017, 3:12 PM IST
Highlights

ಕೋಳಿ ಮಾಂಸ ಮಿಕ್ಕಿ ಮಾರನೇ ದಿನ ತಿನ್ನಬೇಕಿದ್ದರೆ ಹಾಗೆಯೇ ತಣ್ಣಗಿದ್ದಾಗಲೇ ತಿಂದುಬಿಡಿ. ಬಿಸಿ ಮಾಡಲೇಬೇಕೆಂದಿದ್ದರೆ ಸಣ್ಣ ಉರಿಯಲ್ಲಿ ಹೆಚ್ಚು ಹೊತ್ತು ಬಿಸಿ ಆನಂತರ ತಿನ್ನಿರಿ.

ಅಡುಗೆ ಮಾಡಿ ಆಹಾರ ಮಿಗದ ಮನೆಗಳು ಬಹಳ ವಿರಳ. ತಂಗಲು ಆಹಾರವನ್ನ ಮತ್ತೊಮ್ಮೆ ಬಿಸಿ ಮಾಡಿಕೊಂಡು ತಿನ್ನುವ ಅಭ್ಯಾಸ ಬಹುತೇಕರಲ್ಲಿದೆ. ಕೆಲ ಮನೆಗಳಲ್ಲಿ ನಾಲ್ಕೈದು ದಿನಗಳ ಕಾಲ ಫ್ರಿಡ್ಜ್'ನಲ್ಲಿಟ್ಟುಕೊಂಡು, ಬಿಸಿ ಮಾಡಿಕೊಂಡು ತಿನ್ನುತ್ತಾರೆ. ಆದರೆ, ಕೆಲ ಆಹಾರಗಳ ವಿಚಾರದಲ್ಲಿ ನಾವು ಹುಷಾರಾಗಿರಬೇಕು. ಒಮ್ಮೆಗಿಂತ ಹೆಚ್ಚು ಬಾರಿ ಬಿಸಿ ಮಾಡಿದರೆ ವಿಷವಾಗಿ ಪರಿವರ್ತಿತವಾಗುವ ಆಹಾರಗಳ ಬಗ್ಗೆ ನಿಮಗೆ ತಿಳಿದಿರಲಿ. ಇಂತಹ ಸಾಮಾನ್ಯ ಆಹಾರಗಳ ಮಾಹಿತಿ ಈ ಕೆಳಕಂಡಂತಿದೆ.

1) ಆಲೂಗಡ್ಡೆ:
ಇವು ಆರೋಗ್ಯಕ್ಕೆ ಲಾಭಕರ. ಆದರೆ, ಇವತ್ತು ನೀವು ಆಲೂಗಡ್ಡೆ ಬೇಯಿಸಿ ನಾಳೆ ಅದನ್ನು ಮತ್ತೆ ಬಿಸಿ ಮಾಡಿ ತಿಂದರೆ ಆರೋಗ್ಯಕ್ಕೆ ಲಾಭ ಬರುವುದಿರಲಿ, ಕಾಯಿಲೆ ಬರದಿದ್ದರೆ ನಿಮ್ಮ ಪುಣ್ಯ.

2) ಅನ್ನ:
ಅಕ್ಕಿಯಲ್ಲಿ ಮೊದಲೇ ಬ್ಯಾಕ್ಟೀರಿಯಾಗಳಿರುತ್ತವೆ. ಅಕ್ಕಿ ಬೇಯಿಸಿ ಅನ್ನ ಮಾಡಿದಾಗಲೂ ಕೆಲ ಬ್ಯಾಕ್ಟೀರಿಯಾಗಳು ಉಳಿದುಬಿಡುತ್ತವೆ. ಅನ್ನವನ್ನು ಹಾಗೇ ಇಡಲು ಬಿಟ್ಟರೆ ಈ ಬ್ಯಾಕ್ಟೀರಿಯಾಗಳು ದ್ವಿಗುಣಗೊಳ್ಳುತ್ತಲೇ ಹೋಗಿ, ವಾಂತಿ-ಭೇದಿ ಆಗುವಷ್ಟು ಅಪಾಯಕ್ಕೆ ತಿರುತ್ತವೆ. ನೀವು ತಂಗಳನ್ನವನ್ನ ಬಿಸಿ ಮಾಡಿದರೂ ಈ ಅಪಾಯಕಾರಿ ಬ್ಯಾಕ್ಟೀರಿಯಾಗಳು ನಿವಾರಣೆಯಾಗುವುದಿಲ್ಲ ಎಂದು ಫುಡ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ ಹೇಳುತ್ತದೆ.

3) ಅಣಬೆ:
ಇವುಗಳ ವಿಚಾರದಲ್ಲಿ ಕೇರ್'ಫುಲ್. ಅಣಬೆಯನ್ನು ಅಡುಗೆ ತಯಾರಾದ ಕೂಡಲೇ ಬಿಸಿ ಇದ್ದಾಗಲೇ ಅದನ್ನು ತಿಂದುಬಿಡಬೇಕು. ಆದರೆ, ತಂಗಳಾದ ಮೇಲೆ ಅಣಬೆಯನ್ನು ಮತ್ತೆ ಬಿಸಿ ಮಾಡಿದರೆ ಅಜೀರ್ಣತೆಯ ಸಮಸ್ಯೆ ಬರುತ್ತದೆ. ಹೃದ್ರೋಗಕ್ಕೆ ಕಾರಣವಾಗುತ್ತದೆ. ಹೀಗಾಗಿ, ಅಣಬೆ ಇರುವ ಆಹಾರವನ್ನು ಮತ್ತೊಮ್ಮೆ ಬಿಸಿ ಮಾಡದೆಯೇ ಹಾಗೆಯೇ ತಂಗುಲನ್ನೇ ತಿನ್ನುವುದು ಒಳ್ಳೆಯದು.

4) ಪಾಲಾಕ್ ಸೊಪ್ಪು:
ಅಣಬೆಯಂತೆ ಪಾಲಾಕ್ ಸೊಪ್ಪನ್ನು ಬೇಯಿಸಿದ ಕೂಡಲೇ ತಿನ್ನುವುದು ಒಳ್ಳೆಯದು. ಫ್ರಿಡ್ಜ್'ನಲ್ಲಿಟ್ಟು ಮಾರನೇ ದಿನ ಬಿಸಿ ಮಾಡಿ ತಿನ್ನುತ್ತೇನೆಂದು ಹೋದರೆ ತೀವ್ರ ಅಪಾಯಕ್ಕೆ ಎಡೆ ಮಾಡಿಕೊಡುತ್ತೀರಿ. ಪಾಲಾಕ್'ನಲ್ಲಿ ನೈಟ್ರೇಟ್ಸ್ ಅಂಶ ಅಧಿಕವಾಗಿದ್ದು, ಇವನ್ನು ಎರಡನೇ ಬಾರಿ ಬಿಸಿ ಮಾಡಿದಾಗ ಇವು ನೈಟ್ರೈಟ್'ಗಳಾಗಿ ಪರಿವರ್ತಿವಾಗಿ ಅಪಾಯ ತರುತ್ತವೆ.

5) ಚಿಕನ್:
ಕೋಳಿ ಮಾಂಸವನ್ನು ಎರಡು ಮೂರು ದಿನ ಇಟ್ಟುಕೊಂಡು ತಿನ್ನುವುದು ಸಾಮಾನ್ಯ. ಆದರೆ, ಹಾಗೆ ಮಾಡುವುದು ತಪ್ಪು ಎನ್ನುತ್ತಾರೆ ಆಹಾರ ತಜ್ಞರು. ಮಟನ್'ನಲ್ಲಿರುವುದಕ್ಕಿಂತ ಹೆಚ್ಚು ಪ್ರೊಟೀನ್ ಅಂಶ ಚಿಕನ್'ನಲ್ಲಿರುತ್ತದೆ. ಕೋಳಿ ಮಾಂಸ ಮಿಕ್ಕಿ ಮಾರನೇ ದಿನ ತಿನ್ನಬೇಕಿದ್ದರೆ ಹಾಗೆಯೇ ತಣ್ಣಗಿದ್ದಾಗಲೇ ತಿಂದುಬಿಡಿ. ಬಿಸಿ ಮಾಡಲೇಬೇಕೆಂದಿದ್ದರೆ ಸಣ್ಣ ಉರಿಯಲ್ಲಿ ಹೆಚ್ಚು ಹೊತ್ತು ಬಿಸಿ ಆನಂತರ ತಿನ್ನಿರಿ.

6) ಮೊಟ್ಟೆ:
ಬೇಯಿಸಿದ ಮೊಟ್ಟೆಯನ್ನು ಮತ್ತೊಮ್ಮೆ ಬೇಯಿಸಿದರೆ ವಿಷಯುಕ್ತವಾಗುತ್ತದೆ. ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ಎರಡನೇ ಬಾರಿ ಬೇಯಿಸಿದಾಗ ಇವು ನಾಶವಾಗುವ ಅಪಾಯವಿರುತ್ತದೆಯಷ್ಟೇ ಅಲ್ಲ, ಪ್ರೊಟೀನ್'ನ ಸ್ವರೂಪ ಬದಲಾಗಿ ವಿಷವಾಗಿ ಕನ್ವರ್ಟ್ ಆಗುತ್ತದೆ.

(ಮಾಹಿತಿ: ಸ್ಪೀಕಿಂಗ್ ಟ್ರೀ)

click me!