
ನೀವು ಮಾಡುವ ಕೆಲಸಕ್ಕೂ ನಿಮ್ಮ ದಾಂಪತ್ಯ ಜೀವನಕ್ಕೂ ಸಂಬಂಧವಿದೆ ಎಂದರೆ ನಂಬುತ್ತೀರಾ?. ಹೌದು, ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗ ಬೇಕಾದರೆ, ನಿಮ್ಮ ದಾಂಪತ್ಯ ಜೀವನದಲ್ಲಿ ಸೆಕ್ಸ್‌ಗೆ ಹೆಚ್ಚು ಆದ್ಯತೆಯನ್ನು ನೀಡಲೇ ಬೇಕಾಗಿದೆ. ಯಾಕೆಂದರೆ, ವ್ಯಕ್ತಿಯ ಸೆಕ್ಸ್ ಜೀವನ ಆತನ ವೃತ್ತಿಯಲ್ಲಿ ಹೆಚ್ಚು ತೃಪ್ತಿಯನ್ನೂ ಮತ್ತು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆಂದು ಹೊಸ ಸಂಶೋಧನೆ ತಿಳಿಸಿದೆ. ಉತ್ತಮ ಸೆಕ್ಸ್‌ನಿಂದ ದೇಹದಲ್ಲಿ ಆಕ್ಸಿಟಾಸಿನ್ ಬಿಡುಗಡೆಯಾಗುತ್ತದೆ. ಆಕ್ಸಿಟಾಸಿನ್ ಅನ್ನು ಸಂತೋಷದ ಹಾರ್ಮೋನ್ ಎನ್ನುತ್ತಾರೆ. ಇದು ಮನಸ್ಸಿನ ಮೇಲೆ ಮುಂದಿನ 24 ಗಂಟೆಗಳ ಕಾಲ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಸೆಕ್ಸ್ ಹೊಂದುವ ವ್ಯಕ್ತಿಗೆ ಹೆಚ್ಚು ಕಾರ್ಯಕ್ಷಮತೆಯಿಂದ ಇರಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.