ದಾಂಪತ್ಯ ಸುಖಮಯವಾಗಿರಲು ನಿಮ್ಮ ಬೆಡ್‌ರೂಮ್ ಹೀಗಿರಲಿ

By Web DeskFirst Published Aug 3, 2018, 3:33 PM IST
Highlights

ದಾಂಪತ್ಯದಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಹೊಂದಾಣಿಕೆ ಎಲ್ಲವೂ ಮುಖ್ಯ. ಹೊಂದಾಣಿಕೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಶುರುವಾಗುತ್ತದೆ. ಪತಿ-ಪತ್ನಿ ಇಬ್ಬರಲ್ಲೂ ಹೊಂದಾಣಿಕೆ ಇರಬೇಕೆಂದರೆ ಮಲಗುವ ಕೋಣೆಯ ವಾಸ್ತುಶಿಲ್ಪವೂ ಮುಖ್ಯವಾಗುತ್ತದೆ. ನಿಮ್ಮ ಬೆಡ್‌ರೂಮ್ ವಿನ್ಯಾಸ ಹೀಗಿರಲಿ. 

ದಾಂಪತ್ಯ ಜೀವನ ಸುಖಮಯವಾಗಿರಲು ಪ್ರೀತಿ, ವಿಶ್ವಾಸದ ಜೊತೆ ಇಬ್ಬರ ನಡುವೆ ಹೊಂದಾಣಿಕೆ ಇರಲೇಬೇಕಾಗುತ್ತದೆ. ಆದರೆ ಇದರ ಜೊತೆಗೆ ಕೆಲವೊಂದು ವಾಸ್ತು  ಟಿಪ್ಸ್’ಗಳನ್ನು ಪಾಲಿಸಿದರೆ ವೈವಾಹಿಕ ಜೀವನ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ. 

-ಬೆಡ್‌‌ರೂಮ್‌ನಲ್ಲಿ ರಾಧಾ ಕೃಷ್ಣರ ಫೋಟೊವನ್ನು ಇಡಿ. ಇದರಿಂದ ಪ್ರೀತಿ ಹೆಚ್ಚಾಗುತ್ತದೆ.  

-ಬೆಡ್ ರೂಮ್’ನಲ್ಲಿ ತಾಜ್ ಮಹಲ್ ಫೋಟೋ ಮೂರ್ತಿ ಇಡಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಬೀರುತ್ತದೆ. 

-.ಪತಿ ಮತ್ತು ಪತ್ನಿ ತಮ್ಮ ಬೆಡ್‌‌ರೂಮ್‌ನಲ್ಲಿ ಪ್ರತ್ಯೇಕವಾಗಿ ಎರಡು ಸುಂದರ ಹೂದಾನಿ ಇಡಿ. 

-ಬೆಡ್ ರೂಮ್ ನಲ್ಲಿ ಕಾಡು ಪ್ರಾಣಿ ಮುಖ್ಯವಾಗಿ ಸಿಂಹ ಹುಲಿಯ ವ್ಯಾಘ್ರವಾದ ಫೋಟೋ ಇಡಬೇಡಿ. ಇದರಿಂದ ಇಬ್ಬರ ನಡುವೆ ಕಲಹ  ಹೆಚ್ಚುತ್ತದೆ. 

- ಬೆಡ್‌‌ರೂಮ್‌ನಲ್ಲಿ ಸಿರಾಮಿಕ್‌ ವಿಂಡ್‌’ಚೈಮ್‌ ಇಡಿ.

-ಲವ್‌ಬರ್ಡ್ಸ್‌, ಪ್ರೀತಿಯ ಸಂಕೇತ ಬೀರುವ ಲವ್‌ಬರ್ಡ್ಸ್‌‌ಗಳ ಫೋಟೊವನ್ನು ಬೆಡ್‌’‌ರೂಮ್‌ನಲ್ಲಿಡಿ.

-ಪತಿ - ಪತ್ನಿಯ ನಡುವೆ ರೊಮ್ಯಾನ್ಸ್‌ ಹೆಚ್ಚಲು ಬೆಡ್‌‌ರೂಮ್‌ನಲ್ಲಿ ಹೃದಯ ಆಕಾರದ ಯಾವುದಾದರು ವಸ್ತುವನ್ನು ಇಡಿ.

-ಕೆಂಪು ಅಥವಾ ಗುಲಾಬಿ ಬಣ್ಣ ರೊಮ್ಯಾನ್ಸ್‌‌ನ ಸಂಕೇತವಾಗಿದೆ. ಬೆಡ್ ರೂಮ್ ಬಣ್ಣ ಈ ಬಣ್ಣದಲ್ಲಿದ್ದರೆ ಉತ್ತಮ.

-ಬೆಡ್ ರೂಮ್ ನಲ್ಲಿ ದೇವರ ಪೂಜೆ ಮಾಡಬೇಡಿ. ಇದು ಒಳ್ಳೆಯದಲ್ಲ. 

-ಬೆಡ್ ರೂಮಿನಲ್ಲಿ ರೋಸ್ ಅದು ಕೆಂಪು ಬಣ್ಣದ ಗೂಲಾಬಿ ಹೂವು ಇಟ್ಟರೆ ಉತ್ತಮ.  

click me!