
ವಾಷಿಂಗ್ ಟನ್[ಆ.2] ಕಾಂಡೋಮ್ ನ್ನು ವಾಶ್ ಮಾಡಿ ಬಳಸಬೇಡಿ ಎಂದು ವಾರದ ಆರಂಭದಲ್ಲಿಯೇ ವಿಶ್ವ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ [ಸಿಡಿಸಿ] ಎಚ್ಚರಿಸಿತ್ತು. ಆದರೂ ಪುರುಷರು ಅದೆ ಕೆಲಸ ಮಾಡುತ್ತಿದ್ದಾರೆ ಎಂದು ಇದೀಗ ಖೇದ ವ್ಯಕ್ತಪಡಿಸಿದೆ.
ಶೇ. 72 ರಷ್ಟು ಅಮೆರಿಕನ್ನರು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಇವರಲ್ಲಿ ನಾಲ್ವರಲ್ಲಿ ಒಬ್ಬರು ಬಳಸಿದ ಕಾಂಡೋಮ್ ಮತ್ತೆ ಬಳಕೆ ಮಾಡುತ್ತಾರೆ. ಶೇಕಡಾ ಮೂರರಷ್ಟು ಜನ ಬಳಕೆ ಮಾಡಿದ ಕಾಂಡೋಮ್ ರಕ್ಷಣೆ ಮಾಡಿ ಇಟ್ಟುಕೊಳ್ಳಲು ಮುಂದಾಗುತ್ತಿದ್ದಾರೆ. ಇದರಲ್ಲಿ ಅರ್ಥ ಜನ ತುಂಬಾ ತಡವಾಗಿ ಕಾಂಡೋಮ್ ಧರಿಸಿ ಸಮಯಕ್ಕೆ ಮುನ್ನವೇ ತೆಗೆದು ಬಿಡುತ್ತಾರೆ ಎಂದು ಅಧ್ಯಯನ ಹೇಳಿದೆ.
ಗುಪ್ತ ರೋಗಗಳನ್ನು ತಡೆಯುವಲ್ಲಿ ಕಾಂಡೋಮ್ ಪ್ರಮುಖ ಪಾತ್ರ ನಿರ್ವಹಿಸುಯತ್ತದೆ. ಬೇಡದ ಗರ್ಭ ತಡೆಗೂ ಇದನ್ನು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಬಳಕೆಯಾಗುವ ಶೇ. 50 ಕ್ಕೂ ಅಧಿಕ ಕಾಂಡೋಮ್ ಗಳನ್ನು ಉಚಿತವಾಗಿ ನೀಡುತ್ತಿದ್ದರೂ ಜನ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಹೇಳಿದೆ.
ಬಳಕೆ ಮಾಡಿದ ಕಾಂಡೋಮ್ ರಿಯೂಸ್ ಮಾಡಿದ್ರೆ ಏನಾಗುತ್ತೆ?
ಕಾಂಡೋಮ್ ಬಳಕೆ ವಿಧಾನವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ವೈದ್ಯರ ಸಲಹೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಎಣ್ಣೆ ಪದಾರ್ಥ, ಚೂಪಾದ ವಸ್ತು ತಾಗಿದರೂ ಕಾಂಡೋಮ್ ಗೆ ಹಾನಿಯಾಗುತ್ತದೆ. ಒಮ್ಮೆ ಉಪಯಯೋಗಿಸಿದ ಕಾಂಡೋಮ್ ದೇಹದ ಘರ್ಷಣೆಗೆ ಒಳಪಡುತ್ತದೆ. ಹಾಗಾಗಿ ಯಾವ ಕಾರಣಕ್ಕೂ ಬಳಕೆ ಸೂಕ್ತವೇ ಅಲ್ಲ ಎಂದು ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.