ರಾಗಿ ಮುದ್ದೆಗೂ ಜೈ ಈ ಪುದೀನಾ ಚಟ್ನಿ!

First Published Aug 2, 2018, 10:21 AM IST
Highlights

ರಾಗಿ ಮುದ್ದೆ ಬಾಯಿಗೆ ರುಚಿ ಅಲ್ಲದೇ ಹೋದರೂ, ಆರೋಗ್ಯಕ್ಕೆ ಹಿತ. ಒಂದು ಮುದ್ದೆ ತಿಂದರೆ ಸಾಕು, ದಿನಾ ಪೂರ್ತಿ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇಂಥ ಮುದ್ದೆಯನ್ನೂ ರುಚಿಯಾಗಿಸಬಲ್ಲ ಪುದೀನಾ ಚಟ್ನಿ ರೆಸಿಪಿ ಇಲ್ಲಿದೆ

ತರಕಾರಿ ಬಳಸಿಯೇ ಅಡುಗೆ ಮಾಡಬೇಕು ಎಂದೇನೂ ಇಲ್ಲ. ಸೊಪ್ಪೂ ಸಹ ಆರೋಗ್ಯಕ್ಕೆ ಅತ್ಯಗತ್ಯ. ಅದರಲ್ಲಿಯೂ ರಾಗಿ ಮುದ್ದೆಯೊಡನೆ ಸಖತ್ ಮ್ಯಾಚ್ ಆಗೋ ಕಾಂಬಿನೇಷನ್ ಅಂದ್ರೆ ಸೊಪ್ಪಿನ ಸಾರು. ಸೊಪ್ಪಿನ ಸಾರು ಮಾತ್ರವಲ್ಲ, ಚಟ್ನಿಯೂ ರುಚಿಯಾಗಿರುತ್ತೆ. ಇಲ್ಲಿದೆ ಪುದೀನಾ ಚಟ್ನಿ ರೆಪಿಸಿ..

ಬೇಕಾಗುವ ಸಾಮಾಗ್ರಿ:

  • ಪುದೀನಾ
  • ತೆಂಗಿನಕಾಯಿ ತುರಿ
  • 4 ಹಸಿ ಮೆಣಸಿನಕಾಯಿ
  • ಸಾಸಿವೆ
  • ಇಂಗು
  • ಅರಿಶಿಣ
  • ಹುಣಸೆ ರಸ 
  • ಉಪ್ಪು

ಮಾಡುವ ವಿಧಾನ:

ಬಾಣಲೆಯಲ್ಲಿ ತೊಳೆದ ಪುದೀನಾ, ಹಸಿಮೆಣಸಿನಕಾಯಿ ಮತ್ತು ಎಣ್ಣೆ ಹಾಕಿ ಹುರಿದು ಕೊಳ್ಳಿ.

ಅದಕ್ಕೆ ಪುದಿನಾ, ಹಸಿ ಮೆಣಸಿನಾಕಾಯಿ, ತೆಂಗಿನಕಾಯಿ ತುರಿ, ಹುರಿಗಡಲೆ, ಹುಣಸೆ ರಸ ಮತ್ತು ರುಚಿಗೆ ಉಪ್ಪು ಬೆರಸಿ ರುಬ್ಬಿಕೊಳ್ಳಿ. ನಂತರ ನಂತರ ಇಂಗು ಹಾಗೂ ಸಾಸಿವೆ ಬೆರಸಿ ಒಗ್ಗರಣೆ ಮಾಡಿಕೊಳ್ಳಿ. ಎಲ್ಲವನ್ನೂ ಮಿಕ್ಸ್ ಮಾಡಿದರೆ ಪುದೀನಾ ಚಟ್ನಿ ರೆಡಿ.

click me!