ವಾಕ್ಯೂಮ್ ಕ್ಲಿನರ್ ಗಾಳಿ ಎಷ್ಟು ವೇಗವಾಗಿರುತ್ತೆ ಎಂಬುದು ನಿಮಗೆ ಗೊತ್ತು. ಅದು ಅಕ್ಕಪಕ್ಕದಲ್ಲಿರುವ ವಸ್ತುವನ್ನೆಲ್ಲ ಎಳೆದುಕೊಳ್ಳುತ್ತೆ. ಆ ಗಾಳಿಗೆ ಮುಖ ಹಿಡಿದ್ರೆ ಏನಾಗ್ಬೇಡ…? ಅಜ್ಜನ ಸ್ಥಿತಿ ನೋಡಿದ್ರೆ ನಿಮಗೆ ಅರ್ಥವಾಗುತ್ತೆ .
ಟಿವಿ, ಸಿನಿಮಾಗಳಿಗಿಂತ ಈಗಿನ ದಿನಗಳಲ್ಲಿ ಹೆಚ್ಚು ಮನರಂಜನೆಯನ್ನು ಸಾಮಾಜಿಕ ಜಾಲತಾಣಗಳು ನೀಡ್ತಿವೆ. ನೀವು ಸಾಮಾಜಿಕ ಜಾಲತಾಣವನ್ನು ಸ್ಕ್ರಾಲ್ ಮಾಡ್ತಾ ಹೋದ್ರೆ ಸಮಯ ಸರಿದಿದ್ದೇ ತಿಳಿಯೋದಿಲ್ಲ. ಕೆಲ ವಿಡಿಯೋಗಳು ಅಬ್ಬಾ ಎನ್ನುವಂತಿದ್ರೆ ಮತ್ತೆ ಕೆಲ ವಿಡಿಯೋಗಳು ನಕ್ಕು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತವೆ. ಈ ಸೋಶಿಯಲ್ ಮೀಡಿಯಾ ನಿಮ್ಮ ಒತ್ತಡ ಹೆಚ್ಚಿಸುವ ಹಾಗೂ ಒತ್ತಡ ಕಡಿಮೆ ಮಾಡುವ ಎರಡೂ ಶಕ್ತಿಯನ್ನು ಹೊಂದಿದೆ.
ವಯಸ್ಸಾಗ್ತಿದ್ದಂತೆ ಜನರ ಹಲ್ಲು (Teeth) ಒಂದೊಂದಾಗಿ ಶಕ್ತಿ ಕಳೆದುಕೊಳ್ಳುತ್ತದೆ. ಹಾಗಾಗಿ 60 ವರ್ಷದ ಗಡಿ ದಾಟುತ್ತಿದ್ದಂತೆ ಜನರು ಇರುವ ಮೂರ್ನಾಲ್ಕು ಹಲ್ಲನ್ನು ತೆಗೆಸಿ, ಹಲ್ ಸೆಟ್ ಹಾಕಿಸಿಕೊಳ್ತಾರೆ. ಈ ಹಲ್ ಸೆಟ್ ಹಾಕಿದೋರಿಗೆ ಮಾತ್ರ ಅದ್ರ ಕಷ್ಟಗೊತ್ತು. ಸ್ವಚ್ಛತೆ ಸೇರಿದಂತೆ ಅನೇಕ ವಿಷ್ಯದ ಬಗ್ಗೆ ಗಮನ ಹರಿಸಬೇಕು. ಯಾವಾಗ ಹಲ್ ಸೆಟ್ ಕೆಳಗೆ ಬೀಳುತ್ತೆ ಹೇಳೋಕೆ ಸಾಧ್ಯವಿಲ್ಲ. ನಾವೀಗ ಹಲ್ ಸೆಟ್ ಬಗ್ಗೆ ಏಕೆ ಹೇಳ್ತಿದ್ದೇವೆ ಅಂದ್ರೆ ಸಾಮಾಜಿಕ ಜಾಲತಾಣ (Social Network) ದಲ್ಲಿ ಅಜ್ಜನ ಹಲ್ ಸೆಟ್ ಚರ್ಚೆಯ ವಿಷ್ಯವಾಗಿದೆ. ವಿಡಿಯೋ (Video) ನೋಡಿದ ಜನರು ನಕ್ಕು ರಿಲ್ಯಾಕ್ಸ್ ಆಗ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನಾವು ಹೇಳ್ತೇವೆ.
undefined
ಪ್ರದೋಷ ವ್ರತದಿಂದ ಸಂತಾನ ಭಾಗ್ಯ; ಇಲ್ಲಿದೆ ಪೂಜೆಯ ಮಹತ್ವ ಮತ್ತು ವಿಧಾನ..!
@Enezator ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಹಹ ಅಂತಾ @Enezator ಶೀರ್ಷಿಕೆ ಹಾಕಿದ್ದಾರೆ. ಟೇಬಲ್ ಮೇಲೆ ಕುಳಿತುಕೊಂಡಿರುವ ಅಜ್ಜನನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಅಜ್ಜನ ಮುಖಕ್ಕೆ ವಾಕ್ಯೂಮ್ ಕ್ಲೀನರ್ ಹಿಡಿಯಲಾಗುತ್ತದೆ. ವಾಕ್ಯೂಮ್ ಕ್ಲೀನರ್ ಗಾಳಿ ಎಷ್ಟು ರಭಸವಾಗಿರುತ್ತದೆ ಎಂಬುದು ನಿಮಗೆ ಗೊತ್ತು. ಆ ಗಾಳಿಯನ್ನು ಅಜ್ಜನಿಗೆ ಸಹಿಸಲು ಆಗೋದಿಲ್ಲ. ಮುಖಕ್ಕೆ ಗಾಳಿ ಬಿದ್ದ ಕಾರಣ ಅಜ್ಜನ ಮುಖದ ಚರ್ಮ ಅಲ್ಲಿ ಇಲ್ಲಿ ಹೋಗೋದನ್ನು ನೀವು ನೋಡ್ಬಹುದು. ಅಜ್ಜ ಮುಖವನ್ನು ಹಿಂದೆ ಎಳೆದುಕೊಂಡು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಾನೆ. ಈ ಮಧ್ಯೆ ಒಂದು ಅಚ್ಚರಿ ನಡೆಯುತ್ತದೆ. ಗಾಳಿ ರಭಸಕ್ಕೆ ಅಜ್ಜನ ಬಾಯಿ ತೆರೆಯುತ್ತದೆ. ಆ ಕ್ಷಣ ಅಜ್ಜನ ಬಾಯಲ್ಲಿದ್ದ ನಕಲಿ ಹಲ್ಲಿನ ಸೆಟ್ ಹೊರಕ್ಕೆ ಬೀಳುತ್ತದೆ.
'ಬೊಂಬಾಟ್ ಭೋಜನ'ದಲ್ಲಿ ಓಣಂ ಸದ್ಯ ಸವಿದ ಮೀಟೂ ಶೃತಿ
ಆಗಸ್ಟ್ 22ರಂದು ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು 3 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜನರು ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ.
ನಾನು ಹಲ್ಲು ಕೆಳಗಿರುವ ವಿಸ್ಕಿ ಗ್ಲಾಸ್ ಒಳಗೆ ಬೀಳುತ್ತೆ ಎಂದುಕೊಂಡಿದ್ದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಜೀವನ ಪೂರ್ತಿ ಇದು ನೆನಪಾದಾಗೆಲ್ಲ ನಗ್ತೇನೆ ಎಂದಿದ್ದಾರೆ. ಇನ್ನೊಬ್ಬರು ಇದನ್ನು ಟೀಥ್ ಕ್ಲೀನಿಂಗ್ ಎಂದಿದ್ದಾರೆ. ಗಾಳಿ ತುಂಬಾ ವೇಗವಾಗಿತ್ತು ಅಂತಾ ಒಬ್ಬರು ಹೇಳಿದ್ರೆ ಇದನ್ನು ಸೇವ್ ಮಾಡಿರ್ತೇನೆ, ವಯಸ್ಸಾದ್ಮೇಲೆ ನಾನೂ ಇಂತ ಹಲ್ಲು ಹಾಕಿಸ್ಕೊಂಡ್ಮೇಲೆ ನಗ್ತೇನೆ ಎಂದಿದ್ದಾನೆ ಇನ್ನೊಬ್ಬ.
ಕೆಲವರು ತಮಾಷೆ ವಿಡಿಯೋಗಳನ್ನ ಇಲ್ಲಿ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ಒಂದು ಅಜ್ಜಿಯ ವಿಡಿಯೋ ಕೂಡ ಇದೆ. ಆ ಅಜ್ಜಿ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಮೇಲಿಟ್ಟಿದ್ದ ಮೇಣದಬತ್ತಿಯನ್ನು ಆರಿಸಲು ಹೋಗ್ತಾಳೆ. ಬಾಯಿಂದ ಊದಿ ಬತ್ತಿಯನ್ನು ಆರಿಸುವ ಪ್ರಯತ್ನದಲ್ಲಿದ್ದಾಗ ಆಕೆ ಹಲ್ ಸೆಟ್ ಉದುರಿ ಕೆಳಗೆ ಬೀಳುತ್ತದೆ.
ನೀವು ಈಗಷ್ಟೆ ಹೊಸ ಹಲ್ ಸೆಟ್ ಹಾಕಿಸಿಕೊಂಡಿದ್ರೆ ಹುಷಾರಾಗಿರಿ. ಎತ್ತರದ ಪ್ರದೇಶ ಅಥವಾ ಆಳವಾದ ಪ್ರದೇಶಕ್ಕೆ ಹೋದಾಗ ನೀವು ಇಂಥ ಯಡವಟ್ಟು ಮಾಡ್ಕೊಂಡ್ರೆ ಮತ್ತೆ ನಿಮ್ಮ ಹಲ್ ಸೆಟ್ ಸಿಗುತ್ತೆ ಅನ್ನೋಕಾಗಲ್ಲ.
hahahaah pic.twitter.com/CShXS7BQdz
— Enezator (@Enezator)