ಅಲರಾಂಗೆ ಅಂತ ದಿಂಬಿನ ಕೆಳಗೆ ಮೊಬೈಲ್ ಇಡ್ತೀರಾ? ತುಂಬಾ ಡೇಂಜರ್‌ ಇದು!

By Suvarna News  |  First Published Aug 24, 2023, 1:16 PM IST

ಮೊಬೈಲ್ ಇಲ್ದೇ ಲೈಫೇ ಇಲ್ಲ ಅನ್ನೋ ಹಾಗಾಗಿದೆ. ಕೆಲವರು ದಿಂಬಿನ ಕೆಳಗೆ, ತಲೆ ಪಕ್ಕ ಮೊಬೈಲ್ ಇಟ್ಟು ಮಲಕ್ಕೊಳ್ತಾರೆ. ಇದರಿಂದ ಏನಾಗುತ್ತೆ ಗೊತ್ತಾ?


ಅಲರಾಂ, ಫಿಟ್‌ನೆಸ್‌ ಮಾನಿಟರ್, ಸ್ಲೀಪ್‌ ಮಾನಿಟರ್‌ ಎಲ್ಲ ಮೊಬೈಲ್‌ನಲ್ಲೇ ಸಿಗುವಾಗ ಆ ಮೊಬೈಲ್ ನಮ್ ಪಕ್ಕದಲ್ಲೇ ಇರ್ಬೇಕಲ್ವಾ ಅನ್ನೋದು ಹಲವರ ವಾದ. ಹೀಗಾಗಿ ೨೪ ಗಂಟೆಯೂ ಮೊಬೈಲ್‌ ಮೈಗೆ ಅಂಟಿಕೊಂಡೇ ಇರುತ್ತೆ. ವಾಶ್‌ ರೂಂಗೆ ಹೋಗಿ, ಬೆಡ್‌ ರೂಮಿಗೆ ಹೋಗಿ, ವಾಕಿಂಗ್ ಮಾಡಿ, ಜಾಗಿಂಗ್ ಮಾಡಿ, ಮೊಬೈಲ್ ಕೈ ತಪ್ಪಲ್ಲ. ಇದೆಲ್ಲ ಆಯ್ತು. ಕೊನೆಗೆ ಮಲಗುವಾಗ ಆದ್ರೂ ಆ ಮೆಶಿನ್‌ಗೆ ಒಂಚೂರಾದ್ರೂ ರೆಸ್ಟ್ ಕೊಡ್ತೀವ ಅಂದ್ರೆ ನೆವರ್. ಆ ಚಾನ್ಸೇ ಇಲ್ಲ. ಮೊಬೈಲ್ ಆಗ್ಲೂ ನಮ್ ಪಕ್ಕನೇ ಇರಬೇಕು. ಬೆಳಗ್ಗೆ ಏಳಬೇಕಲ್ವಾ? ಅಲರಾಂ ಹೊಡ್ಕೊಳ್ಳಿಲ್ಲ ಅಂದರೆ ಎಚ್ಚರ ಹೇಗಾಗುತ್ತೆ? ಒಂಚೂರು ಲೇಟಾದ್ರೂ ಎಡವಟ್ಟು. ಸೋ ರಾತ್ರಿ ಮಲಗುವಾಗ ಅಲರಾಂ ಇಟ್ಟು ಇಂಟರ್‌ನೆಟ್‌ ಆನ್ ಇಟ್ಕೊಂಡು ಮಲಕ್ಕೊಳ್ಳುತ್ತೀವಿ. ಇಂಟರ್‌ನೆಟ್ ಆಫ್ (internet off)ಮಾಡಬಹುದಲ್ವಾ ಅಂದರೆ ಯಾರದ್ದಾದ್ರೂ ಅರ್ಜೆಂಟ್ ಮೆಸೇಜ್ ಇದ್ರೆ.. ಅಂತ ಟೆನ್ಶನ್.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ಚಟವಾಗಿಬಿಟ್ಟಿದೆ. ಹಾಲು ಕುಡಿಯುವ ಮಕ್ಕಳ (kids) ಕೈಯಲ್ಲೂ ಮೊಬೈಲ್ ಬೇಕು. ಇಲ್ಲವಾದರೆ ಅವರು ಊಟ ಮಾಡೋದಿಲ್ಲ. ಇನ್ನೂ ಯುವಕರ ಸ್ಥಿತಿಯಂತೂ ಮೊಬೈಲ್ ಕೈಯಲ್ಲಿಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿಬಿಟ್ಟಿದೆ. ಬೆಳಗ್ಗೆ ಎದ್ದಾಗಲೂ ಮೊಬೈಲ್ ನೋಡುವುದು, ಮಲಗುವಾಗುವಾಗಲೂ ಮೊಬೈಲ್ (mobile) ಪಕ್ಕದಲ್ಲಿಟ್ಟು ಮಲಗುವುದು ರೂಢಿಯಾಗಿಬಿಟ್ಟಿದೆ. ಇವರ ಇನ್ನೊಂದು ಕೆಟ್ಟ ಅಭ್ಯಾ ಅಂದರೆ ದಿಂಬಿನ ಕೆಳಗಿಟ್ಟು ಜಾರ್ಜ್ ಮಾಡುವುದು.

Tap to resize

Latest Videos

ಅನಗತ್ಯ ಗರ್ಭಧಾರಣೆ ತಪ್ಪಿಸಲು ಕಾಪರ್-ಟಿ ಬಳಸೋರು ಇದನ್ನ ಓದಲೇಬೇಕು!

ಕೆಲವರು ಹಾಸಿಗೆಯ ಮೇಲೆ ಮಲಗುವಾಗ ದಿಂಬಿನ ಕೆಳಗೆ ಅಥವಾ ತಲೆಯ ಬಳಿ ಇಟ್ಟು ಫೋನ್ ಚಾರ್ಜ್ ಮಾಡುತ್ತಾರೆ. ಅನೇಕ ಬಾರಿ ಅವರು ತಮ್ಮ ಫೋನ್ ಚಾರ್ಜ್‌ನಲ್ಲಿ(phone charge) ಇಟ್ಟು ಮಲಗುತ್ತಾರೆ. ಇದರಿಂದ ಬೆಳಗ್ಗೆ ಚಾರ್ಜ್ ಆಗಿಲ್ಲ ಅನ್ನೋ ತಲೆಬಿಸಿ ಇರೋದಿಲ್ಲ.

ಆದರೆ ಹೀಗೆ ಮಾಡೋದು ಮೊಬೈಲ್‌ಗೂ ಹಾಳು. ಆ ಮೊಬೈಲ್‌ ಓನರ್‌ಗಂತೂ ಹಂಡ್ರೆಡ್ ಪರ್ಸೆಂಟ್ ಹಾಳು. ಹಾಸಿಗೆಯ ಮೇಲೆ ದಿಂಬಿನ ಕೆಳಗೆ ಮೊಬೈಲ್ ಫೋನ್ ಇಡುವುದರಿಂದ ಮೆದುಳಿಗೆ ಹಾನಿಯಾಗುತ್ತದೆ. ಇದು ಮಕ್ಕಳಿಗೆ ಇನ್ನೂ ಅಪಾಯಕಾರಿ. ಅವರ ನೆತ್ತಿ ಮತ್ತು ತಲೆಬುರುಡೆ ಹೆಚ್ಚು ತೆಳುವಾಗಿರುವುದರಿಂದ. ಅದಕ್ಕಾಗಿಯೇ ವಿಕಿರಣವು ಅವರ ಮೆದುಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.

ಮೊಬೈಲ್ ಫೋನ್‌ಗಳಿಂದ ಹೊರಹೊಮ್ಮುವ ವಿಕಿರಣವು ಕ್ಯಾನ್ಸರ್ ಮತ್ತು ಟ್ಯೂಮರ್‌ನಂಥಾ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೊಬೈಲ್ ಮಕ್ಕಳಿಂದ ದೂರವಿದ್ದಷ್ಟು ಒಳ್ಳೆಯದು. ಜೊತೆಗೆ ಇದು ವ್ಯಕ್ತಿಯ ಲೈಂಗಿಕ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್ ಪೋನ್‌ಗಳಿಂದ ಹೊರಹೊಮ್ಮುವ ವಿಕಿರಣವು ಸಂತಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅನೇಕ ವರದಿಗಳು ಎಚ್ಚರಿಸುತ್ತವೆ. ಇದು ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡಬಹುದು. ತನ್ನ ಫೋನ್ ಅನ್ನು ಯಾವಾಗಲೂ ತನ್ನ ಜೇಬಿನಲ್ಲಿ ಇಟ್ಟುಕೊಳ್ಳುವವರ ವೀರ್ಯದ ಸಂಖ್ಯೆ ಕಡಿಮೆಯಾಗಬಹುದು ಆತ ತಂದೆಯಾಗಲು ಸಮಸ್ಯೆಯಾಗಬಹುದು. ಇನ್ನು ಮೊಬೈಲ್ ಗೂ ಇದು ಹಾನಿ. ರಾತ್ರಿಯೆಲ್ಲ ಚಾರ್ಜ್ ಆಗಿ ಅದರ ಬ್ಯಾಟರಿ ಹಾಳಾಗುತ್ತದೆ. ಬಹಳ ಬೇಗ ಮೊಬೈಲ್ ಬ್ಯಾಟರಿ ಸಮಸ್ಯೆ ಕಾಣಿಸಬಹುದು.

ದಿನಾ ಆಫೀಸ್‌ಗೆ ಭಾರವಾದ ಲ್ಯಾಪ್‌ಟಾಪ್ ಬ್ಯಾಗ್ ಹೊತ್ತೊಯ್ತೀರಾ? ಅಪಾಯ ಕಟ್ಟಿಟ್ಟ ಬುತ್ತಿ!

ಇದರ ಬದಲು ನಿದ್ರಿಸುತ್ತಿರುವಾಗ ಮೊಬೈಲ್‌ ಪವರ್ ಆಫ್ ಮಾಡಿ ಅಥವಾ ಏರೋಪ್ಲೇನ್‌ ಮೋಡ್'ನಲ್ಲಿ ಇರಿಸೋದು ಬೆಟರ್‌. ಇಲ್ಲ ಮೊಬೈಲ್ ಆನ್‌ನಲ್ಲೇ ಇರಬೇಕು ಅನ್ನುವವರು ಮೊಬೈಲ್‌ ಅನ್ನು ಮಲಗುವ ಸ್ಥಳದಿಂದ ಹಲವಾರು ಅಡಿ ದೂರದಲ್ಲಿರಿಸಿ. ನಮ್ಮಲ್ಲಿ ಹಲವರು ತಮ್ಮ ಮೊಬೈಲ್ ಫೋನ್ ಅನ್ನು ಅಲಾರಾಂ ಆಗಿ ಬಳಸುತ್ತಾರೆ. ಅಲರಾಂ ಸೆಟ್ ಮಾಡಿ ಮೊಬೈಲ್ ದೂರ ಇಟ್ಟರೆ ಇನ್ನೂ ಒಳ್ಳೆಯದು. ತಲೆ ಮೇಲಿದ್ದರೆ ಸ್ನೂಜ್ ಮೋಡ್‌ಗೆ ಹಾಕಿ ಮತ್ತೆ ಮಲಗ್ತೀವಿ. ದೂರ ಇದ್ದರೆ ಎದ್ದು ಅಷ್ಟು ದೂರ ಹೋಗುವಾಗ ನಿದ್ದೆಯಿಂದಲೂ ಆಚೆ ಬರ್ತೀವಿ.

click me!