ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಇದೆ ನೀರಿನ ಬರ!

Published : Feb 03, 2023, 01:10 PM IST
ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಇದೆ ನೀರಿನ ಬರ!

ಸಾರಾಂಶ

ಕರ್ನಾಟಕ – ತಮಿಳುನಾಡು ಎಂದಾಗ ನೆನಪಾಗೋದೆ ಕಾವೇರಿ ನೀರಿನ ಸಮಸ್ಯೆ. ಕಾವೇರಿಗಾಗಿ ಎರಡೂ ರಾಜ್ಯಗಳ ಗಲಾಟೆ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಬರೀ ನಮ್ಮಲ್ಲಿ ಮಾತ್ರವಲ್ಲ ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕಾದ ರಾಜ್ಯಗಳ ಮಧ್ಯೆಯೂ ನೀರಿನ ಕಿತ್ತಾಟವಿದೆ.  

ನೀರು ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದು. ನೀರಿಲ್ಲದೆ ಜೀವನ ಅಸಾಧ್ಯ. ಅತಿವೃಷ್ಟಿ, ಅನಾವೃಷ್ಟಿ ಎರಡೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನೀರನ್ನು ಅತಿಯಾಗಿ ಬಳಕೆ ಮಾಡುವುದು, ಹವಾಮಾನದಲ್ಲಿನ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿಯೇ ನೀರಿನ ಸಂರಕ್ಷಣೆಗೆ ಜನರನ್ನು ಜಾಗೃತಿಗೊಳಿಸುವ ಅಗತ್ಯವಿದೆ. ನೀರಿನ ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರವಲ್ಲ ದೊಡ್ಡಣ್ಣ ಅಮೆರಿಕಾದಲ್ಲೂ ನಿರ್ಮಾಣವಾಗಿದೆ. ಅಮೆರಿಕಾದ ನೈಋತ್ಯ ಪ್ರದೇಶದಲ್ಲಿ ಸತತ 22 ವರ್ಷಗಳಿಂದ ಬರಗಾಲವಿದೆ.  ನಾವಿಂದು ಕೊಲಾರಾಡೋ ನದಿಯ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

ಅಮೆರಿಕ (America ) ದ ಕೊಲೊರಾಡೋ (Colorado) ನದಿಯು ಸುಮಾರು 2330 ಕಿಲೋಮೀಟರ್ ಉದ್ದವಿದೆ. ಈ ನದಿ ಅಮೆರಿಕದ ಏಳು ರಾಜ್ಯ (State) ಗಳು ಮತ್ತು ಮೆಕ್ಸಿಕೋದ ಎರಡು ರಾಜ್ಯಗಳಿಗೆ ನೀರು (Water) ಸರಬರಾಜು ಮಾಡುತ್ತಿದೆ. ಆದ್ರೆ ಈ ನದಿ ಆಶ್ರಯಿಸಿರುವ ಜನರಿಗೆ ಈಗ ಸಮಸ್ಯೆ ಶುರುವಾಗಿದೆ. ಏಳು ಯುಎಸ್ ರಾಜ್ಯಗಳು ಈಗ ಕೊಲೊರಾಡೋ ನದಿಯ ನೀರಿಗಾಗಿ ತಮ್ಮ ತಮ್ಮಲ್ಲೇ ಹೋರಾಟ ನಡೆಸುತ್ತಿವೆ. ಏಕೆಂದರೆ ಈ ನದಿ ಈಗ ಬತ್ತಿ ಹೋಗುತ್ತಿದೆ. ನೀರಿನ ಮಟ್ಟ ಸಾಕಷ್ಟು ಕುಸಿದಿದೆ. 

ಇಷ್ಟು ಜನರಿಗೆ ನೀರು ನೀಡ್ತಿತ್ತು ನದಿ : ಕೊಲೊರಾಡೋ ನದಿಯು ಯುಎಸ್ ನ  ಕ್ಯಾಲಿಫೋರ್ನಿಯಾ, ಅರಿಜೋನಾ, ಕೊಲೊರಾಡೋ, ನೆವಾಡಾ, ನ್ಯೂ ಮೆಕ್ಸಿಕೋ, ಉತಾಹ್ ಮತ್ತು ವ್ಯೋಮಿಂಗ್ ರಾಜ್ಯಗಳಿಗೆ ನೀರು ನೀಡ್ತಿದೆ. ಇಲ್ಲಿನ ನಾಲ್ಕು ಕೋಟಿ ಜನರಿಗೆ ಕುಡಿಯುವ ನೀರನ್ನು ಪೂರೈಸುತ್ತಿದೆ. ಆದರೆ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಿಂದಾಗಿ ನೀರಿನ ಮಟ್ಟ ಕಡಿಮೆಯಾಗ್ತಿದೆ.  1200 ವರ್ಷಗಳಲ್ಲಿ ಮೊದಲ ಬಾರಿಗೆ ಭೀಕರ ಬರ ಎದುರಾಗಿದೆ.

ನೀರಿನ ಕಡಿತ ಅವಶ್ಯಕ : ಈಗ ಈ ಏಳು ರಾಜ್ಯಗಳು ನೀರನ್ನು ಬೇರೆ ಕಡೆಯಿಂದ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಏಳು ರಾಜ್ಯಗಳು ನೀರಿನ ಸಮಸ್ಯೆಯನ್ನು ತಮ್ಮ ತಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕೆಂದು ಅಮೆರಿಕಾ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಇತಿಮಿತಿಯಿಂದ ನೀರಿನ ಬಳಕೆ ಮಾಡಿ ಎಂಬುದು ಸರ್ಕಾರದ ಸೂಚನೆಯಾಗಿದೆ. ಜಲ ಕಡಿತ ಮಾಡುವುದು ಏಳು ರಾಜ್ಯಗಳ ಹಿತದೃಷ್ಟಿಯಿಂದ ಒಳ್ಳೆಯ ಹೆಜ್ಜೆ ಎಂದು ತಜ್ಞರು ಹೇಳಿದ್ದಾರೆ. 

ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!

ಕಳೆದ 20 ವರ್ಷಗಳಿಂದ ಈ ಏಳು ರಾಜ್ಯಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 20 ವರ್ಷಗಳಿಂದ ಇಲ್ಲಿ ಬರಗಾಲ ಪರಿಸ್ಥಿತಿಯಿದೆ. ಹವಾಮಾನ ಬದಲಾವಣೆ ನೀರು ಬತ್ತಲು ಮುಖ್ಯ ಕಾರಣವಾಗಿದೆ. ಏಳೂ ರಾಜ್ಯಗಳು ನದಿ ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು. 100 ವರ್ಷಗಳ ಹಿಂದೆ ಏಳು ರಾಜ್ಯಗಳ ಮಧ್ಯೆ ನೀರಿನ ಹಂಚಿಕೆ ಬಗ್ಗೆ ತೀರ್ಮಾನವಾಗಿತ್ತು. ಆದ್ರೆ ಎಲ್ಲ ರಾಜ್ಯಗಳು ನಿರ್ಧರಿಸಿದ್ದ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಕೆ ಮಾಡಿದ್ದವು. ಇದ್ರಿಂದಾಗಿ ನೀರಿನ ಪ್ರಮಾಣದಲ್ಲಿ ದೊಡ್ಡ  ಮಟ್ಟದ ಇಳಿಕೆ ಕಂಡು ಬಂದಿದೆ. ಕ್ಯಾಲಿಫೋರ್ನಿಯಾ ನದಿಯ ಅತಿ ಹೆಚ್ಚು ಶೇಕಡಾ 80ರಷ್ಟು ಪಾಲನ್ನು ಪಡೆಯುತ್ತದೆ.

CAREER ADVICE : 40 ನೇ ವಯಸ್ಸಿನಲ್ಲಿ ವೃತ್ತಿಜೀವನ ಬದಲಾಯಿಸೋರ ಗಮನಕ್ಕೆ….

ನೀರು ಹಂಚಿಕೆಗೆ ಒಪ್ಪದ ಕ್ಯಾಲಿಫೋರ್ನಿಯಾ : ಈಗ ನೀರಿನ ಸಮಸ್ಯೆ ದೊಡ್ಡ ಕೋರ್ಟ್ ನಲ್ಲಿ ಇತ್ಯರ್ಥವಾಗುವ ಸಾಧ್ಯತೆಯಿದೆ. ಯಾಕೆಂದ್ರೆ ಕ್ಯಾಲಿಫೋರ್ನಿಯಾ ನೀರು ನೀಡಲು ಮುಂದಾಗ್ತಿಲ್ಲ. ನಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಬೇಕು, ನೀರು ನೀಡಲು ಸಾಧ್ಯವಿಲ್ಲವೆಂದು ಕ್ಯಾಲಿಫೋರ್ನಿಯಾ ಸರ್ಕಾರ ಹೇಳ್ತಿದೆ. ಯಾವುದೇ ಕಾರಣಕ್ಕೂ ಜಲಕಡಿತ ಮಾಡೋದಿಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ನೀರು ಸಂವಿಧಾನದ ಹಕ್ಕು. ಬೇರೆ ರಾಜ್ಯಗಳಿಗೆ ನೀರು ನೀಡಿದ್ರೆ ನಮಗೆ ಸಮಸ್ಯೆಯಾಗುತ್ತೆ ಎಂದು ಸರ್ಕಾರ ಹೇಳ್ತಿದೆ. ಹಿಂದಿನ ವರ್ಷ 7 ಬಾರಿ ದೊಡ್ಡ ಪ್ರಮಾಣದ ಮಳೆಯಾಗಿದೆ. ಆದ್ರೆ ನದಿ ಕಣಿವೆಗೆ ಬಹಳ ಕಡಿಮೆ ನೀರು ತಲುಪಿದೆ. ಇದ್ರಿಂದಾಗಿ ನೀರಿನ ಸಮಸ್ಯೆ ಹೆಚ್ಚಾಗಿದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!