
ಉತ್ತರ ಪ್ರದೇಶ(ಮೇ 03 ) ಊಟ ಸರಿಯಾಗಿಲ್ಲ, ಹಣ ಕೊಟ್ಟಿಲ್ಲ.. ಮೊದಲೇ ಲವರ್ ಇದ್ದ.. ಹೀಗೆ ಹಲವು ಕಾರಣಕ್ಕೆ ಮದುವೆ ಮುರಿದು ಬೀಳುವುದನ್ನು ಕಂಡಿದ್ದೇವೆ. ಆದರೆ ಇದು ಅದೆಲ್ಲದಕ್ಕಿಂತ ವಿಚಿತ್ರವಾದ ಕತೆ.
ವರನು 2 ರ ಮಗ್ಗಿ ಹೇಳಲು ವಿಫಲವಾದ ಕಾರಣಕ್ಕೆ ವಿವಾಹ ರದ್ದಾಗಿದೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪನ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಧು ವಿವಾಹ ಬೇಡ ಎಂದು ಹೊರಟು ಹೋಗಿದ್ದಾಳೆ.
ಧಾರೆ ಸೀರೆ ಬಾರ್ಡರ್ ಸರಿ ಇಲ್ಲ; ಮದುವೆ ಕ್ಯಾನ್ಸಲ್
ಶನಿವಾರ ಸಂಜೆ ತಮ್ಮ ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿದ್ದು ಆ ಸಂದರ್ಭದಲ್ಲೇ ವರನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನ ಹೊಂದಿದ್ದ ವಧು, ಹೂಮಾಲೆ ಹಾಕುವುದಕ್ಕೂ ಮೊದಲು 2 ನೇ ಮಗ್ಗಿ ಹೇಳಲು ಕೇಳಿದ್ದಾಳೆ. ಆದರೆ ವರನಿಗೆ ಮಗ್ಗಿ ಹೇಳಲು ಸಾಧ್ಯವಾಗಿಲ್ಲ. ಸಿಟ್ಟು ಮಾಡಿಕೊಂಡ ವಧು ವಿವಾಹ ರದ್ದು ಮಾಡಿದ್ದಾರೆ.
ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಪೋಷಕರು ನೋಡಿ ಗೊತ್ತು ಮಾಡಿರುವ ವಿವಾಹವಾಗಿದ್ದು, ವರ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವ ಎಂಬ ಮಾಹಿತಿ ನೀಡಿದ್ದಾರೆ.
ವರ ಅಶಿಕ್ಷಿತ ಎಂದು ತಿಳಿದು ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ವಧುವಿನ ಸೋದರಸಂಬಂಧಿ ಆಘಾತ ವ್ಯಕ್ತಪಡಿಸಿದರು. ವರನ ಕುಟುಂಬವು ಅವನ ಶಿಕ್ಷಣದ ಬಗ್ಗೆ ನಮ್ಮಲ್ಲಿ ಸುಳ್ಳು ಹೇಳಿತ್ತು. ಅವನು ಶಾಲೆಗೆ ಹೋಗದೆಯೂ ಇರಬಹುದು. ವರನ ಕುಟುಂಬವು ನಮಗೆ ಮೋಸ ಮಾಡಿದೆ ಎನ್ನುವುದು ವಧುವಿನ ಕುಟುಂಬಸ್ಥರ ಆರೋಪ. ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಂಡಿದ್ದು ಆಭರಣಗಳನ್ನು ಹಿಂದಕ್ಕೆ ನೀಡಲು ಕುಟುಂಬಗಳು ಒಪ್ಪಿಕೊಂಡಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.