ಯಾರೆಲ್ಲಾ ಲಸಿಕೆ ಪಡೆಯೋದು ಡೇಂಜರ್?

By Suvarna News  |  First Published May 3, 2021, 3:05 PM IST

ಕೊರೋನಾ ಲಸಿಕೆ ಬಗ್ಗೆ ಹಲವರಿಗೆ ಗೊಂದಲ| ಯಾರೆಲ್ಲಾ ಲಸಿಕೆ ಪಡೆಯೋದು ಡೇಂಜರ್? 2ನೇ ಡೋಸ್‌ ಬಳಿಕ ಸೋಂಕು ತಗುಲಿದ್ರೆ ಏನ್ಮಾಡೋದು?| ಇಲ್ಲಿದೆ ಎಲ್ಲಾ ಗೊಂದಲಗಳಿಗೆ ಉತ್ತರ


ನವದೆಹಲಿ(ಮೇ.03): ಕೊರೋನಾ ಸೋಂಕು ದೇಶದಲ್ಲಿ ಅಬ್ಬರಿಸುತ್ತಿದೆ. ಈ ನಡುವೆಯೂ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಹೀಗಿದ್ದರೂ ಅನೇಕ ರಾಜ್ಯಗಳಲ್ಲಿ ಲಸಿಕೆ ಕೊರತೆ ಕಂಡು ಬಂದಿದ್ದು, ಹದಿನೆಂಟು ವರ್ಷಕ್ಕೂ ಮೇಲಿನವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ. ಸರ್ಕಾರ ಹಾಗೂ ಆಡಳಿತಾಧಿಕಾರಿಗಳು ಜನರ ಬಳಿ ಲಸಿಕೆ ಪಡೆಯಲು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಯಾರೆಲ್ಲಾ ಲಸಿಕೆ ಪಡೆಯಬಾರದು? ಯಾರು ಲಸಿಕೆ ಪಡೆದರೆ ಅಪಾಯ? ಇಲ್ಲಿದೆ ವಿವರ

ಈ ಸಮಸ್ಯೆ ಇದ್ದರೆ ಕೆಲ ಸಮಯ ಕಾದು ಲಸಿಕೆ ಪಡೆಯಿರಿ

Tap to resize

Latest Videos

undefined

* ಮೊನೋಕ್ಲೋನಲ್ ಆಂಟಿಬಾಡಿ ಅಥವಾ ಪ್ಲಾಸ್ಮಾ ಥೆರಪಿಗೊಳಪಟ್ಟವರು ಕೆಲ ಸಮಯ ಕಾದು ಬಳಿಕ ಲಸಿಕೆ ಪಡೆಯಬೇಕು. 

* ಪ್ಲೇಟ್‌ಲೇಟ್‌ ಕಡಿಮೆ ಇದ್ದವರು ಅಥವಾ ಸ್ಟೆರಾಯ್ಡ್ ಚಿಕಿತ್ಸೆ ಪಡೆದವರೂ ಕೆಲ ಸಮಯ ಕಾದು ವ್ಯಾಕ್ಸಿನ್ ಪಡೆಯಿರಿ.

* ಕೊರೋನಾ ಸೋಂಕಿತರಾಗಿ ಸಂಪೂರ್ಣವಚಾಗಿ ಗುಣಮುಖರಾಗದವರು. ಗುಣಮುಖರಾಗಿ ಕನಿಷ್ಟ ಪಕ್ಷ ಮೂರರಿಂದ ನಾಲ್ಕು ವಾರದ ಬಳಿಕ ಲಸಿಕೆ ಪಡೆಯಿರಿ.

ಇವರೆಲ್ಲಾ ಲಸಿಕೆ ಪಡೆಯುವುದು ಸರಿಯಲ್ಲ

* ಯಾವುದಾದರೂ ಖಾದ್ಯ ಅಥವಾ ಔಷಧಿ ಅಲರ್ಜಿ ಇದ್ದವರು ಲಸಿಕೆ ಪಡೆಯಬಾರದು

* ಹದಿನೆಂಟು ವರ್ಷಕ್ಕಿಂತ ಕೆಳಗಿನವರು ಲಸಿಕೆ ಪಡೆಯುವಂತಿಲ್ಲ

* ಗರ್ಭಿಣಿ ಮಹಿಳೆಯರು ಹಾಗೂ ಎದೆಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯುವಂತಿಲ್ಲ

"

ಎಷ್ಟು ದಿನಗಳಾದ ಬಳಿಕ ಡೋಸ್‌ ಪಡೆಯಬೇಕು?

ಕೋವಿಶೀಲ್ಡ್‌ನ ಎರಡು ಡೋಸ್ಗಳ ನಡುವಿನ ಅಂತರ  6-8 ವಾರ ಇರಬೇಕು. ಇನ್ನು ನೀವು ಪಡೆಯುವ ಲಸಿಕೆ ಕೋವ್ಯಾಕ್ಸಿನ್ ಆದರೆ ಎರಡು ಡೋಸ್‌ಗಳ ನಡುವಿನ ಅಂತರ  4-6 ವಾರ ಇರಬೇಕು.

ಮೊದಲ ಡೋಸ್‌ ಪಡೆದ ಬಳಿಕ ಕೊರೋನಾ ಸೋಂಕು ತಗುಲಿದರೆ?

ಒಂದು ವೇಳೆ ಮೊದಲ ಡೋಸ್‌ ಪಡೆದ ಬಳಿಕ ಕೊರೋನಾ ಸೋಂಕು ಕಾಣಿಸಿಕೊಂಡರೆ, ಇಂತಹ ಸ್ಥಿತಿಯಲ್ಲಿ ಕೊರೋನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವೇ ಪಡೆದುಕೊಳ್ಳಬೇಕು. ಅಲ್ಲದೇ ಚೇತರಿಸಿಕೊಂಡ 4-8 ವಾರದ ಬಳಿಕವೇ ಲಸಿಕೆ ಪಡೆಯಿರಿ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!