ಜನಪ್ರಿಯ ಫೇರ್ ಅಂಡ್ ಲವ್ಲಿ ಕ್ರೀಮ್ ಹೆಸರು ಅಧೀಕೃತವಾಗಿ ಬದಲಾಗಿದೆ. ಇದೀಗ ಗ್ಲೋ ಅಂಡ್ ಲವ್ಲಿ ಹೆಸರಿನಲ್ಲಿ ಕ್ರೀಮ್ ಬಿಡುಗಡೆಯಾಗಲಿದೆ. ಹೆಸರಿನ ಬದಲಾವಣೆಗೆ ಅಮೆರಿಕದಲ್ಲಿ ನಡೆದ ಪ್ರತಿಭಟನೆ ಕಾರಣ
ನವದೆಹಲಿ(ಜೂ.03): ವರ್ಣಭೇದಕ್ಕೆ ಕುಮ್ಮಕ್ಕು ನೀಡುವ ಆರೋಪ ಹೊತ್ತಿದ್ದ ಫೇರ್‌ನೆಸ್ ಕ್ರೀಂ ‘ಫೇರ್ ಆ್ಯಂಡ್ ಲವ್ಲಿ’ ಹೆಸರು ಬದಲಾಗಿದೆ. ಇನ್ನು ಮುಂದೆ ‘ಫೇರ್ ಆ್ಯಂಡ್ ಲವ್ಲಿ’ಯ ಹೆಸರನ್ನು ‘ಗ್ಲೋ ಆ್ಯಂಡ್ ಲವ್ಲಿ’ ಎಂದು ಬದಲಿಲಾಗಿದೆ ಎಂದು ಇದನ್ನು ಉತ್ಪಾದಿಸುವ ಹಿಂದುಸ್ತಾನ್ ಯುನಿಲಿವರ್ ಕಂಪನಿ ಗುರುವಾರ ಹೇಳಿದೆ. ಮಹಿಳೆಯರ ಫೇರ್‌ನೆಸ್ ಕ್ರೀಂ ಅನ್ನು ಗ್ಲೋ ಆ್ಯಂಡ್ ಲವ್ಲಿ ಎಂದೂ ಪುರುಷರ ಕ್ರೀಂ ಅನ್ನು ‘ಗ್ಲೋ ಆ್ಯಂಡ್ ಹ್ಯಾಂಡ್‌ಸಮ್’ ಎಂದೂ ನಾಮಕರಣ ಮಾಡಲಾಗಿದೆ ಎಂದು ಯುನಿಲಿವರ್ ಕಂಪನಿ ಹೇಳಿದೆ.
ಫೇರ್ & ಲವ್ಲೀ ಹೆಸರು ಇನ್ನು ಗ್ಲೋ & ಲವ್ಲೀ..?
undefined
ಜೂನ್ 25ರಂದೇ ಈ ಬಗ್ಗೆ ಘೋಷಣೆ ಮಾಡಿದ್ದ ಹಿಂದುಸ್ತಾನ್ ಯುನಿಲಿವರ್, ‘ಫೇರ್ ಆ್ಯಂಡ್ ಲವ್ಲಿ’ ಬ್ರಾಂಡ್ ಹೆಸರಿನಿಂದ ‘ಫೇರ್’ ಹೆಸರನ್ನು ತೆಗೆದುಹಾಕುವುದಾಗಿ ತಿಳಿಸಿತ್ತು.
ಫೇರ್ ಆ್ಯಂಡ್ ಲವ್ಲಿ ಸೇರಿದಂತೆ ಕೆಲವು ಉತ್ಪನ್ನಗಳು ಚರ್ಮದ ಬಣ್ಣ ಕಪ್ಪಿನಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ಜಾಹೀರಾತಿನಲ್ಲಿ ಹೇಳುತ್ತಿದ್ದವು. ಇದರಿಂದ ಕಪ್ಪುವರ್ಣೀಯರನ್ನು ಅವಹೇಳನ ಮಾಡಿದಂತಾಗುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಅಮೆರಿಕದಲ್ಲಿ ನಡೆದ ಬ್ಲಾಕ್ ಲೀವ್ಸ್ ಮ್ಯಾಟರ್ಸ್ ಪ್ರತಿಭಟನೆ ಬಳಿಕ ಹಿಂದೂಸ್ತಾನ್ ಯುನಿಲಿವರ್ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಕಪ್ಪು ವರ್ಣೀಯನೊಬ್ಬನ್ನು ಅಮೆರಿಕ ಪೊಲಿಸರು ಹತ್ಯೆ ಮಾಡಿದ ಬೆನ್ನಲ್ಲೇ ಪ್ರತಿಭಟನೆ ಆರಂಭಗೊಂಡಿತ್ತು. ಹಿಂಸ್ಮಾ ರೂಪ ಪಡೆದ ಪ್ರತಿಭಟನೆ ವಿಶ್ವದಲ್ಲೇ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಆಂದೋಲನವೇ ನಡೆಯುತ್ತಿದೆ.